Advertisement

ಗುಲಾಮಿ ಮನಸ್ಥಿತಿ ತೊಡೆದು ಹಾಕಲು ಎನ್‌ಇಪಿ ಸಹಾಯಕ: ಹೊಸಬಾಳೆ

09:52 PM Feb 06, 2023 | Team Udayavani |

ಮೈಸೂರು: ಕಳೆದ 7 ದಶಕಗಳಿಂದಿದ್ದ ಯುರೋಪ್‌ ಕೇಂದ್ರಿತ ಮೆಕಾಲೆ ಶಿಕ್ಷಣ ಪದ್ಧತಿ ಮೂಲಕ ತಲೆಯಲ್ಲಿ ತುಂಬಿಕೊಂಡಿರುವ ಗುಲಾಮಿ ಮನಸ್ಥಿತಿಯನ್ನು 2020ರ ರಾಷ್ಟ್ರೀಯ ಶಿಕ್ಷಣ ನೀತಿ ತೊಡೆ ದು  ಹಾ ಕ ಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹೇಳಿದರು.

Advertisement

ಮೈಸೂರಿನ ಬನ್ನಿಮಂಟಪದಲ್ಲಿರುವ ಜೆಎಸ್‌ಎಸ್‌ ವೈದ್ಯಕೀಯ ಮಹಾ ವಿದ್ಯಾಲಯದ  ರಾಜೇಂದ್ರ ಭವನದಲ್ಲಿ ಸೋಮವಾರ ಬೆಳಗ್ಗೆ ನಡೆದ ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನ ಅಕಾಡೆಮಿಯ 13ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ನಿಜವಾದ ಶಿಕ್ಷಣವು ಚಾರಿತ್ರ್ಯ ನಿರ್ಮಾಣ, ವ್ಯಕ್ತಿತ್ವ ಅಭಿವೃದ್ಧಿ, ಕೌಶಲ ವೃದ್ಧಿ, ಪ್ರಾಮಾಣಿಕ ಬೌದ್ಧಿಕಶಕ್ತಿ, ವಿಶ್ವಾಸದ ಜತೆಗೆ ಸಮಾಜಕ್ಕೆ ಉತ್ತಮ ಕಾಣಿಕೆ ನೀಡುವ ಮನೋಭಾವವುಳ್ಳವರನ್ನು ನಿರ್ಮಿಸಬೇಕು ಎಂದರು.

ಎನ್‌ಇಪಿ ಉಪಯೋಗ
ನಾವು ಶಿಕ್ಷಣದ ಮೂಲಕ ನಾಗರಿಕ ಸಮಾಜವನ್ನು ನಿರ್ಮಿಸಬೇಕೆ ಹೊರತು ಕಾರ್ಖಾನೆಯನ್ನಲ್ಲ. ಶಿಕ್ಷಣವು ಮನುಷ್ಯನ ವ್ಯಕ್ತಿತ್ವವನ್ನು ಉತ್ತಮಪಡಿಸಬೇಕು. 2020ರಲ್ಲಿ ರೂಪು ಗೊಂಡ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ಪೂರಕವಾಗಿದ್ದು, ಇಂದಿನ ಶಿಕ್ಷಣ ಯುಗಕ್ಕೆ ಅನುಕೂಲವಾಗಿದೆ. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ನೀಡುವ ಮತ್ತು ಸಮಾನ ಶಿಕ್ಷಣ ನೀಡುವ ಉದ್ದೇಶ ಈ ನೀತಿಯಲ್ಲಿದೆ. ಇದು ಜಾಗತಿಕ ಜ್ಞಾನವನ್ನು ಹೊಂದಿದ ಸೂಪರ್‌ಪವರ್‌ ರಾಷ್ಟ್ರವನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್‌, ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನ ಅಕಾಡೆಮಿ ಕುಲಪತಿ ಡಾ| ಸುರೀಂದರ್‌ ಸಿಂಗ್‌, ಪ್ರೊ ಛಾನ್ಸಲರ್‌ ಡಾ| ಬಿ.ಸುರೇಶ್‌, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ| ಸಿ.ಜಿ. ಬೆಟಸೂರಮಠ, ಕುಲಸಚಿವ ಡಾ| ಬಿ. ಮಂಜುನಾಥ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ| ಆರ್‌. ಸುಧೀಂದ್ರ ಭಟ್‌ ಇದ್ದರು.

2,339 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
ಘಟಿಕೋತ್ಸವದಲ್ಲಿ ವಿವಿಧ ನಿಕಾಯಗಳಲ್ಲಿ ಪದವಿ ಪಡೆದ 2,339 ವಿದ್ಯಾರ್ಥಿಗಳಲ್ಲಿ 65 ಮಂದಿಗೆ ಪಿಎಚ್‌ಡಿ, 6 ವಿದ್ಯಾರ್ಥಿಗಳಿಗೆ ಡಿಎಂ (ಡಾಕ್ಟರ್‌ ಆಫ್ ಮೆಡಿಸಿನ್‌) ಮತ್ತು ಎಂಸಿಎಚ್‌ ಪದವಿಯನ್ನು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಪ್ರದಾನ ಮಾಡಿದರು. ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ 60 ಮಂದಿಗೆ ಒಟ್ಟು 83 ಪದಕ ವಿತರಿಸಲಾಯಿತು. ಸಂಸ್ಕೃತಿ ಶ್ರೇಣಿಕ್‌ ಪಾಟೀಲ್‌ 4, ಪಿ.ಮೋನಿಕಾ, ಡಾ| ಎಸ್‌.ಹಂಸನಂದಿನಿ, ಶ್ರೇಯನ್ಸ್‌ ಡರ್ಲಾ, ಸನಾಂದನ್‌ ಮಲ್ಹೋತ್ರಾ, ಜಿ.ರಮ್ಯಶ್ರೀ ತಲಾ ಮೂರು ಚಿನ್ನದ ಪದಕ ಪಡೆದುಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next