Advertisement

ಪ್ರತಿ ಇಲಾಖೆ ಕರ್ತವ್ಯದಲ್ಲೂ ನಿರ್ಲಕ್ಷ್ಯ

02:17 PM Sep 20, 2019 | Team Udayavani |

ಕೊಪ್ಪಳ: ನಗರದ ಡಿ.ದೇವರಾಜ ಅರಸು ಮೆಟ್ರಿಕ್‌ ಪೂರ್ವ ವಸತಿ ನಿಲಯದಲ್ಲಿ ಇತ್ತೀಚೆಗೆ ಧ್ವಜಸ್ತಂಬ ತೆರವು ಮಾಡುವ ವೇಳೆ ನಡೆದ ವಿದ್ಯುತ್‌ ಅವಘಡದಿಂದ ಐವರು ವಿದ್ಯಾರ್ಥಿಗಳ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿ  ಸಿಂತೆ ಐದು ಇಲಾಖೆ, ಕಟ್ಟಡ ಮಾಲೀಕನಿಂದ ಎಸಿ ನೇತೃತ್ವದ ತನಿಖಾ ತಂಡ ಪ್ರತ್ಯೇಕ ವರದಿ ಪಡೆದಿದ್ದು, ಎಲ್ಲರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿಗೆ ವರದಿ ನೀಡಿದೆ.

Advertisement

ಕಳೆದ ಆ. 15ರಂದು ನಡೆದ ಧ್ವಜಾರೋಹಣದ ಕಂಬವನ್ನು ತೆರವು ಮಾಡುವ ವೇಳೆ ಧ್ವಜಕಂಬ ವಿದ್ಯುತ್‌ ತಂತಿ ಮೇಲೆ ಬಿದ್ದು ಐವರು ವಿದ್ಯಾರ್ಥಿಗಳ ಸಾವಿನ ಪ್ರಕರಣವು ಇಡಿ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಪ್ರಕರಣದ ತೀವ್ರತೆ ಅರಿತ ಸರ್ಕಾರವು ಮೃತ ವಿದ್ಯಾರ್ಥಿಗಳ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಿ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಸೂಚನೆ ನೀಡಿತ್ತು. ಜಿಲ್ಲಾಧಿಕಾರಿ ಸುನೀಲ್‌ ಕುಮಾರ ಅವರು ಪ್ರಕರಣದ ಗಂಭೀರತೆ ಅರಿತು, ಎಸಿ ಸಿ.ಡಿ. ಗೀತಾ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಎಸಿ ನೇತೃತ್ವದ ತನಿಖಾ ತಂಡ ಬಿಸಿಎಂ, ಜೆಸ್ಕಾಂ, ಲೋಕೋಪಯೋಗಿ, ನಗರಸಭೆ ಪೌರಾಯುಕ್ತರು, ನಗರಾಭಿವೃದ್ಧಿ ಪ್ರಾ ಧಿಕಾರ ಸೇರಿದಂತೆ ವಸತಿ ನಿಲಯವಿದ್ದ ಕಟ್ಟಡದ ಮಾಲೀಕನಿಂದ ಪ್ರತ್ಯೇಕ ಮಾಹಿತಿ ದಾಖಲಿಸಿ ಸಮಗ್ರ ವರದಿಯನ್ನು ಸಿದ್ದಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿದೆ. ವರದಿಯಲ್ಲಿ ಐದು ಇಲಾಖೆಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ ಎನ್ನುವ ಅಂಶಗಳು ಉಲ್ಲೇಖವಾಗಿವೆ. ಇದರಲ್ಲಿ ಪ್ರಮುಖವಾಗಿ ವಸತಿ ನಿಲಯ ಮೇಲ್ವಿಚಾರಕ, ತಾಲೂಕು ಬಿಸಿಎಂ ಅ ಧಿಕಾರಿ ಹಾಗೂ ಜೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ಹೆಚ್ಚಾಗಿದೆ ಎಂಬ ಅಂಶಗಳನ್ನು ಉಲ್ಲೇಖೀಸಲಾಗಿದೆ.

ಮೇಲ್ವಿಚಾರಕನ ನಿರ್ಲಕ್ಷ್ಯ: ವಸತಿ ನಿಲಯದಲ್ಲಿ ಪ್ರತಿಯೊಂದರ ಬಗ್ಗೆ ಕಾಳಜಿ ವಹಿಸಬೇಕಾದ ಮೇಲ್ವಿಚಾಕರ ಸರಿಯಾಗಿ ಕಾಳಜಿ ವಹಿಸಿಲ್ಲ. ಧ್ವಜಸ್ತಂಬ ತೆರವು ಮಾಡುವ ವೇಳೆ ಅವರು ಯಾವುದೇ ಜವಾಬ್ದಾರಿ ವಹಿಸಿಲ್ಲ. ವಸತಿ ನಿಲಯದ ಸಮಸ್ಯೆಗಳ ಕುರಿತು ಮೇಲಾ ಧಿಕಾರಿ ಗಮನಕ್ಕೆ ತರಬೇಕಿತ್ತು. ಆದರೆ ಅದನ್ನು ಮಾಡದೇ ನಿರ್ಲಕ್ಷé ವಹಿಸಲಾಗಿದೆ.

