Advertisement
ಮಹಾನಗರದ ಅದೆಷ್ಟೋ ಜನರಿಗೆ ಇಂತಹ ಸ್ಮಾರಕ ನಗರದಲ್ಲಿದೆ ಎಂಬುದು ಗೊತ್ತಿಲ್ಲ. ಇದರ ಮುಂದೆ ಓಡಾಡುತ್ತಿದ್ದರೂ ಸ್ಮಾರಕದ ದುರವಸ್ಥೆ ಕಂಡು ಇದೊಂದು ನೆಟ್ಟಿರುವ ಕಲ್ಲು ಎನ್ನುವ ಭಾವನೆ ಮೂಡಿದೆ. ಈ ಹುತಾತ್ಮರ ಸ್ಮಾರಕ ಇರುವುದು ಲ್ಯಾಮಿಂಗ್ಟನ್ ಶಾಲೆ ಮುಂಭಾಗದ ರಸ್ತೆಯಲ್ಲಿ.
Related Articles
Advertisement
ಮೂರುಸಾವಿರಪ್ಪ ಈಚಗೇರಿ ಅವರ ಕುಟುಂಬದವರು ಬಂದು ಪೂಜೆ ಸಲ್ಲಿಸುತ್ತಾರೆ. ಅಮೃತ ಮಹೋತ್ಸವ ಸಂಭ್ರಮದಲ್ಲೂ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮರ ಸ್ಮಾರಕ ನಿರ್ಲಕ್ಷಿರುವುದು ಎಷ್ಟು ಸರಿ ಎನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.
ಅಧಿಕಾರಿಗಳ ಗೊಂದಲವಿಪರ್ಯಾಸ ಅಂದರೆ ಇದೊಂದು ಸ್ಮಾರಕವೇ ಎನ್ನುವ ಗೊಂದಲಗಳು ಪಾಲಿಕೆ ಅಧಿಕಾರಿಗಳಲ್ಲಿದೆ. ಈ ಕುರಿತು ಯಾವುದೇ ದಾಖಲೆಗಳು ಇಲ್ಲ. ಪಾಲಿಕೆಯಿಂದ ನಿರ್ವಹಣೆ ಮಾಡುವುದಾದರೂ ಹೇಗೆ ಎನ್ನುವ ಮಾತುಗಳಿವೆ. ಆದರೆ ಜನರಿಗೆ ಬೇಡವಾದ ವಸ್ತುಗಳ ನಿರ್ವಹಣೆ, ವಾರಸುದಾರರು ಇಲ್ಲದ ಶವದ ಅಂತ್ಯ ಸಂಸ್ಕಾರವನ್ನು ಪಾಲಿಕೆ ಮಾಡುತ್ತಿದೆ. ಹೀಗಿರುವಾಗ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಇವರೆಡಕ್ಕಿಂತಲೂ ಕಡೆಯೇ ಎನ್ನುವ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಸ್ವತ್ಛಗೊಳಿಸಿದ್ದ ಎಬಿವಿಪಿಯಿಂದ
ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಈ ಹಿಂದೆ ಎಬಿವಿಪಿ ಕಾರ್ಯಕರ್ತರು ಸ್ವತ್ಛಗೊಳಿಸುತ್ತಿದ್ದರು. ಹಿಂದೆ ಎಬಿವಿಪಿಯಲ್ಲಿದ್ದವರು ಇದೀಗ ಬಿಜೆಪಿಯಲ್ಲಿ ಉತ್ತಮ ಸ್ಥಾನಗಳಲ್ಲಿದ್ದಾರೆ. ಇದೀಗ ಅಮೃತ ಮಹೋತ್ಸವ ಪ್ರಯುಕ್ತ ಪಕ್ಷದಿಂದ ಡಾ| ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಯನ್ನು ಎಸ್ಸಿ ಮೋರ್ಚಾ, ಡಾ| ಬಾಬು ಜಗಜೀವನರಾಂ ಅವರ ಮೂರ್ತಿಯನ್ನು ಎಸ್ಟಿ ಮೋರ್ಚಾ, ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಒಬಿಸಿ ಮೋರ್ಚಾ ಮೂಲಕ ಸ್ವತ್ಛಗೊಳಿಸುವ ಮಹತ್ತರ ಕಾರ್ಯ ಕೈಗೊಂಡಿದ್ದಾರೆ. ಆದರೆ ಯಾವುದೇ ಜಾತಿಯಿಲ್ಲದೆ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದವರ ಸ್ಮಾರಕ ಸ್ವತ್ಛಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಬೇಕಾಗಿತ್ತು. ಹಿಂದೆ ಜನಪ್ರತಿನಿಧಿಗಳಿಬ್ಬರ ಭರವಸೆಯಂತೆ ಸೂಕ್ತ ಸ್ಥಳಕ್ಕೆ ಸ್ಮಾರಕ ಸ್ಥಳಾಂತರ ಮಾಡಿ ಪಾವಿತ್ರತೆ ಕಾಪಾಡುವ ಕೆಲಸವಾಗಲಿ ಎಂಬುದು ಬಿಜೆಪಿಯ
ಮುಖಂಡರೊಬ್ಬರ ನೋವಿನ ನುಡಿಯಾಗಿದೆ. ಎಂಭತ್ತರ ದಶಕದಿಂದ ಈ ಸ್ಮಾರಕದ ಬಗ್ಗೆ ಮಾಹಿತಿಯಿದೆ. ಹಿಂದೆ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಪಾಲಿಕೆಯಿಂದ ಸ್ವತ್ಛಗೊಳಿಸಿ ಶೃಂಗರಿಸುವ ಕೆಲಸ ಆಗುತ್ತಿತ್ತು. ದಾಖಲೆಗಳಿಲ್ಲ, ಅದು ಸ್ಮಾರಕವೋ ಎನ್ನುವ ಗೊಂದಲ ಬೇಡ. ಇದೇ ಕಾರಣಕ್ಕೆ ಡಾ| ಪಾಟೀಲ ಪುಟ್ಟಪ್ಪ ಅವರು ಪಾಲಿಕೆಗೆ ಪತ್ರ ಬರೆದಿದ್ದರು. ಹುತಾತ್ಮರ ಸ್ಮಾರಕ ನಿರ್ವಹಣೆ ಹಾಗೂ ಗೌರವ ಸೂಚಿಸುವುದು ಪಾಲಿಕೆ ಕರ್ತವ್ಯ.
ಡಾ| ಪಾಂಡುರಂಗ ಪಾಟೀಲ,
ಮಾಜಿ ಮಹಾಪೌರರು ಹೇಮರಡ್ಡಿ ಸೈದಾಪುರ