Advertisement

ಡಿಸೆಂಬರ್‌ನಿಂದ ಅಂಗನವಾಡಿಯಲ್ಲಿ ಎನ್‌ಇಪಿ ಜಾರಿ: ಕಾರ್ಯಕರ್ತೆಯರಿಗೆ ತರಬೇತಿ ಇನ್ನೂ ನೀಡಿಲ್ಲ

12:39 PM Sep 27, 2022 | Team Udayavani |

ಉಡುಪಿ: ರಾಜ್ಯ ಸರಕಾರ ಡಿಸೆಂಬರ್‌ನಿಂದ ಅಂಗನವಾಡಿಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕೆ ಮುಂದಾಗಿದ್ದು, ಪೂರಕ ಪಠ್ಯಕ್ರಮ ರಚಿಸುವ ನಿಟ್ಟಿನಲ್ಲಿ ಕೇಂದ್ರದಿಂದ ಬರಬೇಕಾದ ಪಠ್ಯಕ್ರಮಕ್ಕಾಗಿ ಕಾಯುತ್ತಿದೆ.

Advertisement

ಈವರೆಗೂ ಅಂಗನವಾಡಿ ಮಕ್ಕಳ ಬೋಧನೆಗೆ ನಿರ್ದಿಷ್ಟ ಚೌಕಟ್ಟು ಇರಲಿಲ್ಲ. ಬಹುತೇಕ ಅಂಗನವಾಡಿಗಳಲ್ಲಿ ಮಕ್ಕಳು ಬೆಳಗ್ಗೆ ಬಂದು ತಿಂಡಿ, ಮಧ್ಯಾಹ್ನದ ಊಟ ಪೂರೈಸಿ ವಾಪಸಾಗುತ್ತಿದ್ದರು. ಕಲಿಕೆಗೆ ಆದ್ಯತೆ ತೀರಾ ಕಡಿಮೆಯಿತ್ತು. ಎನ್‌ಇಪಿ ಅನುಷ್ಠಾನದ ಅನಂತರ ಆಟದ ಮೂಲಕ ಕಲಿಕೆಗೆ ಆದ್ಯತೆ ಸಿಗಲಿದೆ.

ಸರಕಾರಿ ಶಾಲಾ ವ್ಯಾಪ್ತಿಗೆ ಅಂಗನವಾಡಿಯನ್ನು ತರಬೇಕು ಎಂಬ ಚರ್ಚೆ ಅನೇಕ ವರ್ಷಗಳಿಂದ ನಡೆಯುತ್ತಿದೆ. ಇದಕ್ಕಾಗಿ ತಜ್ಞರ ಸಮಿತಿ ರಚಿಸಲಾಗಿದೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅವರ ಸಂಘಟನೆಯವರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಶೈಕ್ಷಣಿಕ ಜವಾಬ್ದಾರಿಯನ್ನು ಶಾಲೆಗೆ, ಮಕ್ಕಳ ಆಹಾರ, ಪೌಷ್ಟಿಕತೆ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಹಿಸುವ ಬಗ್ಗೆ ಸರಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಇದು ಅಂತಿಮವಾದರೆ ಎನ್‌ಇಪಿ ಅನುಷ್ಠಾನ ಇನ್ನಷ್ಟು ಸಲೀಸಾಗಲಿದೆ.

ಕಾರ್ಯಕರ್ತೆಯರಿಗೆ ಕೈಪಿಡಿ
40 ವರ್ಷ ಮೇಲ್ಪಟ್ಟ ಹಾಗೂ ಎಸೆಸೆಲ್ಸಿ, ಪಿಯುಸಿ ಮತ್ತು ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಂಗನವಾಡಿ ಕಾರ್ಯಕರ್ತೆ (ಶಿಕ್ಷಕಿ) ಯರಿಗೆ ಎನ್‌ಇಪಿ ಬೋಧನಾ ತರಬೇತಿ ನೀಡಲಾಗುತ್ತದೆ. ಪಠ್ಯಕ್ರಮದ ಅನುಸಾರ ಕಾರ್ಯಕರ್ತೆಯರಿಗೆ ಬೋಧನ ಕೈಪಿಡಿ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಡಿಸೆಂಬರ್‌ನಿಂದಲೇ ಅಂಗನವಾಡಿಗಳಲ್ಲಿ ಎನ್‌ಇಪಿ ಜಾರಿ ಮಾಡಲಿದ್ದೇವೆ. ರಾಷ್ಟ್ರ ಮಟ್ಟದ ಪಠ್ಯಕ್ರಮ ಶೀಘ್ರದಲ್ಲೇ ಸಿಗಲಿದ್ದು, ಅದರ ಆಧಾರದಲ್ಲಿ ರಾಜ್ಯಕ್ಕೆ ಅನ್ವಯವಾಗುವಂತಹ ಪಠ್ಯಕ್ರಮವನ್ನು ರಚಿಸಿಕೊಳ್ಳಲಿದ್ದೇವೆ. ಕಾರ್ಯಕರ್ತೆಯರಿಗೆ 6 ತಿಂಗಳಿಂದ 1 ವರ್ಷದ ತರಬೇತಿಯನ್ನು ಹಂತ ಹಂತವಾಗಿ ನೀಡಲಿದ್ದೇವೆ.
– ಬಿ.ಸಿ. ನಾಗೇಶ್‌, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಚಿವ

Advertisement

ಶಾಲಾ ಪೂರ್ವ ಶಿಕ್ಷಣದಲ್ಲಿ ಎನ್‌ಇಪಿ ಅನುಷ್ಠಾನಕ್ಕೆ ಈಗಾಗಲೇ 6 ಉಪಸಮಿತಿ ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಅವುಗಳ ಶಿಫಾರಸಿನಂತೆ ಪ್ರತ್ಯೇಕ ಪಠ್ಯಕ್ರಮ ರಚಿಸಲಾಗುತ್ತದೆ. 20 ಸಾವಿರ ಅಂಗನವಾಡಿಗಳಲ್ಲಿ ಈ ವರ್ಷದಲ್ಲೇ ಅನುಷ್ಠಾನ ಮಾಡುವ ಗುರಿಯಿದೆ.
– ಹಾಲಪ್ಪ ಆಚಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ

ಇದನ್ನೂ ಓದಿ : ಯಾವುದೇ ಭ್ರಷ್ಟಾಚಾರ, ಗಳಿಕೆಗಿಂತ ಹೆಚ್ಚಿನ ಆಸ್ತಿ ವಿವರ ಇದ್ದರೆ ಹಂಚಿಕೊಳ್ಳಿ : ಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next