Advertisement

ಶಿವಣ್ಣ, ಸುದೀಪ್ ಅವರೊಟ್ಟಿಗೆ ಸಿನಿಮಾ ಕನಸಿನಲ್ಲೂ ಯೋಚಿಸಿರಲಿಲ್ಲ: ಉಪೇಂದ್ರ

10:17 PM Mar 06, 2023 | Team Udayavani |

ಬೆಂಗಳೂರು : ಈ ವರ್ಷದ ಬಹುನಿರೀಕ್ಷಿತ ‘ಕಬ್ಜ’ ಚಿತ್ರ ಮಾರ್ಚ್ 17 ರಂದು ಪಂಚಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಟ್ರೇಲರ್‌ಗೆ ಈಗಾಗಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಭಾರಿ ನಿರೀಕ್ಷೆ ಮೂಡಿಸಿದೆ.

Advertisement

ಚಿತ್ರದ ಕುರಿತು ಖಾಸಗಿ ವಾಹಿನಿಯೊಂದಿಗೆ ಅನುಭವ ಹಂಚಿಕೊಂಡ ರಿಯಲ್ ಸ್ಟಾರ್ ಉಪೇಂದ್ರ ನಾನು ಶಿವಣ್ಣ ಮತ್ತು ಸುದೀಪ್ ಅವರೊಟ್ಟಿಗೆ ಸಿನಿಮಾ ಮಾಡುತ್ತೇನೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ ಎಂದು ಸಂಭ್ರಮ ಹೊರ ಹಾಕಿದ್ದಾರೆ.

ಚಂದ್ರು ಅವರು ಮೂರು ವರ್ಷಗಳ ಕಾಲ ಪರಿಶ್ರಮ ಪಟ್ಟು ಮಾಡಿರುವ ಸಿನಿಮಾ ಇದು. ಮೇಕಿಂಗ್ ನೋಡಿದರೆ ನಿಮಗೆ ಆ ಅನುಭವಾಗುತ್ತದೆ. ಕಲಾ ನಿರ್ದೇಶಕ ಶಿವಕುಮಾರ್ ಕ್ಯಾಮೆರಾ ಮೆನ್  ಎ ಜೆ ಶೆಟ್ಟಿ ಅವರ ತಪಸ್ಸು ಇದು ಅದರೊಂದಿಗೆ ನಾವು ಪಯಣಿಸಿದ್ದೇವೆ ಎಂದು ಉಪೇಂದ್ರ ಹೇಳಿದ್ದಾರೆ.

ಬಿಗ್‌ ಬಿ ಚಿತ್ರದ ಟ್ರೇಲರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಆರ್‌.ಚಂದ್ರು ನಿರ್ಮಾಣ, ನಿರ್ದೇಶನದ ಚಿತ್ರದಲ್ಲಿ ಉಪೇಂದ್ರ ನಾಯಕರಾಗಿದ್ದು, ಕಿಚ್ಚ ಸುದೀಪ್‌ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಶ್ರೇಯಾ ಶರಣ್‌ ನಾಯಕಿಯಾಗಿದ್ದಾರೆ.

ಹಿಂದಿ ಚಿತ್ರರಂಗದ ದಿಗ್ಗಜ ನಟರಾದ ಅಮಿತಾಭ್‌ ಬಚ್ಚನ್ ಸೇರಿ ಸೇರಿದಂತೆ ಬೇರೆ ಬೇರೆ ಭಾಷೆಯ ನಟ-ನಟಿಯರು ಟ್ರೇಲರ್‌ ಬಗ್ಗೆ ಅಪಾರ ಮೆಚ್ಚುಗೆ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next