Advertisement

ಸೆ.19ರಿಂದ ನೀಟ್‌-ಪಿಜಿ ಕೌನ್ಸೆಲಿಂಗ್‌ ಸಾಧ್ಯತೆ

07:28 PM Sep 01, 2022 | Team Udayavani |

ನವದೆಹಲಿ:  ವೈದ್ಯ ಸ್ನಾತಕೋತ್ತರ ಕೋರ್ಸ್‌ಗಳ ಕೌನ್ಸೆಲಿಂಗ್‌ ಪ್ರಕ್ರಿಯೆ ಸೆ.19ರಿಂದ ಆರಂಭವಾಗುವ ಸಾಧ್ಯತೆ ಇದೆ.

Advertisement

ಪ್ರಕ್ರಿಯೆಗೆ ಇನ್ನಷ್ಟು ಸೀಟನ್ನು ಸೇರಿಸುವುದಕ್ಕೆ ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ)ಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಕೌನ್ಸೆಲಿಂಗ್‌ ಅನ್ನು ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಇನ್ನೆರೆಡು ದಿನಗಳಲ್ಲಿ ಕೌನ್ಸೆಲಿಂಗ್‌ನ ವೇಳಾಪಟ್ಟಿ ಹೊರಬೀಳುವ ಸಾಧ್ಯತೆಯಿದೆ. ಪ್ರತಿ ವರ್ಷ ಜನವರಿಯಲ್ಲಿ ನೀಟ್‌ ಪರೀಕ್ಷೆ ನಡೆದು, ಮಾರ್ಚ್‌ನಲ್ಲಿ ಕೌನ್ಸೆಲಿಂಗ್‌ ನಡೆಯುತ್ತಿತ್ತು. ಕೊರೊನಾ ಮತ್ತು ಕಳೆದ ವರ್ಷದ ಪರೀಕ್ಷೆ ತಡವಾದ ಹಿನ್ನೆಲೆ ಈ ವರ್ಷ ನೀಟ್‌ ಮೇನಲ್ಲಿ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next