Advertisement

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ಆಗಿಲ್ಲ: ಎನ್‌ಟಿಎ ಸ್ಪಷ್ಟನೆ

08:55 PM Sep 12, 2021 | Team Udayavani |

ನವದೆಹಲಿ: ಪ್ರಸಕ್ತ ವರ್ಷದ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಅವ್ಯವಹಾರವಾಗಿದೆ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಸುದ್ದಿಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಅಲ್ಲಗಳೆದಿದೆ.

Advertisement

ನೀಟ್‌ ಪರೀಕ್ಷೆಯಲ್ಲಿ ಯಾವುದೇ ಭದ್ರತಾ ಲೋಪವಾಗಲೀ, ಸೋರಿಕೆಯಾಗಲೀ ಆಗಿಲ್ಲ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.

ಆದರೆ, ಈ ಸ್ಪಷ್ಟನೆಯನ್ನು ಒಪ್ಪಿಕೊಳ್ಳಲು ವಿದ್ಯಾರ್ಥಿಗಳು ಸಿದ್ಧರಿಲ್ಲ. ಈ ಕುರಿತು ಸೂಕ್ತ ತನಿಖೆ ಆಗಲೇಬೇಕು ಎಂದು ಒತ್ತಾಯಿಸಿರುವ ವಿದ್ಯಾರ್ಥಿಗಳು, ಟ್ವಿಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.

“ಸಿಬಿಐ ಫಾರ್‌ ಎನ್‌ಟಿಎ’, “ಆಪರೇಷನ್‌ ನೀಟ್‌’ ಎಂಬ ಹ್ಯಾಷ್‌ಟ್ಯಾಗ್‌ಗಳೂ ಟ್ರೆಂಡಿಂಗ್‌ ಆಗಿವೆ. ನೀಟ್‌ ಮಾಫಿಯಾಗೆ ಸಂಬಂಧಿಸಿ ಸುದ್ದಿವಾಹಿನಿಯೊಂದು ಸುದ್ದಿ ಬಿತ್ತರಿಸಿದ ನಂತರ ಈ ಎಲ್ಲ ಬೆಳವಣಿಗೆಗಳು ನಡೆದಿವೆ.

ಇದನ್ನೂ ಓದಿ:ಗಣಪನ ಕೊರಳಲ್ಲಿ ಹೆಡೆ ಬಿಚ್ಚಿ ಭಕ್ತರಿಗೆ ದರ್ಶನ ನೀಡಿದ ಜೀವಂತ ನಾಗರ ಹಾವು !

Advertisement
Advertisement

Udayavani is now on Telegram. Click here to join our channel and stay updated with the latest news.

Next