Advertisement
ಹೊಸ ವರ್ಷ ಇನ್ನೇನು ಕೆಲ ದಿನಗಳಲ್ಲೇ ಆರಂಭವಾಗಲಿದ್ದು, ಈ ಋತುವಿನಲ್ಲಿ ಯಾವೆಲ್ಲ ಹೊಸ ಕಾರುಗಳು ಬಿಡುಗಡೆಯಾಗಲಿವೆ ಎಂಬ ಕುತೂಹಲ ಎಲ್ಲರಲ್ಲಿದೆ. ಅದರಲ್ಲಿಯೂ, ಯಾವೆಲ್ಲ ಕಂಪೆನಿಯ ಕಾರುಗಳು ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿವೆ, ಯಾವ ಕಾರಿನಲ್ಲಿ ಹೊಸ ವೈಶಿಷ್ಟ್ಯಗಳಿರಲಿದೆ ಎಂಬೆಲ್ಲ ಕುತೂಹಲಗಳು ಆಟೋಮೊಬೈಲ್ ಕ್ಷೇತ್ರದಲ್ಲಿದೆ. 2020ರಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗುವ ಕೆಲವು ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಟಾಟಾ ಮೋಟಾರ್ಸ್ ಬಹುನಿರೀಕ್ಷಿತ ಹ್ಯಾಚ್‌ಬ್ಯಾಕ್ ಅಲ್ಟ್ರೋಝ್ ಕಾರಿನ ಟೀಸರ್ ಈಗಾಗಲೇ ಬಿಡುಗಡೆ ಮಾಡಿದ್ದು ಎಲ್ಲರ ಗಮನಸೆಳೆಯುತ್ತಿದೆ. ನೂತನ ಕಾರು 2020ರ ವೇಳೆ ಬಿಡುಗಡೆಯಾಗಲಿದೆ. ಈ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್, ಹೈ ವೇರಿಯೆಂಟ್ ಟಬೋìಚಾರ್ಜಡ್ ಎಂಜಿನ್ ಹೊಂದಿರಲಿದೆ. ಡೀಸೆಲ್ ವೇರಿಯೆಂಟ್ 1.5 ಲೀಟರ್ ಎಂಜಿನ್ ಹೊಂದಿರಲಿದೆ. ಇನ್ನು, ಬಿಎಸ್3 ಎಮಿಶನ್ ನಿಯಮಕ್ಕೆ ಒಳಪಟ್ಟಿದೆ. ಟಿಯುವಿ 300 ಪ್ಲಸ್
ಮಹೀಂದ್ರಾ ಸಂಸ್ಥೆಯು ಟಿಯುವಿ 300 ಪ್ಲಸ್ ಎಂಬ ಕಾರನ್ನು 2020ರಲ್ಲಿ ಬಿಡುಗಡೆ ಮಾಡಲು ತಯಾರಾಗಿದೆ. ಈ ಕಾರು ಬಿಎಸ್-6 ಎಂಜಿನ್ ಹೊಂದಿದ್ದು, ಮುಂಭಾಗದಲ್ಲಿ ಹೊಸ ಆಕರ್ಷಕ ವಿನ್ಯಾಸವನ್ನು ಹೊಂದಿರಲಿದೆ. ಪವರ್‌ಫುಲ್ ಹೆಡ್‌ಲೈಟ್‌ನೊಂದಿಗೆ ಫಾಗ್‌ಲೈಟ್ ಕೂಡ ಅಳವಡಿಸಲಾಗಿದೆ. ಕಾರಿನ ಮುಂಭಾಗದಲ್ಲಿ ಬಂಪರ್ ಸುತ್ತ ವಿಭಿನ್ನ ಶೈಲಿಯಿಂದ ಕೂಡಿರಲಿದೆ.
Related Articles
ಅದೇ ರೀತಿ, ಟಾಟಾ ಸಂಸ್ಥೆಯ ಬಹುನಿರೀಕ್ಷಿತ 7 ಸೀಟರ್ ಎಸ್‌ಯುವಿ ಮಾದರಿಯ “ಕ್ಯುಸನಿ’ ಹೆಸರಿನ ಕಾರು 2020ರ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಸುಮಾರು 18 ಲಕ್ಷ ರೂ.ನಿಂದ 25 ಲಕ್ಷ ರೂ.ವರೆಗೆ ದರ ಇರಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಟಾಟಾ ಸಂಸ್ಥೆಯ ಎಚ್2ಎಕ್ಸ್ (ಹಾರ್ ವ್ಹೀಲ್) ಮಾದರಿಯ ಕಾರು ಕೂಡ 2020ರಲ್ಲಿ ಬಿಡುಗಡೆಯಾಗಲಿದೆ.
