ಆಮ್‌ಸ್ಟೆಲ್ವೀನ್: ಆತಿಥೇಯ ನೆದರ್ಲೆಂಡ್ಸ್ ಎದುರಿನ ದ್ವಿತೀಯ ಏಕದಿನ ಪಂದ್ಯವನ್ನು 6 ವಿಕೆಟ್‌ಗಳಿಂದ ಜಯಿಸಿದ ಇಂಗ್ಲೆಂಡ್ ಸರಣಿಯನ್ನು ತನ್ನದಾಗಿಸಿಕೊಂಡಿದೆ.
ಮಳೆಯಿಂದಾಗಿ ಈ ಪಂದ್ಯವನ್ನು 41 ಓವರ್‌ಗಳಿಗೆ ಇಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ನೆದರ್ಲೆಂಡ್ಸ್ 7 ವಿಕೆಟಿಗೆ 235 ರನ್ ಗಳಿಸಿದರೆ, ಇಂಗ್ಲೆಂಡ್ 36.1 ಓವರ್‌ಗಳಲ್ಲಿ 4 ವಿಕೆಟಿಗೆ 239 ರನ್ ಬಾರಿಸಿ ವಿಜಯಿಯಾಯಿತು. ವಿಶ್ವದಾಖಲೆಯ ಮೊತ್ತದ ಮೊದಲ ಪಂದ್ಯವನ್ನು ಇಂಗ್ಲೆಂಡ್ 232 ರನ್ನುಗಳಿಂದ ಗೆದ್ದಿತ್ತು. ಅಂತಿಮ ಏಕದಿನ ಬುಧವಾರ ನಡೆಯಲಿದೆ.
ಇಂಗ್ಲೆಂಡ್ ಆರಂಭಿಕರಾದ ಫಿಲಿಪ್ ಸಾಲ್ಟ್ (77) ಮತ್ತು 100ನೇ ಏಕದಿನ ಪಂದ್ಯವಾಡಿದ ಜೇಸನ್ ರಾಯ್ (73) ಕೇವಲ 17 ಓವರ್‌ಗಳಲ್ಲಿ 139 ರನ್ ಒಟ್ಟುಗೂಡಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು. ನೆದರ್ಲೆಂಡ್ಸ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಪಂದ್ಯದಲ್ಲೇ ಸರ್ವಾಧಿಕ 78 ರನ್ ಬಾರಿಸಿದರು.
ತಲಾ 2 ವಿಕೆಟ್ ಕಿತ್ತ ಡೇವಿಡ್ ವಿಲ್ಲಿ ಮತ್ತು ಆದಿಲ್ ರಶೀದ್ ಇಂಗ್ಲೆಂಡ್‌ನ ಯಶಸ್ವಿ ಬೌಲರ್‌ಗಳು. ನೆದರ್ಲೆಂಡ್ಸ್ ಪರ ಆರ್ಯನ್ ದತ್ 2 ವಿಕೆಟ್ ಉರುಳಿಸಿದರು.