ಕಾಠ್ಮಂಡು: ಪೌರತ್ವ ಮತ್ತು ಪಾಸ್‌ಪೋರ್ಟ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ನೇಪಾಲ ಉಪ ಪ್ರಧಾನಿ ಮತ್ತು ಗೃಹ ಸಚಿವರ ಸ್ಥಾನದಿಂದ ರಬಿ ಲಾಮಿಚಾನೆ ಅವರನ್ನು ಅಲ್ಲಿನ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
Advertisement
ನೇಪಾಲ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠದ ತೀರ್ಪಿನ ಪ್ರಕಾರ, ಸಂಸತ್ ಸದಸ್ಯ ತ್ವವನ್ನು ಕೂಡ ರಬಿ ಕಳೆದುಕೊಂಡಿದ್ದಾರೆ. ರಬಿ ಅವರು ಅಮೆರಿಕನ್ ಪೌರತ್ವ ಪಡೆದಿ ದ್ದಾರೆ. ಹೀಗಾಗಿ ಅವರ ನೇಪಾಲಿ ಪೌರತ್ವ ಅಕ್ರಮ ಎಂದು ಪರಿಗಣಿಸಲಾಗುತ್ತದೆ. ನೇಪಾಲಿ ಕಾನೂನಿನ ಪ್ರಕಾರ, ನೇಪಾಲದ ಪ್ರಜೆಯಾಗಿದ್ದು, ಸ್ವಯಂ ಪ್ರೇರಿತರಾಗಿ ವಿದೇಶಿ ಪೌರತ್ವ ಹೊಂದಿದರೆ, ಅವರು ನೇಪಾಲಿ ಪೌರತ್ವ ಕಳೆದುಕೊಳ್ಳುತ್ತಾರೆ.