Advertisement

ನಿಲ್ಲದ ಕೋವಿಡ್ ಓಟ: ಉಡುಪಿ ಜಿಲ್ಲೆಯಲ್ಲಿಂದು 16 ಮಂದಿಗೆ ಸೋಂಕು ದೃಢ

06:12 PM Jul 03, 2020 | keerthan |

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ -19 ಸೋಂಕು ಓಟ ನಿಲ್ಲುತ್ತಿಲ್ಲ. ಇಂದು ಕೂಡಾ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ವರದಿಯಾಗಿದ್ದು, 16 ಮಂದಿಯ ದೇಹಕ್ಕೆ ಸೋಂಕು ಹೊಕ್ಕಿರುವುದು ದೃಢವಾಗಿದೆ.

Advertisement

ಸೋಂಕಿತರಲ್ಲಿ ಹೆಚ್ಚಿನವರಲ್ಲಿ ಸೋಂಕು ಲಕ್ಷಣಗಳು ಕಂಡುಬರದ ಹಿನ್ನಲೆಯಲ್ಲಿ ಬೇಗನೇ ಡಿಸ್ಚಾರ್ಜ್ ಆಗುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಇದುವರೆಗೆ 1104 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೂವರು ಸೋಂಕಿತರು ಮರಣ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 1104 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೂವರು ಸೋಂಕಿತರು ಮರಣ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 16498 ಮಂದಿಯ ಗಂಟಲು ದ್ರವ ಸಂಗ್ರಹಿಸಿದ್ದು, ಅವರಲ್ಲಿ 13823 ಜನರ ವರದಿ ನೆಗಟಿವ್ ಬಂದಿದೆ. 1258 ಜನರ ವರದಿ ಪಾಸಿಟಿವ್ ಆಗಿದೆ. ಇನ್ನೂ 1417 ಜನರ ಗಂಟಲು ದ್ರವ ಪರೀಕ್ಷಾ ವರದಿ ಜಿಲ್ಲಾಡಳಿತದ ಕೈ ಸೇರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next