Advertisement

ಪೊಲೀಸ್‌ ವರ್ಗಾವಣೆಗೆ ಹೊಸ ನಿಯಮಾವಳಿ: ಪರಂ

11:39 AM May 06, 2017 | Team Udayavani |

ಬೀದರ: ಹೊಸದಾಗಿ ನೇಮಕಗೊಳ್ಳುವ ಪೊಲೀಸ್‌ ಅಧಿಕಾರಿಗಳು ಪರೀಕ್ಷಾರ್ಥ ಅವಧಿ ಪೂರ್ಣಗೊಳಿಸಿದ ಬಳಿಕ ಆ ಪ್ರದೇಶದಲ್ಲೇ ಇಂತಿಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಹೊಸ ನಿಯಮಾವಳಿ ರೂಪಿಸಲಾಗುತ್ತಿದ್ದು, ಇದಕ್ಕಾಗಿ ಕರಡು ಪ್ರತಿ ಸಿದ್ಧಗೊಳ್ಳುತ್ತಿದೆ. ಇದರಿಂದ ಅಧಿಕಾರಿಗಳ ಕೊರತೆ ನೀಗಿಸಲು ಸಾಧ್ಯವಾಗುತ್ತದೆ ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸರ ವರ್ಗಾವಣೆಯನ್ನು ನಿಯಮದಂತೆ
ಮಂಡಳಿಯೇ ಮಾಡುತ್ತದೆ. ಮಂಡಳಿಗೆ ಸಂಪೂರ್ಣ ಸ್ವಾತಂತ್ರ ಇದೆ. ಇದರಲ್ಲಿ ಈಗ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ. ಆದರೆ, ಕೆಲವು ಹಂತದಲ್ಲಿ ಸರ್ಕಾರವೇ ವರ್ಗಾವಣೆ ಮಾಡುತ್ತದೆ. ಪೊಲೀಸ್‌ ಅಧಿಕಾರಿಗಳ ವರ್ಗಾವಣೆಯಲ್ಲಿ
ಹಸ್ತಕ್ಷೇಪ ಕುರಿತು ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದಲ್ಲಿ ಕಾನೂನು ಪ್ರಕಾರ ತನಿಖೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.

ಪೊಲೀಸ್‌ ಸೇವೆಯನ್ನು ಜನಸ್ನೇಹಿಯಾಗಿಸುವ ದಿಸೆಯಲ್ಲಿ ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಹೊಸದಾಗಿ ಜಾರಿಗೆ ತಂದಿರುವ ಸಬ್‌ ಬಿಟ್‌ ವ್ಯವಸ್ಥೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಬರುವ ದಿನಗಳಲ್ಲಿ ಈ ಯೋಜನೆಯನ್ನು ಹೆಚ್ಚು
ವ್ಯವಸ್ಥಿವಾಗಿ ರೂಪಿಸಲಾಗುವುದು. ಪ್ರತಿ ಠಾಣೆಗಳನ್ನು ಕಂಪ್ಯೂಟರೀಕರಣ ಗೊಳಿಸಿ ಇಂಟರ್‌ನೆಟ್‌ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಿಂದ ಅಪರಾಧ ಪ್ರಕರಣಗಳ ಕುರಿತು ಇಡೀ ರಾಜ್ಯದ ಮಾಹಿತಿ ಲಭ್ಯವಾಗಲಿದೆ ಎಂದು
ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next