Advertisement
ನೇಪಾಳವು 30 ವರ್ಷಗಳಲ್ಲಿ ಕಂಡ ವಿಮಾನ ಅಪಘಾತಗಳು – 27ಕಳೆದೊಂದು ದಶಕದಲ್ಲಿ ನಡೆದಿದ್ದ ದುರಂತಗಳು- 11
ಕಳೆದ 12 ವರ್ಷಗಳಲ್ಲಿ ವಿಮಾನ, ಕಾಪ್ಟರ್ ದುರಂತದಲ್ಲಿ ಸಾವು- 350
– ದೇಶದ ಹೆಚ್ಚಿನ ಭಾಗ ಪರ್ವತ ಪ್ರದೇಶಗಳಿಂದ ಕೂಡಿದೆ. ಜಗತ್ತಿನಲ್ಲಿರುವ ಅತಿ ಎತ್ತರದ 14 ಶಿಖರಗಳ ಪೈಕಿ 8 ನೇಪಾಳದಲ್ಲೇ ಇವೆ.
– ವಿಮಾನ ನಿಲ್ದಾಣಗಳು ಅಥವಾ ವಿಮಾನ ಇಳಿದಾಣಗಳು ಪರ್ವತ ಪ್ರದೇಶಗಳಲ್ಲಿಯೇ ನಿರ್ಮಾಣವಾಗಿರುವುದು.
– ಹೊಸ ವಿಮಾನ ನಿಲ್ದಾಣ ನಿರ್ಮಾಣ, ವಿಮಾನಯಾನ ಕ್ಷೇತ್ರವನ್ನು ನಿಯಂತ್ರಿಸಲು ಸಮರ್ಪಕ ಕಾನೂನು, ನಿಯಮಗಳ ಕೊರತೆ
– ಪ್ರತಿಕೂಲ ಹವಾಮಾನವೂ ವಿಮಾನಗಳ ಪತನಕ್ಕೆ ಕಾರಣ.
– ವಿಮಾನ ನಿಲ್ದಾಣಗಳು ಮೊಟ್ಟೆಯ ಆಕಾರದಲ್ಲಿ ಇದೆ. ಹೀಗಾಗಿ, ವಿಮಾನಗಳಿಗೆ ಸರಾಗವಾಗಿ ಸಂಚರಿಸಲು ಕಷ್ಟ
– 2013ರಲ್ಲಿ ಐರೋಪ್ಯ ಒಕ್ಕೂಟ ಸುರಕ್ಷತಾ ನಿಯಮಗಳನ್ನು ಉಲ್ಲೇಖೀಸಿ ನೇಪಾಳದ ವಿಮಾನಗಳಿಗೆ ನಿಷೇಧ ಹೇರಿತ್ತು. ಪ್ರಧಾನ ದುರಂತಗಳು
1. 1962 ಆ.1ರಂದು ರಾಯಲ್ ನೇಪಾಳ ಏರ್‌ಲೈನ್ಸ್‌ನ ವಿಮಾನ ಪತನ. ಇದು ಆ ದೇಶದ ಮೊದಲ ವಿಮಾನ ಅಪಘಾತ. 14 ಮಂದಿ ಸಾವು.
2. ಬೀಜಿಂಗ್‌ನಿಂದ ಧಂಗದಿ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ವಿಮಾನ ಪತನ. 25 ಮಂದಿ ದುರ್ಮರಣ.
3. 2008 ಅ.8ರಂದು ಪೂರ್ವ ನೇಪಾಳದಲ್ಲಿ ಯೆಟಿ ಏರ್‌ಲೈನ್ಸ್‌ನ ವಿಮಾನ ಪತನ. 14 ಮಂದಿ ಸಾವು
4. 2019ರಲ್ಲಿ ಅಮೆರಿಕ-ಬಾಂಗ್ಲಾ ಏರ್‌ಲೈನ್ಸ್ ವಿಮಾನ ಪತನಗೊಂಡು 51 ಮಂದಿ ಸಾವು