Advertisement

ನೆರೆ ಹಾವಳಿಗೂ, ಆಪ್ಟಿಕಲ್‌ ಫೈಬರ್‌ ಕೇಬಲ್‌ಗ‌ೂ ನಂಟು

11:33 AM Jan 20, 2018 | Team Udayavani |

ಬೆಂಗಳೂರು: ಪ್ರತಿ ವರ್ಷದ ಮಳೆಗಾಲದಲ್ಲಿ ನಗರದಲ್ಲಿ ಉಂಟಾಗುವ ನೆರೆ ಹಾವಳಿಗೂ ಮತ್ತು ಆಪ್ಟಿಕಲ್‌ ಫೈಬರ್‌ ಕೇಬಲ್‌ಗ‌ೂ ಸಂಬಂಧವಿದೆ ಎನ್ನುತ್ತಾರೆ ತಜ್ಞರು. ನಗರದ ಕೋರ್‌ ಏರಿಯಾದಲ್ಲಿ ಹಾದುಹೋಗಿರುವ ಸಾವಿರಾರು ಕಿ.ಮೀ. ಪೈಪ್‌ಗ್ಳ ಶೇ. 25ರಿಂದ 30ರಷ್ಟು ಜಾಗವನ್ನು ಈ ಒಎಫ್ಸಿ ಡಕ್ಟ್ಗಳು ಆಕ್ರಮಿಸಿಕೊಂಡಿವೆ. ಇದರಿಂದ ನೀರಿನ ಸರಾಗ ಹರಿವಿಗೆ ಅಡತಡೆ ಉಂಟಾಗಿ, ನೆರೆಗೆ ಎಡೆಮಾಡಿಕೊಡುತ್ತಿವೆ.

Advertisement

ಪಾಲಿಕೆ ಮೂಲಗಳ ಪ್ರಕಾರ ನಗರದ ನೆಲದ ಆಳದಲ್ಲಿ ಹತ್ತಲ್ಲ; ನೂರಲ್ಲ. 2100 ಕಿ.ಮೀ. ಉದ್ದದ ಒಳಚರಂಡಿ ಮತ್ತು ಮ್ಯಾನ್‌ಹೋಲ್‌ಗ‌ಳಲ್ಲಿ ಸುಮಾರು 6,500 ಕಿ.ಮೀ. ಉದ್ದದ ಆಪ್ಟಿಕಲ್‌ ಫೈಬರ್‌ ಕೇಬಲ್‌ಗ‌ಳು ಹಾದುಹೋಗಿವೆ. ಒಂದು ಒಎಫ್ಸಿ ಡಕ್ಟ್ ಸುತ್ತಳತೆ ಎರಡೂವರೆ ಇಂಚು. ಸಾಮಾನ್ಯವಾಗಿ ಒಳಚರಂಡಿ ಪೈಪ್‌ಗ್ಳ ಸುತ್ತಳತೆ ಒಂಬತ್ತು ಇಂಚು ಇರುತ್ತದೆ. ವೇಗವಾಗಿ ಹರಿದುಬರುವ ನೀರಿಗೆ ಈ ಒಎಫ್ಸಿಗಳು ತಡೆಯೊಡ್ಡುತ್ತಿವೆ.

ಕ್ರಮ ಜರುಗಿಸುತ್ತಿಲ್ಲ: ರಾಜಾಜಿನಗರದ ಭಾಷ್ಯಂ ವೃತ್ತ, ಜಯನಗರ, ಗಾಂಧಿ ಬಜಾರ್‌, ಮಲ್ಲೇಶ್ವರ 18ನೇ ವೃತ್ತ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಮಳೆಗಾಲದಲ್ಲಿ ಉಂಟಾಗುವ ನೆರೆಗೆ ಕೇವಲ ರಾಜಕಾಲುವೆಗಳ ಒತ್ತುವರಿ ಕಾರಣವಲ್ಲ; ಒಎಫ್ಸಿಗಳ ಪಾತ್ರವೂ ದೊಡ್ಡದಿದೆ. ಅಷ್ಟೇ ಅಲ್ಲ, ಈ ಒಎಫ್ಸಿಗಳು ಸೃಷ್ಟಿಸುತ್ತಿರುವ ಅವಾಂತರದ ಬಗ್ಗೆ ಜಲಮಂಡಳಿ ಮತ್ತು ಬಿಬಿಎಂಪಿಗೂ ಅರಿವಿದೆ. ಆದರೆ, ಸರ್ವಿಸ್‌ ಪ್ರೊವೈಡರ್‌ಗಳಾಗಲಿ ಅಥವಾ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಆಗುತ್ತಿಲ್ಲ ಎಂದು ಬಿಬಿಎಂಪಿ ಪ್ರತಿಪಕ್ಷದ ಮಾಜಿ ಉಪನಾಯಕ ಎನ್‌.ಆರ್‌. ರಮೇಶ್‌ ಆರೋಪಿಸಿದ್ದಾರೆ. 

