Advertisement

ಉ. ಪ್ರ : ಮಾದರಿ ಸಂಗ್ರಹಿಸದೇ ಆರ್‌ ಟಿ-ಪಿಸಿಆರ್ ಪರೀಕ್ಷಾ ಕಿಟ್ ಗಳು ಪ್ಯಾಕ್..!

02:28 PM Jun 06, 2021 | Team Udayavani |

ಬಸ್ತಿ :  ಉತ್ತರ ಪ್ರದೇಶದ ಬಸ್ತಿ ಯಲ್ಲಿರುವ ಕೋವಿಡ್ 19  ಸೋಂಕಿತರಿಂದ ಅಗತ್ಯವಾದ ಮಾದರಿಗಳನ್ನು ತೆಗೆದುಕೊಳ್ಳದೆ ಆರೋಗ್ಯ ಇಲಾಖೆ ಕಾರ್ಯಕರ್ತರು ಆರ್‌ ಟಿ-ಪಿಸಿಆರ್ ಪರೀಕ್ಷಾ ಕಿಟ್‌ ಗಳನ್ನು ಹಾಗಯೇ ಪ್ಯಾಕ್ಮಾಡಿದ್ದಾರೆ ಎಂಬ ವೀಡಿಯೋ ಈಗ ಬರಿಹರಂಗವಾಗಿದೆ.

Advertisement

ಕೋವಿಡ್ 19  ಪರೀಕ್ಷೆಯನ್ನು ಪಡೆಯಲು ವೃದ್ಧೆಯೊಬ್ಬರು ಬಸ್ತಿ ಜಿಲ್ಲೆಯ ಮಹಾರಿಪುರ ಗ್ರಾಮದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ : ಯಡಿಯೂರಪ್ಪ ‘ರಾಜೀನಾಮೆ’ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪುತ್ರ ಬಿ.ವೈ.ರಾಘವೇಂದ್ರ‌

ಆದಾಗ್ಯೂ, ಕೋವಿಡ್ ಕೇಂದ್ರದಲ್ಲಿನ ಆರೋಗ್ಯ ಕಾರ್ಯಕರ್ತರು ಅವರ ಫಾರ್ಮ್ ನನ್ನು ಭರ್ತಿ ಮಾಡಿದರು ಆದರೆ ಅವರ ಮಾದರಿಯನ್ನು ಸಂಗ್ರಹಿಸದೆ ಆರ್ಟಿ-ಪಿಸಿಆರ್ ಟೆಸ್ಟ್ ಸ್ಟಿಕ್ ನನ್ನು ಪ್ಯಾಕ್ ಮಾಡಿದ್ದಾರೆ ಎಂದು ವೀಡಿಯೋ ಸೂಚಿಸುತ್ತದೆ. ಆರೋಗ್ಯ ಕಾರ್ಯಕರ್ತರ ನಿರ್ಲಕ್ಷ್ಯದ ಬಗ್ಗೆ ತನಿಖೆಗೆ ಆಡಳಿತ ಸರ್ಕಾರ ಆದೇಶಿಸಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಸ್ತಿ ಜಿಲ್ಲಾಧಿಕಾರಿ ಸೌಮ್ಯಾ ಅಗರ್ವಾಲ್, “ವಿಡಿಯೋದಲ್ಲಿರುವ ಆರೋಗ್ಯ ಕೇಂದ್ರದ ಕಾರ್ಯಕರ್ತರನ್ನು ಗುರುತಿಸಲಾಗಿದ್ದು,. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು  ಸುದ್ದಿ ಸಂಸ್ಥೆ ಎ ಎನ್‌ ಐಗೆ ಹೇಳಿದ್ದಾರೆ.

Advertisement

ಈ ಕುರಿತಾಗಿ ತನಿಖೆ ನಡೆಯುತ್ತಿದ್ದು,ತಪ್ಪು ಮಾಡಿದವರಿಗೆ  ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ಮುಖಂಡನ ಅಂತ್ಯಕ್ರಿಯೆಯಲ್ಲಿ ಜನವೋಜನ 25 ಜನರ ವಿರುದ್ಧ ದೂರು ದಾಖಲು

Advertisement

Udayavani is now on Telegram. Click here to join our channel and stay updated with the latest news.

Next