Advertisement

‌ಖಾನ್‌ ಗಳೊಂದಿಗೆ ಕೆಲಸ ಮಾಡಲು ಎಂದಿಗೂ ಬಯಸಿಲ್ಲ.. “ಗುಡ್‌ ಬೈ” ನಿರ್ಮಾಪಕಿ

05:09 PM Sep 06, 2022 | Team Udayavani |

ಮುಂಬಯಿ: ಅಮಿತಾಭ್‌ – ರಶ್ಮಿಕಾ ಮಂದಣ್ಣ ಅವರ ʼಗುಡ್‌ ಬೈʼ ಚಿತ್ರದ ಟ್ರೇಲರ್‌ ( ಸೆ.6,ಸೋಮವಾರ)  ರಿಲೀಸ್ ಆಗಿದೆ. ಬಾಲಾಜಿ ಟೆಲಿಫಿಲ್ಮ್ಸ್‌ ಮೂಲಕ ಏಕ್ತಾ ಕಪೂರ್ ಹಾಗೂ ಶೋಭಾ ಕಪೂರ್‌ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Advertisement

ಮುಂಬಯಿಯಲ್ಲಿ ನಡೆದ ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭದ ಪ್ರತಿಕಾಗೋಷ್ಟಿಯಲ್ಲಿ ಮಾತನಾಡಿದ ನಿರ್ಮಾಪಕಿ ಏಕ್ತಾ ಕಪೂರ್, “ಬಾಲ್ಯದಿಂದಲೂ ನನಗೆ ಅಮಿತಾಭ್‌ ಅವರೊಂದಿಗೆ ಕೆಲಸ ಮಾಡುವ ಕನಸಿತ್ತು. ಬಾಲ್ಯದಲ್ಲಿ ಅಮಿತಾಭ್‌ ಬಚ್ಚನ್ ಮನೆಗೆ ಬರ್ತ್‌ ಡೇ ಪಾರ್ಟಿಗೆ ಹೋಗುತ್ತಿದ್ದೆ.  ಶ್ವೇತಾ ಬಚ್ಚನ್ ( ನಂದ ಬಚ್ಚನ್)‌, ಅಭಿಷೇಕ್‌ ಬಚ್ಚನ್‌ ನನಗೆ ಒಳ್ಳೆ ಸ್ನೇಹಿತರು. ಖಾನ್‌ ಗಳೊಂದಿಗೆ ಕೆಲಸ ಮಾಡಲು ನಾನು ಎಂದಿಗೂ ಬಯಸಿಲ್ಲ. ನನಗೆ ಅಮಿತಾಭ್‌ ಬಚ್ಚನ್‌ ಅವರೊಂದಿಗೆ ಮಾತ್ರ ಕೆಲಸ ಮಾಡುವುದು ಕನಸಾಗಿತ್ತು. ಕೊನೆಗೂ ಆ ಆಸೆ ನೆರವೇರಿದೆ.‌ ಈ ಸಿನಿಮಾದಲ್ಲಿ ಕೆಲಸ ಮಾಡಿದ ಅನುಭವವೇ ಬೇರೆ” ಎಂದು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಚೊಚ್ಚಲ ಬಾಲಿವುಡ್‌ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌ ಅವರೊಂದಿಗೆ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ನಲ್ಲಿ ಅಪ್ಪ – ಮಗಳ ಸಂಬಂಧವನ್ನು ಆಧುನಿಕತೆ ಹಾಗೂ ಮಾರ್ಡನ್‌ ಕಾಲದ ಶೈಲಿಯಲ್ಲಿ ಹೇಳಲಾಗಿದೆ.

ವಿಕಾಸ್​ ಬಹ್ಲ್ ನಿರ್ದೇಶನದ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್‌, ರಶ್ಮಿಕಾ ಮಂದಣ್ಣ, ನೀನಾ ಗುಪ್ತಾ ಮುಂತಾದ ಕಲಾವಿದರು ನಟಿಸಿದ್ದಾರೆ. ಅಕ್ಟೋಬರ್‌ 7 ರಂದು ʼಗುಡ್‌ ಬೈ ತೆರೆಗೆ ಬರಲಿದೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next