Advertisement
ಇದರಲ್ಲಿ ಶಿಕ್ಷಣದಲ್ಲಿ ಸೇರಿಸಬೇಕಾದ ಅಂಶಗಳು, ಸುಧಾರಣೆ ಮತ್ತು ಬೋಧನೆ ಮಾಡಬೇಕಾದ ವಿಷಯಗಳನ್ನು ಕುರಿತ ವಿಷಯಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಷಯಗಳನ್ನು ಕುರಿತು ಸಾರ್ವಜನಿಕರು ತಮ್ಮ ಆಕ್ಷೇಪಣೆ ಸಲ್ಲಿಸಬಹುದಾಗಿದೆ.
ಡಿಎಸ್‌ಇಆರ್‌ಟಿ ವೆಬ್‌ಸೈಟ್‌ನಲ್ಲಿ ಇಂಗ್ಲಿಷ್ ಭಾಷೆಯಲ್ಲಿರುವ ಪ್ರತಿಯನ್ನು ಮಾತ್ರ ಅಪ್‌ಲೋಡ್ ಮಾಡಿದೆ. ಪ್ರತಿಯನ್ನು ಕನ್ನಡದಲ್ಲಿ ಅಪ್‌ಲೋಡ್ ಮಾಡಲು ನಿರ್ಲಕ್ಷಿಸಿದೆ. ಈ ಕುರಿತು ಮಾತನಾಡಿದ ಮದನ್‌ಗೊàಪಾಲ್, ಕನ್ನಡಕ್ಕೆ ಭಾಷಾಂತರಿಸಿ ಅಪ್‌ಲೋಡ್ ಮಾಡುವಂತೆ ಸಲಹೆ ನೀಡಿದ್ದೇನೆ. ಸದ್ಯದಲ್ಲಿಯೇ ಕನ್ನಡ ಪ್ರತಿಗಳನ್ನು ಕೂಡ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಪ್ರತಿಕ್ರಿಯಿಸಿದರು. 26 ಪೋಷಿಷನ್ ಪೇಪರ್‌ಗಳು
ಶಿಕ್ಷಣದಲ್ಲಿ ತಣ್ತೀಶಾಸ್ತ್ರ, ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಬುನಾದಿ ಅಕ್ಷರ ಜ್ಞಾನ ಮತ್ತು ಸಂಖ್ಯಾಜ್ಞಾನ, ಪಠ್ಯಕ್ರಮ ತ್ತು ಶಿಕ್ಷಣ ಶಾಸ್ತ್ರ, ಸಮಾಜ ವಿಜ್ಞಾನದಲ್ಲಿ ಶಿಕ್ಷಣ, ಕಲಾ ಶಿಕ್ಷಣ, ವೃತ್ತಿಪರ ಶಿಕ್ಷಣ, ವಿಜ್ಞಾನ ಶಿಕ್ಷಣ, ಗಣಿತ ಶಿಕ್ಷಣ ಮತ್ತು ವಿಮಶಾìತ್ಮಕ ಚಿಂತನೆ, ಭಾಷಾ ಶಿಕ್ಷಣ, ಪರಿಸರ ಶಿಕ್ಷಣ, ಆರೋಗ್ಯ ಮತ್ತು ಯೋಗಕ್ಷೇಮ, ಪರೀಕ್ಷೆ ಸುಧಾರಣೆ ಮತ್ತು ಸಮಗ್ರ ಪ್ರಗತಿ ಪತ್ರ, ಭಾರತದ ಜ್ಞಾನ, ಮೌಲ್ಯ ಶಿಕ್ಷಣ, ಸಂಯೋಜಿತ ಶಿಕ್ಷಣ, ಲಿಂಗತ್ವ ಶಿಕ್ಷಣ, ಶಾಲಾ ಶಿಕ್ಷಣಕ್ಕಾಗಿ ಶೈಕ್ಷಣಿಕ ತಂತ್ರಜ್ಞಾನ, ಶಿಕ್ಷಕರ ಶಿಕ್ಷಣ, ಶಾಲೆಗಳಿಗೆ ಮಾರ್ಗದರ್ಶನ ಮತ್ತು ಸಮಾಲೋಚನೆ, ಶಾಲಾ ಆಡಳಿತ ಮತ್ತು ನಾಯಕತ್ವ, ಗುಣಮಟ್ಟದ ಪಠ್ಯ ಮತ್ತು ಪಠ್ಯೇತರ ವಸ್ತುಗಳ ಪ್ರಕಾಶನ-ಸಮಸ್ಯೆಗಳು, ಸವಾಲುಗಳು ಮತ್ತು ಮುಂದಿನ ದಾರಿ, ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ನಡುವಿನ ಸಂಪರ್ಕ, ಶಾಲಾ ಶಿಕ್ಷಣಕ್ಕೆ ಪರ್ಯಾಯ ಮಾರ್ಗಗಳು, ವಯಸ್ಕರ ಶಿಕ್ಷಣ, ಶಾಲಾ ಸಂಕೀರ್ಣ ಎನ್ನುವ ವಿಷಯಗಳ ಪ್ರತಿಯನ್ನು ಅಪ್‌ಲೋಡ್ ಮಾಡಲಾಗಿದೆ.
Related Articles
ಕೇಂದ್ರ ಸರಕಾರವು ಎನ್‌ಇಪಿ ಆಧಾರದಲ್ಲಿ ರಚಿಸಬೇಕಾದ ಪಠ್ಯಪುಸ್ತಕಗಳು ಹೇಗಿರಬೇಕು ಎನ್ನುವ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್) ಅ. 4ರಂದು ಪ್ರಕಟಿಸಲಿದೆ. ಇದರಲ್ಲಿ ರಾಜ್ಯದಿಂದ ಕಳುಹಿಸಿರುವ ಪೊಜಿಷನ್ ಪೇಪರ್‌ಗಳ ವರದಿಯನ್ನು ಕೂಡ ಪರಿಗಣಿಸಲಾಗುತ್ತದೆ. ಇದೇ ರೀತಿ ದೇಶಾದ್ಯಂತ ಇತರ ರಾಜ್ಯಗಳಿಂದ 850 ವರದಿಗಳನ್ನು ಕಳುಹಿಸಿದ್ದು, ಎಲ್ಲವನ್ನು ಪರಿಗಣಿಸಿ ಅಂತಿಮ ಎನ್‌ಸಿಎಫ್ ವರದಿ ಸಿದ್ಧವಾಗಲಿದೆ.
Advertisement