Advertisement

ʼHanuManʼ ಸಿನಿಮಾ ನೋಡಿ ʼಆದಿಪುರುಷ್ʼ ನಿರ್ದೇಶಕನನ್ನು ಟ್ರೋಲ್‌ ಮಾಡಿದ ನೆಟ್ಟಿಗರು

05:15 PM Jan 12, 2024 | |

ಹೈದರಾಬಾದ್: ಟಾಲಿವುಡ್‌ ನಲ್ಲಿ ಈ ವಾರ ʼಗುಂಟೂರು ಖಾರಂʼ ಜೊತೆ ಸೂಪರ್ ಹೀರೋ ʼಹನುಮಾನ್‌‌ʼ ಸಿನಮಾ ಪೈಪೋಟಿಯಾಗಿ ತೆರೆಕಂಡಿದೆ. ಯುವನಟ ತೇಜ ಸಜ್ಜಾ ಅಭಿನಯಿಸಿರುವ ಸಿನಿಮಾಕ್ಕೆ ಪ್ರೇಕ್ಷಕರಿಂದ ಪಾಸಿಟಿವ್‌ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದೆ.

Advertisement

ಪೌರಾಣಿಕ ಕಥೆಯನ್ನೊಳಗೊಂಡಿರುವ ʼಹನುಮಾನ್‌ʼ ಸಿನಿಮಾದಲ್ಲಿವ ವಿಎಫ್‌ ಎಕ್ಸ್‌ ಹಾಗೂ ತೇಜ ಸಜ್ಜಾ ನಟನೆ ಹಾಗೂ ಪೌರಾಣಿಕ ಪಾತ್ರವನ್ನು ತೋರಿಸಿರುವ ರೀತಿಗೆ ಪ್ರೇಕ್ಷಕರು ಜೈಕಾರ ಹಾಕಿದ್ದಾರೆ. ಸಿನಿಮಾವನ್ನು ನೋಡಿ ಮೆಚ್ಚುವ ಜೊತೆಗೆ ʼಹನುಮಾನ್‌ʼ ಸಿನಿಮಾ ಹಾಗೂ ದೊಡ್ಡ ಬಜೆಟ್‌ ನಲ್ಲಿ ತಯಾರಾಗಿ ಸೋತ ʼಆದಿಪುರುಷ್‌ʼ ಸಿನಿಮಾವನ್ನು ಹೋಲಿಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸ್ವಲ್ಪ ನಿಧಾನ ಆದರೂ ಪಯಣ ಸುಗಮ..ಥ್ರಿಲ್ಲರ್‌ ಕಥೆಯಲ್ಲಿ ಸೇತುಪತಿ- ಕತ್ರಿನಾ ಅಭಿನಯವೇ ಪ್ರಧಾನ

ಹಿಂದೂ ಪುರಾಣ ರಾಮಾಯಣದ ಕಥೆಯನ್ನೊಳಗೊಂಡು ʼಆದಿಪುರುಷ್‌ʼ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಓಂ ರಾವುತ್‌ ಅವರನ್ನು ನೆಟ್ಟಿಗರು ಟ್ರೋಲ್‌ ಮಾಡಿದ್ದಾರೆ. ಆದಿಪುರುಷ್‌ ಸಿನಿಮಾದಲ್ಲಿ ರಾವಣ ಹಾಗೂ ಹನುಮಾನ್‌ ಪಾತ್ರವನ್ನು ತೋರಿಸಿದ ರೀತಿಗೆ ಪ್ರೇಕ್ಷಕರು ಆಕ್ರೋಶಗೊಂಡಿದ್ದರು.ಕಳಪೆ ವಿಎಫ್‌ ಎಕ್ಸ್‌ ನಿಂದ 600 ಕೋಟಿ ಬಜೆಟ್‌ ನಲ್ಲಿ ಲಾಭವನ್ನು‌ ಪಡೆದುಕೊಳ್ಳಲು ʼಆದಿಪುರುಷ್‌‌ ʼ ಪರದಾಡಿತು.

ಇದೀಗ ʼಹನುಮಾನ್‌‌ ʼಸಿನಿಮಾದ ವಿಎಫ್‌ ಎಕ್ಸ್‌ ನೋಡಿ ನೆಟ್ಟಿಗರು ʼಆದಿಪುರುಷ್‌ʼ ನಿರ್ದೇಶಕನನ್ನು ಟ್ರೋಲ್‌ ಮಾಡಿದ್ದಾರೆ.

Advertisement

“ಓಂ ರಾವುತ್‌ 600 ಕೋಟಿ ಬಜೆಟ್‌ ನಲ್ಲಿ ಸಾಧಿಸದ್ದನ್ನು ಪ್ರಶಾಂತ್‌ ವರ್ಮಾ ಸಣ್ಣ ಬಜೆಟ್‌ ನಲ್ಲಿ ಸಾಧಿಸಿದ್ದಾರೆ” ಒಬ್ಬರು ಬರೆದುಕೊಂಡಿದ್ದಾರೆ.

“ಓಂ ರಾವುತ್ ಅವರ ಪ್ಯಾನ್‌ ಇಂಡಿಯಾ ಹೈಪ್‌ ವೇಸ್ಟ್‌ ಆಯಿತು. ಒಮ್ಮೆ ಯೋಚಿಸಿ ಪ್ರಶಾಂತ್‌ ವರ್ಮಾ ʼಆದಿಪುರುಷ್‌ʼ ನಿರ್ದೇಶನ ಮಾಡಿ ಇದ್ದಿದ್ದರೆ ಮತ್ತೊಂದು ʼಬಾಹುಬಲಿʼ ಆಗುತ್ತಿತ್ತು” ಎಂದು ಒಬ್ಬರು ಬರೆದುಕೊಂಡಿದ್ದಾರೆ.

ಇದಲ್ಲದೆ ವಿವಿಧ ಸಿನಿಮಾಗಳ ದೃಶ್ಯಗಳನ್ನು ಕಟ್‌ ಮಾಡಿ ಓಂ ರಾವುತ್ ಅವರ ಫೋಟೋ ಹಾಕಿ ಟ್ರೋಲ್‌ ಮಾಡಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next