ದುಬೈ: ಸೂಪರ್ 12 ಹಂತದ ತನ್ನ ಅಂತಿಮ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಬಗ್ಗುಬಡಿದು ಸುದ್ದಿಯಾದ ನೆದರ್ಲೆಂಡ್ಸ್ 2024ರ ಟಿ20 ವಿಶ್ವಕಪ್ ಪಂದ್ಯಾವಳಿಗೆ ನೇರ ಅರ್ಹತೆ ಪಡೆದಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಆತಿಥ್ಯದಲ್ಲಿ ಈ ಪಂದ್ಯಾವಳಿ ನಡೆಯಲಿದೆ.
ಐಸಿಸಿ ನಿಯಮಾವಳಿಯಂತೆ, 2022ರ ಸೂಪರ್ -12 ಹಂತದ ಗುಂಪುಗಳ ಅಗ್ರ 4 ತಂಡಗಳಿಗೆ 2024ರ ವಿಶ್ವಕಪ್‌ಗೆ ನೇರ ಅರ್ಹತೆ ಲಭಿಸುತ್ತದೆ. ಹಾಗೆಯೇ ಈ 8 ತಂಡಗಳನ್ನು ಹೊರತುಪಡಿಸಿ ಕೂಟದ ಅತ್ಯುನ್ನತ ರ್‍ಯಾಂಕಿಂಗ್ ಹೊಂದಿರುವ 2 ತಂಡಗಳಿಗೂ ನೇರ ಪ್ರವೇಶ ಸಿಗಲಿದೆ. ಜತೆಗೆ ಆತಿಥೇಯ ರಾಷ್ಟ್ರಗಳಿಗೂ ಪಾಲ್ಗೊಳ್ಳುವ ಅವಕಾಶ ಲಭಿಸುತ್ತದೆ. ದಕ್ಷಿಣ ಆಫ್ರಿಕಾವನ್ನು ಪರಾಭವಗೊಳಿಸುವ ಮೂಲಕ ನೆದರ್ಲೆಂಡ್ಸ್ 2ನೇ ವಿಭಾಗದ ಅಂಕಪಟ್ಟಿಯಲ್ಲಿ 4ನೇ ಸ್ಥಾನಿಯಾಯಿತು.
ಇದನ್ನೂ ಓದಿ:ನಿಮ್ಮ ಸರ್ಕಾರ ಉಳಿಯಬೇಕಾದರೆ ದತ್ತಪೀಠವನ್ನು..:ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಎಚ್ಚರಿಕೆ
ಈ ಎಲ್ಲ ಮಾನದಂಡದಂತೆ 2024ರ ಟಿ20 ವಿಶ್ವಕಪ್‌ಗೆ ನೇರ ಅರ್ಹತೆ ಪಡೆದ ತಂಡಗಳೆಂದರೆ: ವೆಸ್ಟ್ ಇಂಡೀಸ್, ಯುಎಸ್‌ಎ, ಭಾರತ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ಆಸ್ಟ್ರೇಲಿಯ, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ, ಶ್ರೀಲಂಕಾ, ನೆದರ್ಲೆಂಡ್ಸ್ ಮತ್ತು ಬಾಂಗ್ಲಾದೇಶ