ಮುಂಬೈ: ಭಾರತದ ಸ್ಟಾರ್ ಆಟಗಾರ, ಮಾಜಿ ನಾಯಕ ವಿರಾಟ್ ಕೊಹ್ಲಿ ಇದೀಗ ಮತ್ತೆ ತಮ್ಮ ಹಳೆಯ ಖದರ್ ಗೆ ಮರಳಿದ್ದಾರೆ. ಏಷ್ಯಾ ಕಪ್ ನಲ್ಲಿ ಶತಕ ಬಾರಿಸಿ ಫಾರ್ಮ್ ಗೆ ಬಂದ ವಿರಾಟ್ ನಂತರ ನಡೆದ ಟಿ20 ವಿಶ್ವಕಪ್ ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರು. ಆಸೀಸ್ ನಲ್ಲಿ ನಡೆದ ಚುಟುಕು ಸಮರದಲ್ಲಿ ವಿರಾಟ್ ಅತೀ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದರು.
ಇದೀಗ ವಿರಾಟ್ ಕೊಹ್ಲಿ ಅವರು ವಿದಾಯ ಹೇಳಲಿದ್ದಾರೆಂಬ ಗುಮಾನಿ ಎದ್ದಿದೆ. ಈ ಬಗ್ಗೆ ಅಭಿಮಾನಿಳು ಮಾತನಾಡುತ್ತಿದ್ದಾರೆ. ಇದಕ್ಕೆ ಕಾರಣ ವಿರಾಟ್ ಇಂದು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಒಂದು ಪೋಸ್ಟ್.
“ಅಕ್ಟೋಬರ್ 23, 2022 ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷವಾಗಿರುತ್ತದೆ. ಕ್ರಿಕೆಟ್ ಆಟದಲ್ಲಿ ಹಿಂದೆಂದೂ ಅಂತಹ ಎನರ್ಜಿಯನ್ನು ಅನುಭವಿಸಿರಲಿಲ್ಲ. ಅದು ಎಂತಹ ಅದ್ಭುತ ಸಂಜೆ” ಎಂದು ವಿರಾಟ್ ಕೊಹ್ಲಿ ತಮ್ಮ ಇನ್ಸ್ಟಾ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಬಿಜೆಪಿಯ 10 ವಿಡಿಯೋಗಳು ಮತ್ತು ಆಪ್ ನ 10 ಭರವಸೆಗಳ ನಡುವೆ ಎಂಸಿಡಿ ಚುನಾವಣೆ : ಕೇಜ್ರಿವಾಲ್
Related Articles
ಟಿ20 ವಿಶ್ವಕಪ್ ಸೂಪರ್ 12 ಹಂತದ ಮೊದಲ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ಥಾನವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿದ್ದ ವಿರಾಟ್ ಕೊಹ್ಲಿ ಅಜೇಯ 82 ರನ್ ಗಳಿಸಿದ್ದರು. ಈ ಇನ್ನಿಂಗ್ಸ್ ತನ್ನ ಜೀವನದ ಶ್ರೇಷ್ಠ ಇನ್ನಿಂಗ್ಸ್ ಗಳಲ್ಲಿ ಒಂದು ಎಂದು ವಿರಾಟ್ ಬಣ್ಣಿಸಿದ್ದರು.
ಇದೇ ಪಂದ್ಯವನ್ನು ಉಲ್ಲೇಖಿಸಿ ವಿರಾಟ್ ಕೊಹ್ಲಿ ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ. ಈ ಹಿಂದೆ ಮಹೇಂದ್ರ ಸಿಂಗ್ ಧೋನಿಯೂ ಈ ರೀತಿಯ ಪೋಸ್ಟ್ ಹಾಕಿ ನಂತರ ವಿದಾಯ ಘೋಷಣೆ ಮಾಡಿದ್ದರು. ಹೀಗಾಗಿ ವಿರಾಟ್ ಕೊಹ್ಲಿಯೂ ಈ ರೀತಿ ಮಾಡಬಹುದೇ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ.