Advertisement

ನೆಲಮಂಗಲ: ಹೆದ್ದಾರಿ ಫ್ಲೈ ಓವರ್ ನಲ್ಲಿ ಲಾರಿಗಳ ನಡುವೆ ಅಪಘಾತ;ಸಂಚಾರ ಅಸ್ತವ್ಯಸ್ತ

06:44 PM Feb 26, 2022 | Team Udayavani |

ನೆಲಮಂಗಲ: ಸಮೀಪದ ಅಡಕಿಮಾರನಹಳ್ಳಿ ಬಳಿ ಹೆದ್ದಾರಿ ಫ್ಲೈ ಓವರ್ ರಸ್ತೆಯಲ್ಲಿ ಲಾರಿಗಳ ನಡುವೆ ಶನಿವಾರ ಸಂಜೆ ಅಪಘಾತ ಸಂಭವಿಸಿದೆ.

Advertisement

ನೆಲಮಂಗಲ ಬೆಂಗಳೂರು ರಸ್ತೆಯಲ್ಲಿ ಕಿಲೋಮೀಟರ್ ದೂರದವರೆಗೂ ಸಂಚಾರ ಅಸ್ತವ್ಯಸ್ತ ವಾಗಿದ್ದು ಹೆದ್ದಾರಿ ಪ್ರಯಾಣಿಕರು ಹೈರಾಣಾಗಿದ್ದಾರೆ.

ಒಂದು ಲಾರಿ ಪಲ್ಟಿಯಾಗಿದ್ದು, ಇನ್ನೊಂದು ಫ್ಲೈ ಓವರ್ ತಡೆಗೋಡೆಗೆ ಬಂದಿದೆ. ಅಪಘಾತದಿಂದ ಎರಡು ಬದಿಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಧಾವಿಸಿ‌ಸೂಕ್ತ‌ ಮುನ್ನೆಚ್ಚರಿಕೆ ಕ್ರಮ ತೆಗದುಕೊಡಿದ್ದಾರೆ. ಎರಡು ಲಾರಿಗಳ ತೆರವಿಗೆ ನೆಲಮಂಗಲ‌ಸಂಚಾರಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next