ನವದೆಹಲಿ: 2021ರ ಅಖಿಲ ಭಾರತ ವೈದ್ಯಕೀಯ ಪ್ರವೇಶ ಪರೀಕ್ಷೆಯ (ನೀಟ್) ಸೂಪರ್ ಸ್ಪೆಷಾಲಿಟಿ ವಿಭಾಗದಲ್ಲಿನ “ಇನ್-ಸರ್ವೀಸ್’ ಕೋಟಾದಲ್ಲಿ ಉಳಿದಿರುವ 92 ಸೀಟುಗಳನ್ನು ಸಾಮಾನ್ಯ ಸೀಟುಗಳೆಂದು ಪರಿಗಣಿಸಲು ಅವಕಾಶ ನೀಡಬೇಕು ಹಾಗೂ ಆ ಸೀಟುಗಳನ್ನು ಈ ಹಿಂದೆ ಇದೇ ಕೋಟಾದಲ್ಲಿ ಸೀಟು ಪಡೆದಿರುವ ಅಭ್ಯರ್ಥಿಗಳಿಗೆ ಪುನಃ ವಿತರಣೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
Advertisement
ಮೇ 9ರಂದು ಖಾಲಿ ಇರುವ ಸೀಟುಗಳನ್ನು ತುಂಬಲು ಅನುಮತಿ ಕಲ್ಪಿಸಲಾಗಿತ್ತು. ಈಗ ಪುನಃ ಅದೇ ರೀತಿಯ ಮತ್ತೂಂದು ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.