Advertisement
ರವಿ ಅತ್ರಿ ಹಲವಾರು ರಾಜ್ಯಗಳಲ್ಲಿ ಈ ಹಿಂದೆಯೂ ಹಲವು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಭಾಗಿ ಯಾಗಿದ್ದ ಆರೋಪಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಉತ್ತರವನ್ನು ಸಿದ್ಧಪಡಿಸಿ, ಅದನ್ನು ತನ್ನ ನೆಟ್‌ವರ್ಕ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವ ಕೆಲಸವನ್ನು ಈ ಸಾಲ್ವರ್ ಗ್ಯಾಂಗ್ ನಡೆಸುತ್ತಿತ್ತು. ವೈದ್ಯಕೀಯ ಪ್ರವೇಶಪ್ರಶ್ನೆಪತ್ರಿಕೆ ಸೋರಿಕೆ ಆರೋಪದಲ್ಲಿ 2012ರಲ್ಲಿ ಈತನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಈಗ ನೀಟ್ ಅಕ್ರಮ ದಲ್ಲೂ ಆತನ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಉ.ಪ್ರ. ಪೊಲೀಸರು ಅವನನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ನೀಟ್ ಮತ್ತು ನೆಟ್ ಪ್ರಶ್ನೆ ಪತ್ರಿಕೆ ಸೋರಿಕೆಯು ವಿದ್ಯಾರ್ಥಿಗಳ ಭಾರೀ ಪ್ರತಿಭಟನೆ ಮಾತ್ರವಲ್ಲದೇ, ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.
ಮೇ 5ರಂದು ನೀಟ್ ಪರೀಕ್ಷೆ ಆರಂಭವಾಗುವು ದಕ್ಕೂ 3 ಗಂಟೆ ಮುಂಚಿತವಾಗಿ “ನಾಲ್ವರು ಅನುಮಾನಾಸ್ಪದ ವ್ಯಕ್ತಿಗಳು ಎಸ್‌ಯುವಿ ಯೊಂದ ರಲ್ಲಿ ರಹಸ್ಯ ತಾಣವೊಂದರ ಕಡೆಗೆ ಹೋಗುತ್ತಿದ್ದಾರೆ’ ಎಂದು ಝಾರ್ಖಂಡ್‌ನಿಂದ ಬಿಹಾರ ಪೊಲೀಸರಿಗೆ ದೂರವಾಣಿ ಕರೆ ಬಂದಿತ್ತು. ತತ್‌ಕ್ಷಣವೇ ಅಲರ್ಟ್ ಆದ ಪೊಲೀ ಸರು ಆ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದರಿಂದ, ಇಡೀ ನೀಟ್ ಅಕ್ರಮದ ಜಾಲ ಬಹಿರಂಗವಾಗಲು ಸಾಧ್ಯವಾಯಿತು. ಈ ಒಂದು ಸಣ್ಣ ಸುಳಿವು ಇಷ್ಟು ದೊಡ್ಡ ಹೈಪ್ರೊಫೈಲ್ ಗ್ಯಾಂಗ್‌ನ ಸೆರೆಗೆ ಕಾರಣವಾಗು ತ್ತದೆಂದು ನಾವು ಊಹಿಸಿಯೇ ಇರಲಿಲ್ಲ ಎಂದು ಬಿಹಾರ ಪೊಲೀಸರು ಹೇಳಿದ್ದಾರೆ. ಆಗಿದ್ದೇನು?: ಕರೆ ಬಂದೊಡನೆ ಪಟ್ನಾದ ಪೊಲೀಸರ ತಂಡವು ಶಂಕಿತರನ್ನು ಅಡ್ಡಗಟ್ಟಿ, ವಶಕ್ಕೆ ಪಡೆಯಿತು. ಅವರನ್ನು ತೀವ್ರ ವಿಚಾರ ಣೆಗೊಳಪಡಿಸಿದಾಗ, ತಾವು ಹೋಗುತ್ತಿರುವ ರಹಸ್ಯ ಸ್ಥಳದ ಬಗ್ಗೆ ಅವರು ಬಾಯಿಬಿಟ್ಟರು. ಅಲ್ಲದೇ, ಹಿಂದಿನ ದಿನವೇ ನಗರದ ಹೊರ ವಲಯದಲ್ಲಿ ಸುಮಾರು 30 ನೀಟ್ ಅಭ್ಯರ್ಥಿ ಗಳನ್ನು ಭೇಟಿಯಾಗಿ, ಅವರಿಗೆ ಪ್ರಶ್ನೆಪತ್ರಿಕೆ ಗಳನ್ನು ನೀಡಿ, ಅನಂತರ ಅವರೆಲ್ಲರನ್ನೂ ಡ್ರಾಪ್ ಮಾಡಿ ವಾಪಸ್ ಬರುತ್ತಿದ್ದುದಾಗಿಯೂ ತಿಳಿಸಿದರು. ಬಳಿಕ, ಆರೋಪಿಗಳು ನೀಡಿದ ಮಾಹಿತಿಯಂತೆ, ರಹಸ್ಯ ತಾಣಕ್ಕೆ ತೆರಳಿದಾಗ ಅಲ್ಲಿ 13 ರೋಲ್ ನಂಬರ್‌ಗಳು ಸಿಕ್ಕಿದವು. ಇದಾದ ಒಂದು ಗಂಟೆಯೊಳಗೆ ಪೊಲೀಸರ ವಿವಿಧ ತಂಡಗಳು ನೀಟ್ ಪರೀಕ್ಷಾ ಕೇಂದ್ರ ಗಳತ್ತ ಧಾವಿಸಿ, 4 ಅಭ್ಯರ್ಥಿಗಳನ್ನು ವಶಕ್ಕೆ ಪಡೆ ದಾಗ, ಅವರು ಇನ್ನೂ 9 ಮಂದಿಯ ಹೆಸರನ್ನು ಬಾಯಿ ಬಿಟ್ಟರು. ಮೇ 6ರಂದು ಆರೋಪಿ ಯೊಬ್ಬನ ಮನೆಯಿಂದ ಸುಟ್ಟು ಹೋಗಿದ್ದ ಪ್ರಶ್ನೆಪತ್ರಿಕೆ ಯನ್ನೂ ವಶಕ್ಕೆ ಪಡೆಯಲಾಯಿತು. ಮಾರನೇ ದಿನ 13 ಆರೋ ಪಿಗಳನ್ನು (ಅಭ್ಯ ರ್ಥಿ ಗಳು, ಪೋಷಕರು ಸೇರಿ) ಬಂಧಿಸ ಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.