Advertisement
ಈ ಥಿಯೇಟರ್‌ನಿಂದಾಗಿ ಕಾರ್‌ಸ್ಟ್ರೀಟ್ ಹಾಗೂ ಕುದ್ರೋಳಿಯ ಮಧ್ಯದ ಸ್ಥಳದ ಹೆಸರೇ ನ್ಯೂಚಿತ್ರಾ ಎಂದಾಗಿತ್ತು. ಇನ್ನು, ತಿಂಗಳ ಹಿಂದೆಯಷ್ಟೇ ಮಂಗಳೂರಿನ ಹೆಸರಾಂತ ಇನ್ನೊಂದು ಚಿತ್ರಮಂದಿರ ಪ್ಲಾಟಿನಂ ಕೂಡ ಇತಿಹಾಸ ಪುಟಕ್ಕೆ ಸೇರಿತ್ತು.
ಬ್ರಹ್ಮಾವರದ ಕೊಚ್ಚಿಕಾರ್ ವಿಠಲದಾಸ್ ಪೈ ಅವರು ಮಂಗಳೂರಿನಲ್ಲಿ ಪಾಲುದಾರರೊಬ್ಬರೊಂದಿಗೆ 1926ರಲ್ಲಿ “ಹಿಂದೂಸ್ಥಾನ್ ಸಿನೆಮಾ’ ಎಂಬ ಚಿತ್ರಮಂದಿರವನ್ನು ಪ್ರಥಮವಾಗಿ ಜಿಲ್ಲೆಯಲ್ಲಿ ಶುರುಮಾಡಿದ್ದರು. ಆಗಿನ ಕಾಲಕ್ಕೆ ಇದು ಸಾಕಷ್ಟು ಹೆಸರು ಮಾಡಿತ್ತು. ಥಿಯೇಟರ್‌ನಲ್ಲಿಯೇ ಹಿನ್ನೆಲೆ ಸ್ವರ..!
ಪ್ರಾರಂಭದಲ್ಲಿ ಮೂಕಿ ಚಿತ್ರಗಳ ಪ್ರದರ್ಶನ ಇಲ್ಲಿದ್ದು, ಇದಕ್ಕೆ ಪ್ರದರ್ಶನದ ವೇಳೆ ಪ್ರೇಕ್ಷಕರ ಜತೆಯಲ್ಲೇ ಇಬ್ಬರು-ಮೂವರು ಕುಳಿತು ಹಿನ್ನೆಲೆ ಧ್ವನಿಯನ್ನು ನೀಡುತ್ತಿದ್ದರು. ಟಾಕಿ ಚಿತ್ರಗಳು ಬಂದ ನಂತರ ಥಿಯೇಟರನ್ನು ಕೆ.ವಿಠಲದಾಸ್ ಪೈ ಅವರು ತನ್ನ ಸ್ವಾಧೀನಕ್ಕೆ ಪಡೆದಿದ್ದು, 1936ರಲ್ಲಿ ಶ್ರೀಚಿತ್ರಾ ಟಾಕೀಸ್ ಹೆಸರಲ್ಲಿ ಪುನಃಸ್ಥಾಪಿಸಿದ್ದರು. ಪ್ರಥಮ ಬಾರಿಗೆ ಇದರಲ್ಲಿ ಹಿಂದಿ ಚಿತ್ರ “ಮುಕ್ತಿ’ ಪ್ರದರ್ಶನಗೊಂಡಿತ್ತು. ಬಳಿಕ ಹೆಚ್ಚಾಗಿ ಇಂಗ್ಲಿಷ್ ಚಿತ್ರಗಳೇ ಇಲ್ಲಿ ಪ್ರದರ್ಶಿತವಾಗುತ್ತಿತ್ತು. ತಮಿಳು, ಹಿಂದಿ ಚಿತ್ರಗಳೂ ಪ್ರದರ್ಶನಗೊಂಡಿವೆ.