ತಾಲೂಕಾಧಿಕಾರಿ ನಿರ್ಲಕ್ಞ್ಯ: ತಾಲೂಕು ಅಧಿಕಾರಿ ಪ್ರತಿ ತಿಂಗಳು ಒಂದು ಬಾರಿ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಕುರಿತು ಪರಿಶೀಲನೆ ನಡೆಸಬೇಕು. ಆದರೆ ಅದರ ಬಗ್ಗೆ ಅವರು ಕಾಳಜಿ ವಹಿಸಿಲ್ಲ. ಕನಿಷ್ಟ ವರ್ಷಕ್ಕೆ ಒಂದು ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಕುರಿತು ವರದಿ ಮಾಡಿ, ಜೆಸ್ಕಾಂ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ವಸತಿ ನಿಲಯದ ಮುಂದಿರುವ ವಿದ್ಯುತ್‌ ತಂತಿಗೆ ಪೈಪ್‌ ಅಳವಡಿಕೆ ಮಾಡಿಸಬಹುದಿತ್ತು. ಅವರು ನಿರ್ಲಕ್ಷé ವಹಿಸಿದ್ದು ಇಲ್ಲಿ ಕಂಡು ಬಂದಿದೆ. ಇನ್ನೂ ಜಿಲ್ಲಾಮಟ್ಟದ ಅಧಿಕಾರಿಯು ತಾಲೂಕು ಅಧಿ ಕಾರಿಯ ಕಾರ್ಯ ವೈಖರಿ ಬಗ್ಗೆ ಪರಿಶೀಲನೆ ನಡೆಸಬಹುದಿತ್ತು. ವಸತಿ ನಿಲಯವು ನಗರದಲ್ಲೇ ಇದ್ದರೂ ಜಿಲ್ಲಾಮಟ್ಟದ ಅಧಿ ಕಾರಿ ವಸತಿ ನಿಲಯಕ್ಕೆ ಭೇಟಿ ನೀಡದೇ ಇರುವುದು ಇಲ್ಲಿ ಎದ್ದು ಕಾಣುತ್ತಿದೆ.

Advertisement

ಜೆಸ್ಕಾಂ ನಿರ್ಲಕ್ಷ್ಯ: ವಸತಿ ನಿಲಯದ ಮುಂದೆ ಹಾದು ಹೋಗಿರುವ ವಿದ್ಯುತ್‌ ಲೈನ್‌ಗೆ ಮುಂಜಾಗೃತವಾಗಿ ಜನತೆಗೆ ಜಾಗೃತಿ ಮೂಡಿಸುವುದು ಜೆಸ್ಕಾಂ ಕೆಲಸ. ಒಂದು ವೇಳೆ ಕಟ್ಟಡದ ಮಾಲೀಕ ನಿರ್ಲಕ್ಷé ವಹಿಸಿದ್ದರೆ

ಆ ಕಟ್ಟಡಕ್ಕೆ ವಿದ್ಯುತ್‌ ಕಡಿತ ಮಾಡಬಹುದಿತ್ತು. ವಸತಿ ನಿಲಯದ ಮುಂದೆ ಟಿಸಿ ಇದ್ದರೂ ತಂತಿಗಳಿಗೆ ಪೈಪ್‌ ಅಳವಡಿಕೆ ಮಾಡುವ ಕುರಿತಂತೆ ಯಾವುದೇ ಸೂಚನೆ ನೀಡದೇ ಇರುವುದು ಅವರ ನಿರ್ಲಕ್ಷ್ಯವೂ ಇಲ್ಲಿ ಕಂಡು ಬಂದಿದೆ. ಜೊತೆಗೆ ವಿದ್ಯುತ್‌ ಅವಘಡ ನಡೆದಾಗ ಸಾರ್ವಜನಿಕರು ಜೆಸ್ಕಾಂಗೆ ಕರೆ ಮಾಡಿ ವಿದ್ಯುತ್‌ ಕಡಿತ ಮಾಡುವಂತೆ ಸೂಚನೆ ನೀಡುವ ಪ್ರಯತ್ನ ನಡೆಸಿದರೂ ಅದ್ಯಾವುದನ್ನೂ ಗಮನಿಸದೆ ಜೆಸ್ಕಾಂ ಪುನಃ ವಿದ್ಯುತ್‌ ಪೂರೈಕೆ ಮಾಡಿರುವುದು ಇಲ್ಲಿ ನಿರ್ಲಕ್ಷ್ಯ ಕಾರಣವಾಗಿದೆ.

ಪ್ರಮುಖವಾಗಿ ಮೂವರ ನಿರ್ಲಕ್ಷ್ಯ : ಐದು ಇಲಾಖೆಗಳ ವರದಿ ಆಧರಿಸಿ ಎಲ್ಲವನ್ನೂ ಪರಿಶೀಲನೆ ಮಾಡಿ ವಸತಿ ನಿಲಯದ ಮೇಲ್ವಿಚಾರಕ ಹಾಗೂ ತಾಲೂಕು ಮಟ್ಟದ ಅಧಿಕಾರಿ ಸೇರಿದಂತೆ ಜೆಸ್ಕಾಂ ನಿರ್ಲಕ್ಷéದಿಂದ ಈ ಅವಘಡ ಸಂಭವಿಸಿದೆ. ಇವರು

ತಮ್ಮ ಕರ್ತವ್ಯ ನಿರ್ವಹಿಸಿದ್ದರೆ ಇಷ್ಟೆಲ್ಲ ದುರ್ಘ‌ಟನೆ ನಡೆಯುತ್ತಿರಲಿಲ್ಲ ಎಂಬ ಹಲವು ಅಂಶಗಳನ್ನು ಉಲ್ಲೇಖೀಸಿ ವರದಿ ಜಿಲ್ಲಾ ಕಾರಿಗೆ ಸಿ.ಡಿ.ಗೀತಾ ಅವರು ವರದಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next