Advertisement

“ಎಂದೂ ಧರ್ಮ ಒಡೆಯೋ ಕೆಲಸಕ್ಕೆ ಕೈ ಹಾಕಿಲ್ಲ’: ಡಿ.ಕೆ. ಶಿವಕುಮಾರ್‌

11:25 PM Apr 19, 2019 | Team Udayavani |

ಶಿವಮೊಗ್ಗ: “ಮೋದಿ ಅವರು ರಾಜ್ಯಕ್ಕೆ ಬಂದಾಗ ಧರ್ಮ, ಸೈನಿಕರ ವಿಷಯ ಮುಂದಿಟ್ಟುಕೊಂಡು ಮತ ಕೇಳುತ್ತಾರೆ. ಕಾಂಗ್ರೆಸ್‌ ಧರ್ಮ ಒಡೆಯುವ ಕೆಲಸ ಮಾಡ್ತಿದೆ ಎನ್ನೋ ವಿಚಾರದ ಮೂಲಕ ರಾಜ್ಯದ ಗಮನ ಸೆಳೆಯುತ್ತಿದ್ದಾರೆ. ಮೋದಿ ಅಷ್ಟು ದೊಡ್ಡ ಸ್ಥಾನದಲ್ಲಿ ಇದ್ದುಕೊಂಡು ತಾನು ಐದು ವರ್ಷದಲ್ಲಿ ಏನು ಮಾಡಿದ್ದೀನಿ ಅನ್ನೋ ಪಟ್ಟಿ ಕೊಡೋಕೆ ಆಗುತ್ತಿಲ್ಲ’ ಎಂದು ಸಚಿವ ಡಿ.ಕೆ. ಶಿವಕುಮಾರ್‌ ಟೀಕಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದಿಷ್ಟು
*ಮೋದಿ ಅವರಿಗೆ ಸೋಲಿನ ಭಯ ಆವರಿಸಿದೆ. ಅದಕ್ಕಾಗಿ ಈ ವಿಷಯಗಳನ್ನೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ ಯಾವತ್ತೂ ಯಾವ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿಲ್ಲ.

* ವೀರಶೈವ ಮಹಾಸಭಾದ ನಾಯಕರು, ಬಿಎಸ್‌ವೈ, ಶೆಟ್ಟರ್‌, ಶಿವಶಂಕರಪ್ಪ ಆದಿಯಾಗಿ ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಭೇಟಿಯಾಗಿ ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗೆ ಅರ್ಜಿ ಸಲ್ಲಿಸಿ ಒತ್ತಡ ಹೇರಿದ್ದರು. ಅನೇಕ ಧಾರ್ಮಿಕ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದರು. ಎಲ್ಲ ಮುಖಂಡರೂ ಬೇಡಿಕೆ ಇಟ್ಟಿದ್ದ ಕಾರಣಕ್ಕೆ ಇದನ್ನು ಕಾಂಗ್ರೆಸ್‌ ಸರಕಾರ ಮುಂದುವರಿಸಿತ್ತು.

* ಇದು ಕೇವಲ ಎಂ.ಬಿ. ಪಾಟೀಲ್‌, ವಿನಯ್‌ ಕುಲಕರ್ಣಿ ವಿಚಾರ ಮಾತ್ರವಲ್ಲ. ಈಗ ಅದಕ್ಕೆ ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸೋದು ಪ್ರಧಾನಿ ಸ್ಥಾನಕ್ಕೆ ಶೋಭೆ ತರುವಂಥದ್ದಲ್ಲ.

* ನನ್ನ ಹತ್ರ ಯಡಿಯೂರಪ್ಪ ಡೈರಿ ಇದ್ದಿದ್ದು ನಿಜ. ಅದನ್ನು ಐಟಿಯವರು ತೆಗೆದುಕೊಂಡು ಹೋಗಿದ್ದು ನಿಜ. ಆದರೆ ಕೋರ್ಟ್‌ನಲ್ಲಿ ಈ ವಿಚಾರ ಇರೋದ್ರಿಂದ ಎಲ್ಲವನ್ನೂ ಹೇಳ್ಳೋಕಾಗಲ್ಲ. ಈಶ್ವರಪ್ಪ ಪಿಎ, ಯಡಿಯೂರಪ್ಪ ಪಿಎ ಬಳಿ ಕೇಳಿದರೆ ಮಾಹಿತಿ ಸಿಗಬಹುದು.

Advertisement

* ಎಸ್‌ಐಟಿ ರಚನೆ ಬಗ್ಗೆ ಸಿಎಂ ಹತ್ತಿರವೇ ಕೇಳಿ. ನಾನು ಇನ್ನೂ ಸಿಎಂ ಆಗಿಲ್ಲ. ಚೀಫ್‌ ಮಿನಿಸ್ಟರ್‌ ಆಗೋದಕ್ಕೆ ನನಗೆ ಇನ್ನೂ ಟೈಮ್‌ ಇದೆ. ಚೀಫ್‌ ಮಿನಿಸ್ಟರ್‌ ಆದಾಗ ಎಲ್ಲದಕ್ಕೂ ಉತ್ತರ ಕೊಡೇ¤ನೆ.

Advertisement

Udayavani is now on Telegram. Click here to join our channel and stay updated with the latest news.

Next