Advertisement
ಪ.ಪೂ. ಕಾಲೇಜಿಗೆ 4.80 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಯೋಜನೆಯನ್ನು ರೂಪಿಸಿ ಸರಕಾರದ ಆಡಳಿ ತಾತ್ಮಕ ಅನುಮೋದನೆಗೆ ಕಳುಹಿಸಲಾಗಿತ್ತು. ಇದರಲ್ಲಿ ಪ್ರಥಮ ಹಂತವಾಗಿ 1.02 ಕೋ.ರೂ. ಬಿಡುಗಡೆ ಯಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಿ ಶಿಲಾನ್ಯಾಸಕ್ಕೆ ನಿರ್ಧರಿಸಲಾಗಿದೆ.
Related Articles
Advertisement
ನೂತನವಾಗಿ ನಿರ್ಮಾಣಗೊಳ್ಳಲಿರುವ ಕಾಲೇಜು ಕಟ್ಟಡ ನೆಲ ಮತ್ತು 2 ಅಂತಸ್ತು ಗಳನ್ನು ಒಳಗೊಂಡಿದೆ. ನೆಲಅಂತಸ್ತಿನಲ್ಲಿ ಸರಕಾರಿ ಅಭ್ಯಾಸಿ ಪ್ರೌಢಶಾಲೆ ಕಾರ್ಯಾ ಚರಿಸಲಿದ್ದು, ಮೇಲಿನ ಎರಡು ಅಂತಸ್ತು ಕಾಲೇಜು ಕಾರ್ಯಾಚರಿಸಲಿದೆ. ಪ್ರಸ್ತುತ ಇರುವ ಕಲಾ ಮತ್ತು ವಾಣಿಜ್ಯ ತರಗತಿಗಳ ಜತೆಗೆ ಮುಂದಿನ ವರ್ಷಗಳಲ್ಲಿ ವಿಜ್ಞಾನ ತರಗತಿಯನ್ನು ಕೂಡ ಇಲ್ಲಿ ಆರಂಭಿಸಲು ಯೋಜನೆ ರೂಪಿಸಲಾಗಿದೆ. ನೂತನ ಕಟ್ಟಡ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ತರಗತಿಗಳಿಗೆ ಸುಸುಜ್ಜಿತ ಕೊಠಡಿ, ಲ್ಯಾಬ್, ಗ್ರಂಥಾಲಯ, ಕಚೇರಿ, ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಕೊಠಡಿಗಳು, ವಾಶ್‌ರೂಂಗಳನ್ನು ಒಳಗೊಳ್ಳಲಿದೆ. ಎರಡನೇ ಅಂತಸ್ತಿನಲ್ಲಿ 1200 ಚದರ ಅಡಿಯ ಸುಸಜ್ಜಿತ ಸಭಾಂಗಣ ಬರಲಿದೆ.
ಹಂಪನಕಟ್ಟೆಯ ಸರಕಾರಿ ಅಭ್ಯಾಸಿ ಪ್ರೌಢಶಾಲೆಯ ಆವರಣದಲ್ಲಿ ಕಾರ್ಯಾಚರಿಸುತ್ತಿರುವ ಬೊಕ್ಕಪಟ್ಣ ಸರಕಾರಿ ಪ.ಪೂ. ಕಾಲೇಜಿಗೆ ಸುಸಜ್ಜಿತ ಕಟ್ಟಡ ನಿರ್ಮಾಣದ ಬಗ್ಗೆ ಹಿಂದಿನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ 4.8 ಕೋ.ರೂ. ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಿದ್ದೆ. ಇದು ಅನುಮೋದನೆಗೊಂಡು ಇದೀಗ 1.02 ಕೋ.ರೂ. ಮಂಜೂರಾಗಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಕಾಮಗಾರಿಗೆ ಸಂಬಂಧ ಪಟ್ಟ ಪ್ರಕ್ರಿಯೆಗಳನ್ನು ಶೀಘ್ರ ಆರಂಭಿಸಲಾಗುವುದು.-ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