Advertisement

ಚೀನಾ ದೂರವಿಡಲು ಪ್ಲಾನ್ ನೇಪಾಳಕ್ಕೆ ಭಾರತದ ತೈಲ 

03:45 AM Mar 29, 2017 | Harsha Rao |

ನವದೆಹಲಿ: ಅಡುಗೆ ಅನಿಲ ಪೂರೈಕೆಗಾಗಿ ನೇಪಾಳವು ಚೀನಾದೊಂದಿಗೆ ಸಖ್ಯ ಬೆಳೆಸಲಿದೆ ಎಂಬ ಸುಳಿವು ಸಿಕ್ಕ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಭಾರತವು ನೇಪಾಳಕ್ಕೆ ಭರ್ಜರಿ ಕೊಡುಗೆ ಘೋಷಿಸಿದೆ. ಚೀನಾವನ್ನು ದೂರವಿಡುವ ಸಲುವಾಗಿ ನೇಪಾಳದೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿರುವ ಭಾರತವು 2022ರ ಮಾರ್ಚ್‌ವರೆಗೂ ತೈಲ ಪೂರೈಸುವ ವಾಗ್ಧಾನ ನೀಡಿದೆ. ಈ ಒಪ್ಪಂದದಂತೆ, ನೇಪಾಳಕ್ಕೆ ಭಾರತದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ವಾರ್ಷಿಕ ಸುಮಾರು 13 ಲಕ್ಷ ಟನ್‌ ತೈಲ ರವಾನಿಸಲಿದೆ. ಈ ಪ್ರಮಾಣವನ್ನು 2020ರ ವೇಳೆಗೆ ದುಪ್ಪಟ್ಟುಗೊಳಿಸುವ ಭರವಸೆಯನ್ನೂ ನೀಡಲಾಗಿದೆ. ಈ ಮೂಲಕ ಭಾರತದ ವ್ಯಾಪಾರಕ್ಕೆ ಅಡ್ಡಿಪಡಿಸಿ, ನೇಪಾಳದ ಪರ್ಯಾಯ ಪೂರೈಕೆದಾರನಾಗಲು ಹೊರಟಿದ್ದ ಚೀನಾದ ಆಸೆಗೆ ತಣ್ಣೀರು ಹಾಕಲಾಗಿದೆ.1974ರಿಂದಲೂ ನೇಪಾಳದ ಜತೆ ಭಾರತವು ಪೆಟ್ರೋಲಿಯಂ ವ್ಯಾಪಾರ ಒಪ್ಪಂದ ನಡೆಸಿಕೊಂಡು ಬಂದಿದೆ. ಆದರೆ, ಇತ್ತೀಚೆಗೆ ಪೆಟ್ರೋಲಿಯಂ ಪೂರೈಕೆಯಲ್ಲಿ ಸ್ವಲ್ಪಮಟ್ಟಿಗೆ ವ್ಯತ್ಯಯವಾಗಿತ್ತು. ಇದರಿಂದ ನೇಪಾಳ ಕೆಂಡಾಮಂಡಲವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next