Advertisement
ಬಿಎಸ್-6 ಹೋಂಡಾ ಸಿಟಿಪ್ರಮುಖ ಕಾರು ಉತ್ಪಾದನಾ ಸಂಸ್ಥೆಯಾದ ಹೋಂಡಾವು ಈಗಾಗಲೇ ಬಿಎಸ್-6 ಹೋಂಡಾ ಸಿಟಿ ಪೆಟ್ರೋಲ್ ಕಾರನ್ನು ಬಿಡುಗಡೆಗೊಳಿಸಿದೆ. ಇದು ಸೆಡಾನ್ ಮಾದರಿಯ ಕಾರುಗಳಲ್ಲಿ ಒಂದಾಗಿದ್ದು, ಇದೀಗ 2020ರಲ್ಲಿ ಬಿಎಸ್-6 ನಿಬಂಧನೆಯಲ್ಲಿ ಡೀಸೆಲ್ ಆವೃತ್ತಿಯ ಕಾರು ಬಿಡುಗಡೆಗೊಳಿಸಲು ಸಜ್ಜಾಗಿದೆ. ಪೆಟ್ರೋಲ್ ಆವೃತ್ತಿಗಿಂತ ಡೀಸೆಲ್ ಆವೃತ್ತಿಗೆ ಬೆಲೆ ಕೊಂಚ ಜಾಸ್ತಿ ಇರಲಿದೆ ಎಂದು ಹೇಳ ಲಾಗುತ್ತಿದೆ. ಕುತೂಹಲ ಮೂಡಿಸಿದೆ ಎಲೆಕ್ಟ್ರಿಕ್ ಕಾರುಗಳು
ಭಾರತವು ಎಲೆಕ್ಟ್ರಿಕ್ ವಾಹನ ಉತ್ಪಾದನೆಯತ್ತ ಮೊರೆ ಹೋಗುತ್ತಿದೆ. ಈಗಾಗಲೇ ಹಲವು ಎಲೆಕ್ಟ್ರಿಕ್ ವಾಹನಗಳು ಭಾರತದಲ್ಲಿ ಬಿಡುಗಡೆಯಾಗಿವೆ. 2020ರಲ್ಲಿ ಬಹುತೇಕ ಎಲ್ಲ ಕಾರು ಕಂಪೆನಿಗಳು ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಲು ತಯಾರಾಗಿವೆ. ಈ ಬಗ್ಗೆ ಗ್ರಾಹಕರಲ್ಲಿ ಕುತೂಹಲ ಇದೆ. ಇದೀಗ ಟಾಟಾ ಮೋಟಾರ್ಸ್ ಕಂಪೆನಿ 2020ರಲ್ಲಿ ನೆಕ್ಸಾನ್ ಹೆಸರಿನ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುತ್ತದೆ. ಟಾಟಾ ಮೋಟಾರ್ಸ್ ಉತ್ಪಾದಿಸುವ ಕಾರುಗಳ ಪೈಕಿ ನೆಕ್ಸಾನ್ ಕಾರು ಮಾರಾಟದಲ್ಲಿ ದಾಖಲೆಯನ್ನು ಬರೆದಿದೆ. ಜತೆಗೆ ಗರಿಷ್ಠ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. 2020ರ ವೇಳೆಗೆ ಎಲೆಕ್ಟ್ರಿಕ್ ಕಾರು ಮತ್ತೂಮ್ಮೆ ಹವಾ ಸೃಷ್ಟಿಸಲಿದೆ. ಅದೇ ರೀತಿ ಮೋರಿಸ್ ಗ್ಯಾರೇಜಸ್ (ಎಂಜಿ) ಸಂಸ್ಥೆಯು ವಿದ್ಯುತ್ ಚಾಲಿತ ಮತ್ತು ಅಂತರ್ಜಾಲ ವ್ಯವಸ್ಥೆಯನ್ನು ಹೊಂದಿದ ಎಸ್‌ಯುವಿ ಝಡ್‌ಎಸ್ ಕಾರನ್ನು ಬಿಡುಗಡೆ ಮಾಡಲು ತಯಾರಾಗಿದೆ. 2020ರಲ್ಲಿ ಗ್ರಾಹಕರಿಗೆ ದೊರಕಲಿದ್ದು, ಕಾರಿನ ಬ್ಯಾಟರಿಯನ್ನು ಒಂದು ಬಾರಿ ಚಾರ್ಜ್ ಮಾಡಿದರೆ 340 ಕಿ.ಮೀ. ತನಕ ಪ್ರಯಾಣ ಮಾಡಬಹುದಾಗಿದೆ. 143 ಹಾರ್ಸ್ ಪವರ್ ಹೊಂದಿದ್ದು, ಕಾರು ಚಾಲನೆಗೊಂಡ 8.5 ಸೆಕೆಂಡ್‌ಗಳಲ್ಲಿ 100 ಕಿ.ಮೀ. ವೇಗ ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿರಲಿದೆ ಎಂದು ಸಂಸ್ಥೆ ಹೇಳಿದೆ.
2020ರಲ್ಲಿ ಮಾರುತಿ ಸುಜುಕಿಯ ಮೊತ್ತ ಮೊದಲ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಪರಿಚಯವಾಗಲಿದೆ. ಮಾರುತಿ ಸುಜುಕಿ ಮತ್ತು ಟೊಯೊಟಾ ಸಹಭಾಗಿತ್ವದಲ್ಲಿ ಎಲೆಕ್ಟ್ರಿಕ್ ಕಾರಿನ ತಂತ್ರಜ್ಞಾನ ಅಭಿವೃದ್ಧಿಯಾಗಲಿದೆ. ಮಾರುತಿ ಸುಜುಕಿಯೇ ಈ ಕಾರಿನ ನಿರ್ಮಾಣ ಮತ್ತು ಮಾರಾಟವನ್ನು ಭಾರತದಲ್ಲಿ ನಡೆಸಲಿದೆ. - ನವೀನ್ ಭಟ್ ಇಳಂತಿಲ