Related Articles
1973ರಲ್ಲಿ ಚಿತ್ರ ಮಂದಿರ ನವೀಕರಣಗೊಳಿಸಿ ನ್ಯೂಚಿತ್ರಾ ಹೆಸರಲ್ಲಿ ವಿಠಲದಾಸ್ ಪೈ ಅವರ ಮಕ್ಕಳು ಉದ್ದಿಮೆ ಮುಂದುವರಿಸಿದ್ದರು.
Advertisement
“ಟೈಟಾನಿಕ್’ ಹಾಗೂ “ಎಂಟರ್ ದಿ ಡ್ರ್ಯಾಗನ್’ ಎಂಬ ಇಂಗ್ಲಿಷ್ ಚಿತ್ರವನ್ನು ಇಲ್ಲಿ ಅತಿ ಹೆಚ್ಚು ಪ್ರೇಕ್ಷಕರು ವೀಕ್ಷಿಸಿದ್ದಾರೆ. “ರಾಮ್ ತೇರಿ ಗಂಗಾ ಮೈಲಿ’ ಹಿಂದಿ ಚಿತ್ರದಂತೆ ಕನ್ನಡ ತಮಿಳು, ತೆಲುಗು ಭಾಷೆಯ ಹೆಸರುವಾಸಿ ಚಿತ್ರಗಳನ್ನು ಜನ ಇಲ್ಲಿ ನೋಡಿದ್ದಾರೆ.
“ಸಂತ ಜ್ಞಾನೇಶ್ವರ’ ಎಂಬ ಹಿಂದಿ ಚಿತ್ರವು ಇಲ್ಲಿ ಬಹಳ ಸಮಯ ಪ್ರದರ್ಶನಗೊಂಡಿತ್ತು. ಸುಮಾರು 572 ಆಸನಗಳಿರುವ ಈ ಚಿತ್ರಮಂದಿರದ ಆಡಳಿತವನ್ನು ಕೆ.ವಿಠಲದಾಸ್ ಪೈ ಅವರ ಮೂರನೇ ತಲೆಮಾರಿನವರಾದ ಕೆ.ದೇವದಾಸ್ ಪೈ ಹಾಗೂ ಶಂಕರ್ ಪೈ ಸಹೋದರರು ಪ್ರಸ್ತುತ ನಡೆಸುತ್ತಿದ್ದಾರೆ. ಮದುವೆಯೂ ಆಗಿತ್ತು ಥಿಯೇಟರ್‌ನಲ್ಲಿ..!
ಮಂಗಳೂರಿನಲ್ಲಿ ಸೂಕ್ತ ಸಭಾಂಗಣ ಇಲ್ಲದಿರುವ ಆಗಿನ ಕಾಲದಲ್ಲಿ ನ್ಯೂಚಿತ್ರಾ ಥಿಯೇಟರ್ ಮದುವೆಗೂ ವೇದಿಕೆ ಒದಗಿಸಿತ್ತು. ಭೀಮ್‌ಸೇನ್ ಜೋಶಿಯವರ ಸಂಗೀತ ಕಾರ್ಯಕ್ರಮ, ಡಾ| ರಾಜ್‌ಕುಮಾರ್ ಅಭಿನಯದ ನಾಟಕ ಪ್ರದರ್ಶನಗಳೂ ನಡೆದಿದ್ದವು. ಕಳೆದೊಂದು ತಿಂಗಳಿಂದ ಸಿನೆಮಾ ಪ್ರದರ್ಶನ ನಿಲ್ಲಿಸಲಾಗಿದೆ. ಮಾರುಕಟ್ಟೆ ಕುಸಿತ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಮುಂದಿನ ತೀರ್ಮಾನ ಶೀಘ್ರ ಕೈಗೊಳ್ಳಲಿದ್ದೇವೆ.
ಶಂಕರ್ ಪೈ, ಆಡಳಿತ ಪಾಲುದಾರರು -ನ್ಯೂ ಚಿತ್ರಾ ಟಾಕೀಸ್ – ದಿನೇಶ್ ಇರಾ