Advertisement

ಭಾರತ ತಂಡಕ್ಕಾಗಿ ನೇಹಾ ದುಫಿಯಾ ಅಭಿಯಾನ

01:04 AM Jun 04, 2019 | Sriram |

ವಿಶ್ವಕಪ್‌ ಕ್ರಿಕೆಟ್‌ ಜ್ವರ ಏರುತ್ತಿರುವಂತೆಯೇ ಬಹುರಾಷ್ಟ್ರೀಯ ಕಂಪೆನಿಗಳು ನಾನಾ ರೀತಿಯಲ್ಲಿ ಅದರ ಜನಪ್ರಿಯತೆಯನ್ನು ತಮ್ಮ ವ್ಯಾಪಾರ ವಿಸ್ತರಣೆಗೆ ಬಳಸಿಕೊಳ್ಳುತ್ತಿವೆ. ಈ ಸಾಲಿಗೆ ಹೊಸ ಸೇರ್ಪಡೆ “ಡೇನಿಯಲ್‌ ವೆಲ್ಲಿಂಗ್ಟನ್‌’ ಕೈಗಡಿಯಾರ ಕಂಪೆನಿ. ವಿಶ್ವಕಪ್‌ ಕ್ರಿಕೆಟ್‌ ಕೂಟದಲ್ಲಿ ಭಾರತವನ್ನು ಹುರಿದುಂಬಿಸುವ ಸಲುವಾಗಿ ಡೇನಿಯಲ್‌ ವೆಲ್ಲಿಂಗ್ಟನ್‌ ಬಾಲಿವುಡ್‌ ತಾರೆಯರು ಮತ್ತು ಕ್ರಿಕೆಟಿಗರ ನ್ನೊಳಗೊಂಡಿರುವ “ಅವರ್‌ ಮೊಮೆಂಟ್‌ ಈಸ್‌ ನೌ’ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ.

Advertisement

ವೀಡಿಯೋ ರೂಪದಲ್ಲಿರುವ ಈ ಅಭಿಯಾನಕ್ಕೆ ಬಾಲಿವುಡ್‌ ತಾರೆ ನೇಹಾ ದುಫಿಯಾ ಇತ್ತೀಚೆಗೆ ಚಾಲನೆ ನೀಡಿದ್ದಾರೆ. ನಟ ಆಯುಷ್ಮಾನ್‌ ಖುರಾನ, ಕ್ರಿಕೆಟಿಗರಾದ ದಿನೇಶ್‌ ಕಾರ್ತಿಕ್‌, ಕುಲದೀಪ್‌ ಯಾದವ್‌ ಮತ್ತು ಯಜುವೇಂದ್ರ ಚಾಹಲ್‌ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಆಯ್ದ ಸಿಟಿ ಮಾಲ್‌ಗ‌ಳಲ್ಲಿ ಡೇನಿಯಲ್‌ ವೆಲ್ಲಿಂಗ್ಟನ್‌ನ ಬ್ಲೂ ಕ್ರಿಕೆಟ್‌ ಬೇಸ್‌ವಾಟರ್‌ ಬ್ರಾಂಡ್‌ ಕೈಗಡಿಯಾರವನ್ನು ಖರೀದಿಸಿದರೆ ಅದರ ಜತೆಗಿರುವ ವೀಡಿಯೋದಲ್ಲಿ ಈ ಹಾಡನ್ನು ವೀಕ್ಷಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next