Advertisement
ನೆಟ್ ಫ್ಲಿಕ್ಸ್ ನಲ್ಲಿನ ಟೈಮರ್ ಫೀಚರ್ ಚಂದಾದಾರರಿಗೆ ವೀಕ್ಷಣೆಯ ಅನುಭವದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ ಎನ್ನಲಾಗುತ್ತಿದೆ.
Related Articles
Advertisement
*ಹೊಸ ಫೀಚರ್ ಬಹು ಟೈಮರ್ ಆಯ್ಕೆಗಳನ್ನು ಒದಗಿಸುತ್ತದೆ.
*ಜಾಗತಿಕವಾಗಿ ನೆಟ್ ಫ್ಲಿಕ್ಸ್ ಬಳಕೆದಾರರನ್ನು ಟೆಸ್ಟಿಂಗ್ ಗೆ ಪರಿಗಣಿಸಲಾಗುತ್ತದೆ.
*ಕೆಲವು ಅವಧಿಯ ನಂತರ ಸ್ಟ್ರೀಮಿಂಗ್ ಮಾಡುವುದನ್ನು ನಿಲ್ಲಿಸಲು ನೆಟ್ ಫ್ಲಿಕ್ಸ್ ಟೈಮರ್ ಫೀಚರ್ ನ್ನು ಪ್ರಾರಂಭಿಸಲಿದೆ.
*ಆಂಡ್ರಾಯ್ಡ್ ಬಳಕೆದಾರರನ್ನು ಆಯ್ಕೆ ಮಾಡಲು ನೆಟ್ ಫ್ಲಿಕ್ಸ್ ಆರಂಭದಲ್ಲಿ ಟೈಮರ್ ಫೀಚರ್ ನ್ನು ತಂದಿತ್ತು.
ಚಂದಾದಾರರಿಗಾಗಿ ನೆಟ್ ಫ್ಲಿಕ್ಸ್ ಹೊಸ ಫೀಚರ್ ನ್ನು ಟೆಸ್ಟಿಂಗ್ ಮಾಡಲು ಪ್ರಾರಂಭಿಸಿದೆ, ಅದು ವೀಕ್ಷಕರಿಗೆ ತಮ್ಮ ನೆಚ್ಚಿನ ಪ್ರದರ್ಶನ ಅಥವಾ ಚಲನಚಿತ್ರಕ್ಕಾಗಿ ಟೈಮರ್ ಅನ್ನು ಹೊಂದಿಸಲು ಅನುವು ಮಾಡಿಕೊಡುತ್ತದೆ ಎಂದು ವರದಿ ಹೇಳಿದೆ.
ಓದಿ : ಆ್ಯಕ್ಷನ್ ಕಿಂಗ್ ಧ್ರುವ ಸರ್ಜಾ ಅವರ ವಿಶೇಷ ಫೋಟೋ ಗ್ಯಾಲರಿ
ಇತ್ತೀಚಿನ ಸೇರ್ಪಡೆ ಏನು..?
ಪ್ರಸ್ತುತ ಜಾಗತಿಕವಾಗಿ ಆ್ಯಂಡ್ರಾಯ್ಡ್ ಸಾಧನಗಳಲ್ಲಿ ಆಯ್ದ ನೆಟ್ ಫ್ಲಿಕ್ಸ್ ಚಂದಾದಾರರಿಗಾಗಿ ಲೈವ್ ಆಗಿದೆ, ಯು ಎಸ್ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ತನ್ನ ವೀಕ್ಷಣೆಯ ಅನುಭವವನ್ನು ಹೆಚ್ಚಿಸಲು ಮತ್ತೊಂದು ಕ್ರಮವಾಗಿದೆ. ನೆಟ್ ಫ್ಲಿಕ್ಸ್ ವಯಸ್ಕ ಪ್ರೊಫೈಲ್ ಗಳಿಗಾಗಿ ಟೈಮರ್ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ, ಆರಂಭಿಕ ಟೆಸ್ಟಿಂಗ್ ವೇಳೆಯಲ್ಲಿ ಬರುವ ಪ್ರತಿಕ್ರಿಯೆಯನ್ನು ಗಮನಿಸಿ ಕಾಲಾಂತರದಲ್ಲಿ ಹರೆಯದ ವಯಸ್ಸಿನ ಚಂದಾದಾರರಿಗೂ ಈ ಫೀಚರನ್ನು ವಿಸ್ತರಿಸಬಹುದು ಎಂದು ಹೇಳಲಾಗುತ್ತಿದೆ.
