Advertisement

ಮೂಲರಪಟ್ಣ ಹೊಸ ಸೇತುವೆ ಕಾಮಗಾರಿ ಶೀಘ್ರ ಆರಂಭ

10:06 PM Nov 06, 2019 | Team Udayavani |

ಕೈಕಂಬ: ಮಂಗಳೂರು ತಾಲೂಕಿನ ಮುತ್ತೂರು ಹಾಗೂ ಬಂಟ್ವಾಳ ತಾಲೂಕಿನ ಮೂಲರಪಟ್ಣವನ್ನು ಸಂಪರ್ಕಿಸುವ ಮೂಲರಪಟ್ಣ ಹೊಸ ಸೇತುವೆ ಕಾಮಗಾರಿ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಸುಮಾರು 13.9 ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿ ಆರಂಭಿಸಲಾಗುವುದು. ಇದಕ್ಕೆ ಕ್ಯಾಬಿನೆಟ್‌ ಅನುಮೋದನೆಯೊಂದು ಬಾಕಿಯಿದ್ದು ಇದು ಅನುಮತಿ ಸಿಕ್ಕರೆ ಕಾಮಗಾರಿ ಆರಂಭವಾಗುತ್ತದೆ.

Advertisement

2018ರ ಜೂ. 26 ಸೇತುವೆ ತುಂಡಾಗಿ ಬಿದ್ದ ಕಾರಣ ಎರಡು ತಾಲೂಕಿನ ನಡುವೆ ಇರುವ ಹತ್ತಿರದ ಸಂಕರ್ಪ ಕಡಿದು ಹೋಗಿತ್ತು. ಫ‌ಲ್ಗುಣಿ ನದಿಗೆ ಕಟ್ಟಲಾದ ಈ ಸೇತುವೆ ಕೆಳಭಾಗದಲ್ಲಿ ಮರಳುಗಾರಿಕೆಯಿಂದ ಅಧಾರಸ್ತಂಭಕ್ಕೆ ತೊಂದರೆಯಾಗಿ ಈ ಸೇತುವೆ ಬಿದ್ದು ಹೋಗಿತ್ತು.

ಇದರಿಂದ ಜನರಿಗೆ ಭಾರೀ ತೊಂದರೆ ಅನುಭವಿಸಬೇಕಾಗಿ ಬಂತು. ಮುತ್ತೂರಿ ನಿಂದ ಬೆಳ್ಳೂರಿಗೆ ತೂಗು ಸೇತುವೆಯನ್ನು ಬಳಸಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ನಡೆದು ಹೋಗಬೇಕಾದ ಸನ್ನಿವೇಶ ಉಂಟಾಗಿ ಶಾಲಾ ಮಕ್ಕಳಿಗೆ ತೊಂದರೆಯಾಯಿತು.

ಶಾಸಕರಾದ ರಾಜೇಶ್‌ ನಾೖಕ್‌ ಮತ್ತು ಡಾ| ಭರತ್‌ ಶೆಟ್ಟಿ ವೈ. ಅವರು ಇಬ್ಬರು ಈ ಸೇತುವೆಗೆ ಅನುದಾನಕೊಟ್ಟು ಅದರ ಪ್ರಸ್ತಾವಕ್ಕಾಗಿ ಕ್ಯಾಬಿನೆಟ್‌ಗೆ ಕಳುಹಿಸಿಕೊಟ್ಟಿದ್ದಾರೆ. ಅನುಮೋದನೆಯ ಮುಂಚೆಯೇ ಪ್ರಾಥಮಿಕ ಹಂತದ ಕಾರ್ಯವನ್ನು ಪ್ರದೇಶವನ್ನು ಸ್ವತ್ಛಗೊಳಿಸುವ ಕಾರ್ಯ ಆರಂಭ ಮಾಡಲಾಗುತ್ತದೆ. ಈ ತಿಂಗಳ ಕೊನೆಗೆ ಈ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ. ಸೇತುವೆ ಅದಷ್ಟು ಬೇಗ ಅಗುವ ದೃಷ್ಟಿಯಿಂದ ಪ್ರಿಸೈಜ್‌ ಕಾಂಕ್ರೀಟ್‌ ಕಾಮಗಾರಿ ಮಾಡಲಾಗುತ್ತಿದ್ದು, ಗುರುಪುರ ಸೇತುವೆ ನಿರ್ಮಾಣದ ಮಾದರಿಯಲ್ಲಿ ಮೂಲರಪಟ್ಣ ಸೇತುವೆಯ ಕಾಮಗಾರಿಗಳನ್ನು ಮಾಡಲಾಗುತ್ತದೆ.

