ಮಂಗಳೂರು : ಮಂಗಳೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯಲ್ಲಿ ಕಳೆದ ಸೆಪ್ಟಂಬರ್/ಅಕ್ಟೋಬರ್‌ನ ಅಂತಿಮ ಸೆಮಿಸ್ಟರ್‌ನ ಹಾಗೂ ನಾಲ್ಕನೇ ಸೆಮಿಸ್ಟರ್‌ನ ಪದವಿ ಪರೀಕ್ಷೆಗಳ ಫಲಿ ತಾಂಶ ಪ್ರಕಟಿಸಲಾಗಿದ್ದು ಆರನೇ ಸೆಮಿಸ್ಟರ್‌ನ ಅಂಕಪಟ್ಟಿಗಳನ್ನು ವಿತರಿಸಲಾಗಿದೆ ಹಾಗೂ ಯುಯುಸಿಎಂಎಸ್ 2ನೇ ಸೆಮಿಸ್ಟರ್ ಮೌಲ್ಯ ಮಾಪನ ಮುಕ್ತಾಯವಾಗಿದ್ದು ಫಲಿತಾಂಶ ಹಂತ ಪ್ರಗತಿಯಲ್ಲಿದೆ. ಫೆ. 15ರ ಒಳಗೆ ಫಲಿತಾಂಶ ನೀಡಲಾಗುವುದು ಎಂದು ಕುಲಸಚಿವ (ಪರೀಕ್ಷಾಂಗ) ಪ್ರೊ| ಪಿ.ಎಲ್. ಧರ್ಮ ತಿಳಿಸಿದ್ದಾರೆ.
2023 ಫೆಬ್ರವರಿ/ಮಾರ್ಚ್ ಯುಯುಸಿಎಂ ಎಸ್ 3ನೇ ಸೆಮಿಸ್ಟರ್ ಹಾಗೂ ಅನುತ್ತೀರ್ಣರಾದ ವಿದ್ಯಾರ್ಥಿಗಳ 1ನೇ ಸೆಮಿಸ್ಟರ್ ಪರೀಕ್ಷಾ ಕಾರ್ಯ ಫೆ. 6ರಿಂದ ಆರಂಭಗೊಳ್ಳಲಿದೆ. ಈ ನಡುವೆ ಕೆಲವು ಫಲಿತಾಂಶಗಳು ತಡವಾಗಿ ಪ್ರಕಟಗೊಂಡು ಇವುಗಳು ಬಾಕಿ ಉಳಿದ ಅಂಕಪಟ್ಟಿಗಳನ್ನು ಫೆ. 10ರೊಳಗೆ ವಿತರಿಸಲಾಗುವುದು. ಅಂಕಪಟ್ಟಿಗಳನ್ನು ಮುದ್ರಿಸಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲು ಜ. 31ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನವಾದಂತೆ ಫೆ. 10ರ ಒಳಗೆ ವಿತರಿಸ ಲಾಗುವುದು. ಯುಯುಸಿಎಂಎಸ್‌ನ ಅಡಿಯಲ್ಲಿ ಬರುವ ಎಲ್ಲ ಪರೀಕ್ಷಾ ಹಾಗೂ ಫಲಿತಾಂಶ ವಿವರಗಳನ್ನು ಡಿಜಿಲಾಕರ್‌ಗೆ ವರ್ಗಾಯಿಸಲಾ ಗುವುದು ಎಂದು ತಿಳಿಸಿದ್ದಾರೆ.
ಕೊರೊನಾ ಸಂದರ್ಭ ಪರೀಕ್ಷೆಗೆ ಗೈರು ಹಾಜರಾದ ವಿದ್ಯಾರ್ಥಿಗಳಿಗೆ ಮತ್ತೂಂದು ಅವಕಾಶ ನೀಡಿ ಡಿಸೆಂಬರ್ ಹಾಗೂ ಜನವರಿಯಲ್ಲಿ ವಿಶೇಷ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಿ ಅಂಕ ಪಟ್ಟಿಯನ್ನೂ ನೀಡಲಾಗಿದೆ. ಗೊಂದಲಗಳಿರುವ ಫಲಿತಾಂಶಗಳನ್ನು 2023 ಫೆ. 10ರ ಒಳಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಅಂಚೆ ಮೂಲಕ ಉತ್ತರಪತ್ರಿಕೆ; ಸೂಚನೆ ಹಿಂಪಡೆದ ವಿ.ವಿ.!
ಪರೀಕ್ಷೆಯ ಅನಂತರ ಉತ್ತರಪತ್ರಿಕೆಗಳನ್ನು ಅಂಚೆಯ ಮುಖಾಂತರ ಕಳುಹಿಸುವ ಪ್ರಸ್ತಾವನೆ ಪತ್ರ ಹೊರಡಿಸಿದ ಅನಂತರ ಕಾಲೇಜುಗಳಿಂದ ಉತ್ತಮ ಪ್ರತಿಕ್ರಿಯೆ ಬಾರದಿರುವುದರಿಂದ ಅಂಚೆ ಮೂಲಕ ಉತ್ತರ ಪತ್ರಿಕೆ ಸಂಗ್ರಹಿಸುವ ಪ್ರಸ್ತಾವನೆ ಯನ್ನು ಹಿಂಪಡೆದು ಹಿಂದೆ ಚಾಲ್ತಿಯಲ್ಲಿದ್ದ ಪದ್ಧತಿಯನ್ನು ಮುಂದುವರಿಸಲಾಗುವುದು. ಹಾಗೆಯೇ ವಿಕೇಂದ್ರಿತ ಮೌಲ್ಯಮಾಪನದ ಬದಲು ಕೇಂದ್ರೀಕೃತ ಮಾಲ್ಯಮಾಪನ ನಡೆಸುವಂತೆ ಯುಯುಸಿಎಂಎಸ್‌ನಿಂದ ನಿರ್ದೇಶನ ಬಂದಿರುವುದರಿಂದ ಮುಂದಿನ ಮೌಲ್ಯ ಮಾಪನ ಕೇಂದ್ರೀಕೃತ ವ್ಯವಸ್ಥೆಯಿಂದ ನಡೆಯುತ್ತದೆ ಎಂದು ಪ್ರೊ| ಧರ್ಮ ತಿಳಿಸಿದ್ದಾರೆ.