Advertisement

ಪ್ರಮುಖ ಬ್ರಾಂಡ್‍ಗಳಿಗೆ ಪೈಪೋಟಿ ನೀಡಲು ಬರುತ್ತಿದೆ ‘ನಥಿಂಗ್‍’ನ ಹೊಸ ಫೋನ್‍

07:51 PM Mar 26, 2022 | Team Udayavani |

ಬೆಂಗಳೂರು: ಒನ್‍ ಪ್ಲಸ್‍ ಕಂಪೆನಿಯ ಸಹಸ್ಥಾಪಕ ಕಾರ್ಲ್‍ ಪೇ ಒಡೆತನದ ನಥಿಂಗ್‍ ಕಂಪೆನಿ ಶೀಘ್ರವೇ ತನ್ನ ಮೊಟ್ಟ ಮೊದಲ ಸ್ಮಾರ್ಟ್ ಫೋನ್‍ ಅನ್ನು ಹೊರತರಲಿದ್ದು, ಸ್ಮಾರ್ಟ್‍ ಫೋನ್‍ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Advertisement

ಎರಡು ವರ್ಷಗಳ ಹಿಂದೆ ಅದರಿಂದ ಹೊರ ಬಂದಿದ್ದ ಕಾರ್ಲ್ ಪೇ ಬಳಿಕ ನಥಿಂಗ್‍ ಎಂಬ ಹೊಸ ಕಂಪೆನಿ ಹುಟ್ಟುಹಾಕಿದ್ದರು. ಆ ಬಳಿಕ ಒಂದೇ ವರ್ಷದಲ್ಲಿ ನಥಿಂಗ್‍ ನ ಮೊದಲ ಉತ್ಪನ್ನವಾಗಿ ಟ್ರೂ ವೈರ್ ಲೆಸ್‍ ಇಯರ್ ಬಡ್‍  (1) ಅನ್ನು 2021ರ ಜುಲೈ ತಿಂಗಳಲ್ಲಿ ಹೊರ ತಂದಿದ್ದರು.

ಗ್ಯಾಜೆಟ್‍ ಪ್ರೇಮಿಗಳು ನಥಿಂಗ್ ಒಂದು ಆಡಿಯೋ ಕಂಪೆನಿ ಎಂದೇ ತಿಳಿದಿದ್ದರು. ಕೆಲ ತಿಂಗಳ ಹಿಂದೆ ಸ್ಮಾರ್ಟ್‍ ಫೋನ್‍ ಹೊರತರುವ ಸಣ್ಣದೊಂದು ಕ್ಲೂ ನೀಡಿದ್ದ ಸಿಇಓ ಕಾರ್ಲ್ ಇದೀಗ ನೂತನ ಫೋನ್‍ ಹೊರತರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಲಂಡನ್ ನಿಂದ ವರ್ಚುವಲ್‍ ಕಾರ್ಯಕ್ರಮದ ಮೂಲಕ ಮಾತನಾಡಿದ ಅವರು, ಕ್ವಾಲ್‍ ಕಾಂ ಸ್ನಾಪ್‍ಡ್ರಾಗನ್‍ ಸಹಭಾಗಿತ್ವದಲ್ಲಿ ಮುಂಬರುವ ಬೇಸಿಗೆಯೊಳಗೆ ಫೋನ್‍ (1) ಎಂಬ ಹೊಸ ಸ್ಮಾರ್ಟ್ ಫೋನ್‍ ಹೊರತರುತ್ತಿರುವುದಾಗಿ ಪ್ರಕಟಿಸಿದರು. ನಥಿಂಗ್‍ ಆಡಿಯೋ ಕಂಪೆನಿಯಲ್ಲ ಎಂದು ಹೇಳುವ ಮೂಲಕ, ಅದು ಆಡಿಯೋಗೆ ಸೀಮಿತವಾದ ಕಂಪೆನಿ ಎಂದು ತಿಳಿದಿದ್ದವರಿಗೆ ತಿರುಗೇಟು ನೀಡಿದರು.

Advertisement

ನಥಿಂಗ್‍ ಫೋನ್‍ (1)ನ ಕೆಲ ವೈಶಿಷ್ಟ್ಯಗಳು:
1. ಇದು ಆಂಡ್ರಾಯ್ಡ್ ಫೋನ್‍ ಆಗಿದ್ದು, ನಥಿಂಗ್‍ ಆಪರೇಟಿಂಗ್‍ ಸಿಸ್ಟಂ (ಓಎಸ್‍) ಹೊಂದಿರುತ್ತದೆ.
2. ಇದು ತನ್ನದೇ ಆದ ಹೊಸ ರೀತಿಯ ವಿನ್ಯಾಸ ಹೊಂದಿರಲಿದೆ. ಅಂದರೆ ನಥಿಂಗ್‍ ಇಯರ್ ಬಡ್‍ ರೀತಿ ಪಾರದರ್ಶಕ ವಿನ್ಯಾಸ ಹೊಂದಿರಲಿದೆ.
3. ಆಂಡ್ರಾಯ್ಡ್ ಸ್ಮಾರ್ಟ್ ಫೋನ್‍ ಪ್ರಿಯರು ಬಯಸುವ ಕ್ವಾಲ್‍ ಕಾಂ ಸ್ನಾಪ್‍ ಡ್ರಾಗನ್‍ ಪ್ರೊಸೆಸರ್ ಹೊಂದಿರುತ್ತದೆ. ನಥಿಂಗ್‍ಗೆ ಕ್ವಾಲ್‍ ಕಾಂ ಕೂಡ ಹೂಡಿಕೆದಾರ ಎಂಬುದು ವಿಶೇಷ.
4. ನಥಿಂಗ್‍ ಓಎಸ್‍ ಅತ್ಯಂತ ವೇಗವಾಗಿ ಕೆಲಸ ನಿರ್ವಹಿಸಲಿದೆ. ಈ ಫೋನಿಗೆ 3 ವರ್ಷಗಳ ಸಾಫ್ಟ್ ವೇರ್ ಅಪ್‍ ಡೇಟ್‍ ಮತ್ತು 4 ವರ್ಷಗಳ ಸೆಕ್ಯುರಿಟಿ ಅಪ್ ಡೇಟ್‍ ದೊರಕಲಿದೆ.
ಇದರ ದರದ ಬಗ್ಗೆ ಯಾವುದೇ ಮಾಹಿತಿಯನ್ನೂ ಕಂಪೆನಿ ನೀಡಿಲ್ಲ. ಈ ಫೋನು ಸ್ಯಾಮ್‍ ಸಂಗ್‍ ಗೆಲಾಕ್ಸಿ ಎಸ್‍ 22 ಹಾಗೂ ಒನ್‍ ಪ್ಲಸ್‍ 10 ಪ್ರೊ ಗೆ ಪ್ರಬಲ ಪೈಪೋಟಿ ನೀಡಲಿದೆ ಎಂದು ಪ್ರಮುಖ ಗ್ಯಾಜೆಟ್‍ ವಿಮರ್ಶಕರು ಊಹಿಸಿದ್ದಾರೆ.

– ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next