ಮಂಗಳೂರು: ಸಿಎಸ್ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ನೂತನ ಬಿಷಪ್ ಆಗಿ ವಂ| ಹೇಮಚಂದ್ರ ಕುಮಾರ್ ಅವರು ಆಯ್ಕೆಯಾಗಿದ್ದಾರೆ.
ಬುಧವಾರ ಸಿಎಸ್ಐ ಶಾಂತಿ ಮಹಾದೇವಾಲಯದಲ್ಲಿ ನಡೆದ ಬಿಷಪ್ ದೀಕ್ಷೆ ಆರಾಧನೆಯಲ್ಲಿ ಚರ್ಚ್ ಆಫ್ ಸೌತ್ ಇಂಡಿಯಾದ ಮಹಾಧರ್ಮಾಧ್ಯಕ್ಷ (ಮೋಡರೇಟರ್) ರೈ| ರೆ| ಡಾ| ಎ. ಧರ್ಮರಾಜ ರಸಲಾಂ ಅವರು ಹೇಮಚಂದ್ರ ಕುಮಾರ್ ಅವರನ್ನು ಬಿಷಪ್ ಆಗಿ ನೇಮಕ ಮಾಡಿದರು.
ಬಿಷಪ್ ದೀಕ್ಷೆ ಆರಾಧನ ಕಾರ್ಯಕ್ರಮದಲ್ಲಿ ಸಿಎಸ್ಐ ಡೆಪ್ಯುಟಿ ಮೋಡರೇಟರ್ ವಂ| ಡಾ| ರೂಬೆನ್ ಮಾರ್ಕ್, ಸಿಎಸ್ಐ ಮಹಾಕಾರ್ಯದರ್ಶಿ ಸಿ| ಫೆರ್ನಾಂಡಿಸ್ ರತೀನರಾಜ, ಕೊಯಂಬತ್ತೂರು ಡಯಾಸಿಸ್ ಬಿಷಪ್ ವಂ| ತಿಮೋಥಿ ರವೀಂದರ್, ಕೊಲ್ಲಂ ಕೊಟ್ಟಾರಕರ ಬಿಷಪ್ ವಂ| ಡಾ| ಒಮ್ಮನ್ ಜಾರ್ಜ್, ಕರ್ನಾಟಕ ಉತ್ತರ ಬಿಷಪ್ ವಂ| ಮಾರ್ಟಿನ್ ಸಿ. ಬೋಗೈ, ರೋಹನ್ ಪುಷ್ಪರಾಜನ್ ಮತ್ತಿತರರಿದ್ದರು.
ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ಕಾರ್ಯದರ್ಶಿ ವಿಲಿಯಂ ಕೇರಿ, ವಂ| ಭಗಿನಿ ಸುಜಾತಾ, ವಿನ್ಸಂಟ್ ಪಾಲನ್ನ ಶುಭ ಕೋರಿದರು.