ಸೇತುವೆ ನಿರ್ಮಾಣದ ವಿಸ್ತೀರ್ಣದ ವಿಸ್ತರಣೆ
ಗುರುಪುರ ಸೇತುವೆಯಂತೆ ಮೂಲರಪಟ್ಣ ಸೇತುವೆ ಕಾಮಗಾರಿ ಬೇಗ ಮುಗಿಸಲು ಪ್ರಯತ್ನಿಸಲಾಗುವುದು. ಒಳ್ಳೆಯ ಗುತ್ತಿಗೆದಾರರು ಸಿಕ್ಕಿದ್ದು ಅವರಿಗೆ ವಿಶೇಷವಾದ ಷರತ್ತನ್ನು ವಿಧಿಸಲಾಗಿದೆ. ಚುನಾವಣೆ ನೀತಿ ಸಂಹಿತೆಯಿಂದಾಗಿ ಅನುಮೋದನೆಗೆ ಸ್ವಲ್ಪ ತೊಡಕಾಗಿದೆ. ಈಗ ಕುಸಿದು ಬಿದ್ದ ಸೇತುವೆಯನ್ನು ಕೆಡವಿ 7ಮೀಟರ್‌ ಇದ್ದ ಸೇತುವೆ 12ಮೀ. ಅಗಲವಾಗಿ ಕಟ್ಟಲಾಗುತ್ತದೆ. ಈ ರಸ್ತೆ ಅಪ್‌ಗ್ರೇಡ್‌ ಆಗುವ ಸಂಭವ ಇದ್ದ ಕಾರಣ ಇದನ್ನು ವಿಸ್ತರೀಕರಣ ಮಾಡಲಾಗುತ್ತದೆ. ಉದ್ದ 180 ಮೀಟರ್‌ ಉದ್ದ ಇರುತ್ತದೆ ಎಂದು ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಯಶವಂತ್‌ ಅವರು ತಿಳಿಸಿದ್ದಾರೆ.

Advertisement

14 ಕೋ.ರೂ. ವೆಚ್ಚದಲ್ಲಿ ಸೇತುವೆ ಕಾಮಗಾರಿ
ಅತೀ ಶೀಘ್ರದಲ್ಲಿ ಸೇತುವೆ ಕಾಮಗಾರಿ ಆರಂಭವಾಗಬೇಕೆಂಬ ದೃಷ್ಟಿಯಿಂದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರ ಅನುದಾನದಿಂದ 2ಕೋ.ರೂ. ಅನುದಾನ ಹಾಗೂ ಶಾಸಕ ಡಾ| ಭರತ್‌ ಶೆಟ್ಟಿ ಅವರ 2ಕೋ.ರೂ. ಅನುದಾನವನ್ನು ಈ ಸೇತುವೆಗೆ ಮೀಸಲಿಟ್ಟಿದ್ದೇವೆ. ಒಟ್ಟು ಅಂದಾಜು ವೆಚ್ಚ 13.9 ಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ಕಾಮಗಾರಿ ನಡೆಯಲಿದೆ. 1/3ಭಾಗ ಹಣ ಇದ್ದಲ್ಲಿ ಮಾತ್ರ ಸೇತುವೆ ಕಾಮಗಾರಿ ಶುರು ಮಾಡಲು ಟೆಂಡರ್‌ ಕರೆಯಲು ಸಾಧ್ಯವಾಗುತ್ತದೆ. ಮಳೆಗಾಲ ಆರಂಭದೊಳಗೆ ಇದನ್ನು ಪೂರ್ಣಗೊಳಿಸುವ ಉದ್ದೇಶವಿದೆ.
 - ರಾಜೇಶ್‌ ನಾೖಕ್‌, ಶಾಸಕರು, ಬಂಟ್ವಾಳ ವಿಧಾನಸಭಾ ಕ್ಷೇತ್ರ

Advertisement

Udayavani is now on Telegram. Click here to join our channel and stay updated with the latest news.

Next