ಸಮಸ್ಯೆ: ಸಮಸ್ಯೆ ಉಂಟುಮಾಡುವುದರ ಜತೆಗೆ ಪಾಲಿಕೆಯನ್ನೂ ಈ ಸರ್ವಿಸ್‌ ಪ್ರೊವೈಡರ್‌ಗಳು ವಂಚಿಸುತ್ತಿದ್ದಾರೆ. ಪ್ರತಿ ಮೀಟರ್‌ಗೆ 850 ರೂ. ನೆಲಬಾಡಿಗೆ ಇದೆ. ಆದರೆ, ಒಂದಕ್ಕೆ ಅನುಮತಿ ಪಡೆದು, ಮೂರ್‍ನಾಲ್ಕು ಕೇಬಲ್‌ಗ‌ಳನ್ನು ಹಾಕಲಾಗುತ್ತದೆ. ಇದರಿಂದ ಪಾಲಿಕೆಗೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಇನ್ನು ವಸತಿ ಪ್ರದೇಶಗಳಲ್ಲಿ ಈ ಕೇಬಲ್‌ಗ‌ಳು ವಿದ್ಯುತ್‌ ಕಂಬಗಳು, ಮರಗಳ ಮೇಲೆಲ್ಲಾ ಎಳೆಯಲಾಗುತ್ತದೆ. ಅನಾಹುತಕ್ಕೂ ಕಾರಣವಾಗಿವೆ.

ನೀರಿನ ಪೈಪ್‌ಗ್ಳಲ್ಲೇ ಯಾಕೆ?: ಒಎಫ್ಸಿ ಅಳವಡಿಕೆ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರ ನಿಯಮದ ಪ್ರಕಾರ ನೆಲದಿಂದ 2 ಅಡಿಗಿಂತ ಹೆಚ್ಚು ಮತ್ತು 4 ಅಡಿಗಿಂತ ಕಡಿಮೆ ಆಳದಷ್ಟು ಭೂಮಿಯನ್ನು ಅಗೆದು, ಕೇಬಲ್‌ಗ‌ಳನ್ನು ಹಾಕಬೇಕು. ಆದರೆ, ಹೀಗೆ ನೆಲವನ್ನು ಕೊರೆಯಲು ಉಪ ಗುತ್ತಿಗೆದಾರರು ಪ್ರತಿ ಮೀಟರ್‌ಗೆ 515 ರೂ. ಬಾಡಿಗೆ ವಿಧಿಸುತ್ತಾರೆ.

Advertisement

ಅಲ್ಲದೆ, ಕೇಬಲ್‌ ಅಳವಡಿಕೆಗೆ ಸುರಂಗವನ್ನು ನಿರ್ಮಿಸುವ ಎಚ್‌ಡಿಡಿ (ಹೈಡ್ರೋ ಡ್ರೈವ್‌ ಡ್ರಿಲ್ಲಿಂಗ್‌) ಯಂತ್ರದ ಬ್ಲೇಡ್‌ ತುಂಬಾ ದುಬಾರಿ. ಹಾಗಾಗಿ, ತುಸು ದೂರ ಕೊರೆದು, ಅದೇ ಮಾರ್ಗದಲ್ಲಿರುವ ನೀರಿನ ಅಥವಾ ಒಳಚರಂಡಿಯ ಪೈಪ್‌ಗ್ಳಲ್ಲಿ ಈ ಕೇಬಲ್‌ಗ‌ಳನ್ನು ತೂರಿಸಲಾಗುತ್ತದೆ. ಇದು ಸಮಸ್ಯೆಯಾಗಿ ಪರಿಣಮಿಸುತ್ತಿದೆ ಎಂದು ಎನ್‌.ಆರ್‌. ರಮೇಶ್‌ ದೂರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next