“ನಾವು ಯಾವಾಗಲೂ ನೆಟ್ ಫ್ಲಿಕ್ಸ್ ಮೊಬೈಲ್ ಅನುಭವವನ್ನು ಸುಧಾರಿಸಲು ಹೊಸ ಮಾರ್ಗಗಳನ್ನು ಹುಡುಕುತ್ತೇವೆ. ಇದು ಕೂಡ ಅದರ ಒಂದು ಹಂತ” ಎಂದು ನೆಟ್ ಫ್ಲಿಕ್ಸ್ ನ ವಕ್ತಾರರೊಬ್ಬರು ತಿಳಿಸಿದ್ದಾರೆ.
“ಈ ಟೆಸ್ಟಿಂಗ್ ಟೈಮರ್ ಚಂದಾದಾರರ ವೀಕ್ಷಣೆಯ ಅನುಭವದ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ. ತಮ್ಮ ನೆಚ್ಚಿನ ಪ್ರದರ್ಶನ ಅಥವಾ ಚಲನಚಿತ್ರವನ್ನು ಆರಿಸಿಕೊಳ್ಳಲು ಮತ್ತು ಅದು ಮುಗಿಯುವ ಮೊದಲು ಅದನ್ನು ವಿರಾಮಗೊಳಿಸುವುದರ ಬಗ್ಗೆ ಸೂಚನೆ ನೀಡುವ ತಂತ್ರಜ್ಞಾನವನ್ನು ಹೊಂದಿದೆ.”
ಓದಿ : ಗವಿಸಿದ್ದೇಶ್ವರ ಜಾತ್ರೆ: ಶಿವಶಾಂತವೀರ ಶರಣರಿಂದ ದೀರ್ಘದಂಡ ನಮಸ್ಕಾರ
ಆ್ಯಂಡ್ರಾಯ್ಡ್ ಸಾಧನಗಳನ್ನು ಮೀರಿ ನೆಟ್ ಫ್ಲಿಕ್ಸ್ ಟೈಮರ್ ವೈಶಿಷ್ಟ್ಯವನ್ನು ವಿಸ್ತರಿಸುತ್ತದೆಯೇ ಎಂಬ ಬಗ್ಗೆ ಸ್ಪಷ್ಟತೆ ಇದುವರೆಗೆ ಇಲ್ಲ. ಆದರೇ, ಟಿವಿ ಸೆಟ್‌ಗಳು ಮತ್ತು ಡೆಸ್ಕ್ ಟಾಪ್ ಗಳು ಸೇರಿದಂತೆ ಇತರ ಸಾಧನಗಳಿಗೆ ತರಲು ಅನ್ವೇಷಿಸುತ್ತದೆ. ಎಂದು ದಿ ವರ್ಜ್ ತನ್ನ ವರದಿಯಲ್ಲಿ ಹೇಳಿದೆ.
ನೆಟ್ ಫ್ಲಿಕ್ಸ್ ನಲ್ಲಿ ಟೈಮರ್ ಅನ್ನು ಹೇಗೆ ಹೊಂದಿಸುವುದು..?
ಈ ಫೀಚರ್ ನಿಮ್ಮ ಆ್ಯಂಡ್ರಾಯ್ಡ್ ಡಿವೈಸ್ ನ್ನು ತಲುಪಿದ ನಂತರ, ಸ್ಕ್ರೀನ್ ಮೇಲಿನ ಬಲ ಮೂಲೆಯಲ್ಲಿರುವ ಕಾಸ್ಟಿಂಗ್ ಬಟನ್ ಪಕ್ಕದಲ್ಲಿ ನೀವು ಟೈಮರ್ ಐಕಾನ್ ಅನ್ನು ನೋಡುತ್ತೀರಿ . ನೀವು ಆ ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು 15 , 30 , 45 ರಿಂದ ಆಯ್ಕೆ ಮಾಡಬೇಕಾಗುತ್ತದೆ.
ಓದಿ : ನುಕ್ಯಾಡಿ ಉದ್ಭವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಸಚಿವ ಈಶ್ವರಪ್ಪ ಭೇಟಿ