Advertisement

ಎನ್ ಇ ಎಫ್ ಟಿ ‘ಈ’ ದಿನ 14 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವುದಿಲ್ಲ : ಆರ್ ಬಿ ಐ

02:50 PM May 18, 2021 | |

ನವ ದೆಹಲಿ :  ಎನ್ ಇ ಎಫ್ ಟಿ ಉನ್ನತೀಕರಣಕ್ಕಾಗಿ 14 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವುದಿಲ್ಲವೆಂದು ಭಾರತೀಯ ರಿಸರ್ವ್ ಬ್ಯಾಂಕ್( ಆರ್ ಬಿ ಐ ) ಮಾಹಿತಿ ನೀಡಿದೆ.

Advertisement

ಹೌದು, ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್ (ಎನ್‌ ಇ ಎಫ್‌ ಟಿ) ಶನಿವಾರ (ಮೇ. 23) ದಂದು ತಾಂತ್ರಿಕ ಉನ್ನತೀಕರಣದ ಕಾರಣದಿಂದಾಗಿ ಕಾರ್ಉ ನಿರ್ವಹಿಸುವುದಿಲ್ಲ ಎಂದು ಆರ್ ಬಿ ಐ ತಿಳಿಸಿದೆ.

ಇದನ್ನೂ ಓದಿ : ಮಂಡ್ಯ: ಊರಿಗೆ ಸೋಂಕು ಪ್ರವೇಶಿಸಿದಂತೆ ‘ನಾಡಮಾರಿ’ಗೆ ಕೋಳಿ ಬಲಿಕೊಟ್ಟು ರಸ್ತೆ ಮಧ್ಯೆ ಪೂಜೆ

ಶನಿವಾರ (ಮೇ 23) ಮಧ್ಯರಾತ್ರಿಯಿಂದ ಭಾನುವಾರ (ಮೇ 24) ಮಧ್ಯಾಹ್ನದ ತನಕ ಒಟ್ಟು 14 ಗಂಟೆಗಳ ಕಾಲ ಎನ್ ಇ ಎಫ್ ಟಿ ಲಭ್ಯವಿರುವುದಿಲ್ಲ ಎಂದು ಆರ್‌ ಬಿ ಐ  ಮಾಹಿತಿ ನೀಡಿದೆ.

ಆರ್‌ ಬಿ ಐ ನಿಯಂತ್ರಣದಲ್ಲಿರುವ  ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ಸ್ ಟ್ರಾನ್ಸ್‌ಫರ್ (ಎನ್‌ಇಎಫ್‌ಟಿ) ರಾಷ್ಟ್ರವ್ಯಾಪಿ ಇರುವ ಕೇಂದ್ರೀಕೃತ ಪಾವತಿ ವ್ಯವಸ್ಥೆಯಾಗಿದ್ದು, ವರ್ಷದ ಎಲ್ಲಾ ದಿನಗಳಲ್ಲಿ ಸೇವೆಗಾಗಿ ಲಭ್ಯವಿರುತ್ತದೆ.

Advertisement

ಆದರೇ, ಮೇ 23, 2021 ರ ಭಾನುವಾರದಂದು 00:01 ಗಂಟೆಯಿಂದ 14:00 ಗಂಟೆಯವರೆಗೆ ನೆಫ್ಟ್ ಸೇವೆ ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಆರ್‌ ಟಿ ಜಿ ಎಸ್ ವ್ಯವಸ್ಥೆಯು ಎಂದಿನಂತೆ ಕಾರ್ಯನಿರ್ವಹಿಸುತ್ತಲೇ ಇರುತ್ತದೆ” ಎಂದು ಕೂಡ ಆರ್‌ಬಿಐ ತಿಳಿಸಿದೆ.

ಇದೇ ರೀತಿಯಲ್ಲಿ ತಾಂತ್ರಿಕ ಉನ್ನತೀಕರಣಕ್ಕಾಗಿ ಏಪ್ರಿಲ್ 18, 2021 ರಂದು ಆರ್‌ ಟಿ ಜಿ ಎಸ್ ವ್ಯವಸ್ಥೆಯು ಉನ್ನತೀಕರಣಗೊಂಡಿದೆ. ಇನ್ನು ನೆಫ್ಟ್‌ ಹಣ ವರ್ಗಾವಣೆಯಲ್ಲದೆ, ಕ್ರೆಡಿಟ್ ಕಾರ್ಡ್ ಬಾಕಿ ಪಾವತಿ, ಸಾಲ ಇಎಂಐ ಪಾವತಿ, ಮತ್ತು ವಿದೇಶಿ ವಿನಿಮಯ ರವಾನೆ ಸೇರಿದಂತೆ ವಿವಿಧ ವ್ಯವಹಾರಗಳಿಗೆ ಇದೇ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಹಾಗಿ ಗ್ರಾಹಕರಿಗೆ ಆರ್ ಬಿ ಐ ಮಾಹಿತಿ ನೀಡಿದೆ.

ಇದನ್ನೂ ಓದಿ : ವಾಮಮಾರ್ಗದಲ್ಲಿ ಅಧಿಕಾರ ಹಿಡಿದವರಿಂದ ರಾಜ್ಯಕ್ಕೆ ನಿರಂತರ ಸಂಕಷ್ಟವೇ: ಕಾಂಗ್ರೆಸ್ ಟೀಕೆ

Advertisement

Udayavani is now on Telegram. Click here to join our channel and stay updated with the latest news.

Next