ನ್ಯೂಯಾರ್ಕ್: ಇತರರೊಂದಿಗೆ ಪಾರ್ಸ್‌ವರ್ಡ್ ಹಂಚಿಕೆಗೆ ನೆಟ್‌ಫ್ಲಿಕ್ಸ್ ಶೀಘ್ರದಲ್ಲೇ ಕಡಿವಾಣ ಹಾಕಲಿದೆ. ನೆಟ್‌ಫ್ಲಿಕ್ಸ್ ವೀಕ್ಷಣೆಗೆ ಹಣ ಪಾವತಿಸುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ನೆಟ್‌ಫ್ಲಿಕ್ಸ್ ನೂತನ ಸಿಇಒಗಳಾದ ಟೆಡ್ ಸರಂಡೋಸ್, ಗ್ರೆಗ್ ಪೀಟರ್, “ಈ ವರ್ಷದಲ್ಲಿ ಪಾಸ್‌ವರ್ಡ್ ಶೇರಿಂಗ್ ವ್ಯವಸ್ಥೆ ಸ್ಥಗಿತಗೊಳಿಸಲಿದ್ದೇವೆ. ದೊಡ್ಡ ಸಂಖ್ಯೆಯ ಗ್ರಾಹಕರು ಹಣ ಪಾವತಿಸದೆ ಸೇವೆ ಬಳಸಿಕೊಳ್ಳುತ್ತಿದ್ದರು.
ಇನ್ನು ಮುಂದೆ ನೆಟ್‌ಫ್ಲಿಕ್ಸ್ ವೀಕ್ಷಣೆಗೆ ಚಂದಾದಾರರಾಗಿ ಆಗುವುದು ಅನಿವಾರ್ಯವಾಗಲಿದೆ,’ ಎಂದು ತಿಳಿಸಿದ್ದಾರೆ. ಈಗಾಗಲೇ ಜಾಹೀರಾತುಗಳ ಮೇಲೆ ಕೇಂದ್ರೀಕರಿಸಿರುವ ನೆಟ್‌ಫ್ಲಿಕ್ಸ್, ಜಾಹೀರಾತು ಹೊಂದಿರುವ ಪ್ಲಾನ್‌ಗೆ ತಿಂಗಳಿಗೆ 6.99 ಡಾಲರ್ ವಿಧಿಸುತ್ತಿದೆ. ಆದರೆ ಇದು ಭಾರತಕ್ಕೆ ಅನ್ವಯವಾಗುವುದಿಲ್ಲ.