Advertisement

ನೂರು ಪ್ರಕರಣ ದಾಖಲಿಸಿದ್ರೂ ಕರವೇ ಎದೆಗುಂದುವುದಿಲ್ಲ

11:22 AM Jul 22, 2017 | |

ಬೆಂಗಳೂರು: ನಗರದ ಮೆಟ್ರೋ ನಿಲ್ದಾಣಗಳಲ್ಲಿ ಹಿಂದಿ ನಾಮಫ‌ಲಕಗಳಿಗೆ ಮಸಿ ಬಳಿಯುವ ಚಳವಳಿ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ ಹ¤ತಾರು ಮಂದಿ ಕಾರ್ಯಕರ್ತರ ವಿರುದ್ಧ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕಿಡಿಕಾರಿದ್ದಾರೆ.

Advertisement

ಎರಡು ದಿನಗಳ ಹಿಂದೆ ನಗರದ 40 ಮೆಟ್ರೋ ನಿಲ್ದಾಣಗಳಲ್ಲಿರುವ ಹಿಂದಿ ನಾಮಫ‌ಲಕಗಳಿಗೆ ಮಸಿ ಬಳಿಸಿದ 10 ನಿಮಿಷಗಳಲ್ಲಿಯೇ ಮಸಿ ಅಳಿಸಿ ಹಾಕಿಸಿದ್ದ ಪೊಲೀಸರು, ಶುಕ್ರವಾರ ವಿವಿಧ ಠಾಣೆಗಳಲ್ಲಿ ಗಲಭೆ, ಪ್ರಚೋದನೆ ನೀಡಿದ ಆರೋಪದಡಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ನಾರಾಯಣಗೌಡ, “ಪೊಲೀಸರು ಉದ್ದೇಶಪೂರ್ವಕವಾಗಿ ನನ್ನ ಹೆಸರನ್ನು ಸೇರಿಸಿದ್ದಾರೆ. ನಾರಾಯಣಗೌಡರ ಮೇಲೆ ಪ್ರಕರಣ ದಾಖಲಿಸಿದ್ರೆ ಕಾರ್ಯಕರ್ತರು ಹೋರಾಟಕ್ಕೆ ಮುಂದಾಗುವುದಿಲ್ಲ ಎಂಬ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ಇಂತಹ ನೂರು ಪ್ರಕರಣ ದಾಖಲಿಸಿದ್ರೂ ಎದೆಗುಂದುವುದಿಲ್ಲ,’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next