Advertisement

ಉಜಿರೆ ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿಯಿಂದ ಪುಣ್ಯನದಿ ನೇತ್ರಾವತಿ ಒಡಲ ಸ್ವಚ್ಛತಾ ಸೇವೆ

09:59 AM Feb 03, 2020 | sudhir |

ಬೆಳ್ತಂಗಡಿ : ಉಜಿರೆ ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿ ಬದುಕು ಕಟ್ಟೋಣ ತಂಡದ ಪ್ರಥಮ ಸೇವಾ ಕಾರ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜೀವ ಸೆಲೆ ಪುಣ್ಯನದಿ ನೇತ್ರಾವತಿಯ ಸ್ವಚ್ಛತಾ ಕೈಂಕರ್ಯವನ್ನು ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದಲ್ಲಿ ರವಿವಾರ ನಡೆಸಲಾಯಿತು.

Advertisement

ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯ ಮಾತನಾಡಿ, ಸಮಾಜದಲ್ಲಿ ಸೇವಾ ಸಮಾರಸ್ಯ ತಂದುಕೊಡುವ ನಿಟ್ಟಿನಲ್ಲಿ ಬದುಕುಕಟ್ಟೋಣ ತಂಡದ ಸೇವಾ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ತಾಲೂಕಿನ ಯುವಶಕ್ತಿಯಿಂದ ಮತ್ತಷ್ಟು ಸೇವಾ ಕಾರ್ಯಗಳು ಸಮಾಜಕ್ಕೆ ಅರ್ಪಿಸುವ ಮೂಲಕ ತಾಲೂಕನ್ನು ಮಾದರಿಯಾಗಿಸೋಣ ಎಂದರು.

ಉಜಿರೆ ಉದ್ಯಮಿ ರಾಮಚಂದ್ರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭಕೋರಿದರು.

ಧರ್ಮಸ್ಥಳ ಅನ್ನಪೂರ್ಣ ಛತ್ರದ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್ ಶುಭಕೋರಿದರು. ಸಮಿತಿಯ ಸಂಚಾಲಕ ರಾಜೇಶ್ ಪೈ ಸ್ವಾಗತಿಸಿ, ಉದ್ಯಮಿ ಮೋಹನ್ ಕುಮಾರ್ ಪ್ರಸ್ತಾವಿಸಿದರು. ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

Advertisement

500 ಸ್ವಯಂ ಸೇವಕರು/ 8 ಲೋಡ್ ಕಸ ತೆರವು
ಉಜಿರೆ ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿ ಬದುಕು ಕಟ್ಟೋಣ ತಂಡದ 500 ಕ್ಕೂ ಅಧಿಕ ಸ್ವಯಂ ಸೇವಕರು ನೇತ್ರಾವತಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಸ್ವಚ್ಛತೆ ನಡೆಸಿ 6 ಲೋಡ್ ಬಟ್ಟೆ ತ್ಯಾಜ್ಯ, 2 ಲೋಡ್ ಕಟ್ಟಿಗೆ ಸಹಿತ 8 ಲೋಡ್ ತ್ಯಾಜ್ಯ ತೆರವುಗೊಳಿಸುವ ಮೂಲಕ ಸ್ವಚ್ಛ ಭಾರತ್ ಸಂದೇಶ ಸಹಿತ ನೇತ್ರಾವತಿಯ ಸ್ಚಚ್ಛತೆಗೆ ಆಧ್ಯತೆ ನೀಡುವಂತೆ ಕರೆ ನೀಡಿದರು.

ಸ್ವಚ್ಛತಾ ಕಾರ್ಯಕ್ರಮ ವೇಳೆ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ.ಹೆಗ್ಗಡೆ, ಡಿ.ಹಷೇಂದ್ರ ಕುಮಾರ್, ಡಾ| ಬಿ.ಯಶೋವರ್ಮ, ಸೋನಿಯಾ ಯಶೋವರ್ಮ ಭೇಟಿ ನೀಡಿ ಸ್ವಯಂ ಸೇವಕರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next