ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರಿಗೆ ಸಮೀಪ ಇರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಜೊತೆಗೆ ಕೋವಿಡ್-19 ಮಾರ್ಗಸೂಚಿ ಪಾಲಿಸಲು ನಿರ್ಲಕ್ಷ್ಯ ವಹಿಸಿರುವ ನಾಗರಿಕರಿಂದ (ವಾಹನ ಸವಾರರು ಸಹಿತ) ಜಿಲ್ಲಾದ್ಯಂತ 25,51, 525 ರೂ.ದಂಡವಸೂಲಿಮಾಡಲಾಗಿದೆ.
ಅಭಿಯಾನ: ಜಿಲ್ಲಾಧಿಕಾರಿ ಆರ್.ಲತಾ ಮರ್ಗದರ್ಶನದಲ್ಲಿ ಜಿಲ್ಲಾದ್ಯಂತ ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು (ನಗರಸಭೆ- ಪುರಸಭೆ-ಪಪಂ) ಹಾಗೂ ಪಿಡಿಒ ಪ್ರತ್ಯೇಕವಾಗಿ ದಂಡ ವಸೂಲಿ ಮಾಡುವ ಅಭಿಯಾನ ನಡೆಸಿದ್ದಾರೆ.
ದಂಡ ವಸೂಲಿ ವಿವರ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಸ್ಯಾನಿಟೈಸರ್ ಹಾಕಿಕೊಳ್ಳಬೇಕೆಂದು ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಿದರೂ ಸಹ ಪಾಲಿಸದೇ ನಿರ್ಲಕ್ಷ್ಯ ವಹಿಸಿರುವ ನಾಗರಿಕರಿಂದ 25 ಲಕ್ಷ ರೂ.ಗೂ ಅಧಿಕ ವಸೂಲಿ ಮಾಡಿ ಜಿಲ್ಲಾಡಳಿತ ಶಾಕ್ ನೀಡಿದೆ. ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಈಗಾಗಲೇ ಮಾಸ್ಕ್ ಧರಿಸಲು ಜನರಲ್ಲಿ ಅರಿವು ಮೂಡಿಸುವ ಜೊತೆಗೆ 9,23,200 ರೂ. ದಂಡ ವಸೂಲಿ ಮಾಡಿದ್ದಾರೆ. ಪೊಲೀಸ್ ಇಲಾಖೆ ಅಧಿಕಾರಿಗಳು ಸಹ 11,3,785 ರೂ. ದಂಡ ವಿಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸಹ ಪಿಡಿಒಗಳು ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸಿದ ಗ್ರಾಮಸ್ಥರನ್ನು ಪತ್ತೆ ಹಚ್ಚಿ ಮಾಡಿ 5,24,540 ರೂ. ದಂಡ ವಸೂಲಿ ಮಾಡಿದ್ದಾರೆ.
ಕೋವಿಡ್ ಕಾರ್ಯ ಪಡೆ ಸಕ್ರಿಯ : ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಒಂದೆಡೆ ಅರಿವು ಮತ್ತು ಜಾಗೃತಿ ಮೂಡಿಸುವಕೆಲಸ ನಡೆಯುತ್ತಿದೆ. ಮತ್ತೂಂದೆಡೆ ಪ್ರತಿಯೊಂದು ಗ್ರಾಪಂ ವ್ಯಾಪ್ತಿಯಲ್ಲಿ ರಚಿಸಿರುವ ಕೋವಿಡ್ ಕಾರ್ಯಪಡೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಆರೋಗ್ಯ ಇಲಾಖೆ ಮತ್ತು ಪಿಡಿಒಗಳು ಮಾಸ್ಕ್ ಧರಿಸದೆ ನಿರ್ಲಕ್ಷ್ಯ ಮಾಡುವ ಗ್ರಾಮಸ್ಥರಿಂದ ದಂಡ ವಸೂಲಿ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತ ಬಿಗಿ ಕ್ರಮಕೈಗೊಂಡಿದ್ದು, ನಾಗರಿಕರಲ್ಲೂ ಅರಿವು ಮತ್ತು ಜಾಗೃತಿ ಬಂದಿದೆ.ಕಳೆದ 15 ದಿನಗಳಿಂದ ದಂಡ ವಸೂಲಿ ಸಹ ಕಡಿಮೆಯಾಗಿದೆ. ದಂಡ ವಸೂಲಿ ಮುಖ್ಯವಲ್ಲ, ಜನಕಡ್ಡಾಯವಾಗಿ ಮಾಸ್ಕ್ ಧರಿಸಿ,ಸಾಮಾಜಿಕ ಅಂತರಕಾಯ್ದುಕೊಂಡು ಜಿಲ್ಲೆಯನ್ನು ಸೋಂಕು ಮುಕ್ತಕ್ಕೆ ಸಹಕರಿಸಬೇಕು.
–ಆರ್.ಲತಾ, ಜಿಲ್ಲಾಧಿಕಾರಿ
ಕೋವಿಡ್ ನಿಯಂತ್ರಿಸಲು ಕೋವಿಡ್ ಕಾರ್ಯಪಡೆ ರಚಿಸಿ ಅರಿವು ಮೂಡಿಸಲಾಗಿದೆ. ನಾಗರಿಕರು ಸ್ವಯಂ ಆರೋಗ್ಯ ಕಾಪಾಡಿಕೊ ಳ್ಳಲು ಮಾಸ್ಕ್ ಧರಿಸಿ ಸಾಮಾಜಿಕ ಅಂತರಕಾಪಾಡ ಬೇಕೆಂಬುದು ಸರ್ಕಾರದ ಉದ್ದೇಶ. ಜನರ ಆರೋಗ್ಯಕಾಪಾಡಲು ದಂಡ ವಸೂಲಿ ಮಾಡುತ್ತಿದ್ದು, ಸೋಂಕು ನಿಯಂತ್ರಣದಲ್ಲಿರುವುದು ಸಂತಸ ತಂದಿದೆ.
– ಪಿ.ಶಿವಶಂಕರ್, ಜಿಪಂ ಸಿಇಒ
–ಎಂ.ಎ.ತಮೀಮ್ ಪಾಷ