Advertisement
ಗೃಹಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಲಭಿಸಿದ ಬಳಿಕ ಜಿಲ್ಲೆಗೆ ಆಗಮಿಸುತ್ತಿಲ್ಲ ಎಂಬ ದೂರುಗಳಿದ್ದರೂ ಕೊರೊನಾ ನಿರ್ವಹಣೆ ಸಹಿತ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಅವರು ತೆಗೆದುಕೊಂಡು ನಿರ್ಧಾರಗಳು ಮಹತ್ತರವಾದ ಪಾತ್ರ ವಹಿಸಿವೆ.
Related Articles
Advertisement
ಕೊರೊನಾ ಸಂದಿಗ್ಧ ಸ್ಥಿತಿಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ಸುಸಜ್ಜಿತ ಕೋವಿಡ್ ಟೆಸ್ಟಿಂಗ್ ಲ್ಯಾಬ್ ನಿರ್ಮಾಣ ಮಾಡಿ ದಿನವೊಂದಕ್ಕೆ 3 ಸಾವಿರಕ್ಕೂ ಅಧಿಕ ಪರೀಕ್ಷೆ ನಡೆಸುವಂತೆ ಕ್ರಮ ತೆಗೆದುಕೊಂಡಿದ್ದರು. ಜಿಲ್ಲೆಯ ಕಾರ್ಕಳ, ಕುಂದಾಪುರ, ಉಡುಪಿಯ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವಲ್ಲಿಯೂ ಇವರ ಪಾತ್ರ ಹೆಚ್ಚಿನದು. ದೇಶಾದ್ಯಂತ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾದಾಗ ರಾಜ್ಯ ಹಾಗೂ ಮುಖ್ಯವಾಗಿ ಉಡುಪಿ ಜಿಲ್ಲೆಗೆ ಯಾವುದೇ ಕೊರತೆಯಾಗದಂತೆ ಸಕಲ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದರು. ಉಡುಪಿ, ಕಾರ್ಕಳ, ಕುಂದಾಪುರದಲ್ಲಿ ಲಿಕ್ವಿಡ್ ಆಕ್ಸಿಜನ್ ಘಟಕಗಳನ್ನು ನಿರ್ಮಿಸಿ ತೊಂದರೆಯಾಗದಂತೆ ನೋಡಿಕೊಂಡಿದ್ದರು.
ಹೆಜಮಾಡಿ ಬಂದರು, ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ:
ಉಡುಪಿ ಜಿಲ್ಲೆಯ ಬಹುಕಾಲದ ಕನಸಾಗಿದ್ದ ಹೆಜಮಾಡಿ ಬಂದರು ಅಭಿವೃದ್ಧಿಗೆ ಅನುದಾನ ಮೀಸಲು ಹಾಗೂ ಉಡುಪಿ ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು 180 ಕೋ.ರೂ.ಗಳನ್ನು ಮೀಸಲಿರಿಸಲಾಗಿದೆ. ಬೊಮ್ಮಾಯಿ ಅವರು ಖುದ್ದು ಭೇಟಿ ನೀಡಿ ರೂಪರೇಖೆ ಸಿದ್ಧªಪಡಿಸುವಲ್ಲಿ ಸಹಕರಿಸಿದ್ದರು. ಪಡುಬಿದ್ರಿಯ ಬೀಚ್ ಬ್ಲೂ$Âಫ್ಲಾ$Âಗ್ ಪ್ರಮಾಣ ಪತ್ರ ಪಡೆದು ಅಂತಾರಾಷ್ಟ್ರಿಯ ಮಾನ್ಯತೆ ಲಭಿಸಿದ್ದು, ಬೊಮ್ಮಾಯಿ ಅವರು ಉಸ್ತುವಾರಿ ವಹಿಸಿಕೊಂಡ ಬಳಿಕ ಎಂಬುದು ಗಮನಾರ್ಹ.
ಜಿಲ್ಲೆಯ ಕೆಲಸ ಕಾರ್ಯಗಳಿಗೆ ಮತ್ತಷ್ಟು ವೇಗ ನಿರೀಕ್ಷೆ :
ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿದ್ದ ಸಂದರ್ಭದಲ್ಲಿಯೇ ಜಿಲ್ಲೆಯ ಕೆಲಸ ಕಾರ್ಯಗಳು ಉಸ್ತುವಾರಿ ಸಚಿವರ ಮುತುವರ್ಜಿಯಲ್ಲಿ ನಡೆಯುತ್ತಿದ್ದವು. ಉಸ್ತುವಾರಿ ಸಚಿವರಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಗ್ರ ಮಾಹಿತಿಯನ್ನು ಬೊಮ್ಮಾಯಿ ಅವರು ಹೊಂದಿದ್ದಾರೆ. ಈಗ ಮುಖ್ಯಮಂತ್ರಿ ಸ್ಥಾನಕ್ಕೇರಿದ ಕಾರಣ ಜಿಲ್ಲೆಯ ಕೆಲಸಕಾರ್ಯಗಳು ಮತ್ತಷ್ಟು ಸುಲಲಿತವಾಗಿ ನಡೆಯಲು ಪೂರಕವಾದೀತು ಎಂಬುದು
ಜಿಲ್ಲೆಯ ಜನತೆಯ ಆಶಾವಾದ.
ಉಡುಪಿಗೆ ಸಚಿವ ಸ್ಥಾನ ? :
ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳಾದವರ ಅದೃಷ್ಟ ಚೆನ್ನಾಗಿದೆ ಎಂದರೆ ತಪ್ಪಾಗದು. ಸಂಸದರಾಗಿದ್ದವರು ಕೇಂದ್ರ ಸಚಿವರಾದರು, ಉಸ್ತುವಾರಿ ಸಚಿವರಾಗಿದ್ದವರು ಮುಖ್ಯಮಂತ್ರಿ ಯಾದರು. ಆದರೆ ಜಿಲ್ಲೆಯಲ್ಲಿರುವ ಐವರು ಶಾಸಕರ ಪೈಕಿ ಯಾರೊಬ್ಬರಿಗೂ ಸಚಿವ ಸ್ಥಾನ ಸಿಗಲಿಲ್ಲ ಎಂಬ ಕೊರಗು ಇದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಶಾಸಕರೊಬ್ಬರಿಗೂ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿವೆ ಎನ್ನುತ್ತವೆ ಪಕ್ಷದ ಮೂಲಗಳು.
-ಪುನೀತ್ ಸಾಲ್ಯಾನ್