Advertisement

ನೀಟ್‌ ವೈದ್ಯ ಪಿ.ಜಿ. ಮುಂದೂಡಿಕೆ ಆಗಿಲ್ಲ,ಮೇ 21ಕ್ಕೇ ಪರೀಕ್ಷೆ: ಕೇಂದ್ರ ಸರ್ಕಾರ

09:09 PM May 07, 2022 | Team Udayavani |

ನವದೆಹಲಿ: ವೈದ್ಯ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಗೆ ಇರುವ ನೀಟ್‌ ಮುಂದೂಡಿಕೆಯಾಗಿಲ್ಲ. ಈ ಬಗ್ಗೆ ನಕಲಿ ಸುತ್ತೋಲೆ ಹರಿದಾಡುತ್ತಿದೆ ಎಂದು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದೆ.

Advertisement

ಪರೀಕ್ಷೆ ಸದ್ಯ ನಿಗದಿಯಾಗಿರುವಂತೆಯೇ 21ಕ್ಕೆ ನಡೆಯಲಿದೆ. ಯಾರೂ ಗೊಂದಲಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಸ್‌ ಇನ್‌ಫಾರ್‌ವೆುàಷನ್‌ ಬ್ಯೂರೋದ ಟ್ವಿಟರ್‌ ಖಾತೆಯಲ್ಲಿ ಸ್ಪಷ್ಟಪಡಿಸಲಾಗಿದೆ.

“ಪ್ರಸಕ್ತ ಸಾಲಿನ ವೈದ್ಯ ಸ್ನಾತಕೋತ್ತರ ಕೋರ್ಸ್‌ಗಳಿಗಾಗಿ ನಡೆಯಲಿರುವ ನೀಟ್‌ ಜು.9ಕ್ಕೆ ಮುಂದೂಡಿಕೆಯಾಗಿಲ್ಲ. ನಿಗದಿಯಾದಂತೆಯೇ ಮೇ 21ಕ್ಕೆ ನಡೆಯಲಿದೆ’ ಎಂದು ಅದು ಸ್ಪಷ್ಟಪಡಿಸಿದೆ.

ವೈದ್ಯ ಸ್ನಾತಕೋತ್ತರ ಕೋರ್ಸ್‌ಗಳನ್ನು ಮುಂದೂಡಬೇಕು ಎಂದು ಕೆಲವು ವಿದ್ಯಾರ್ಥಿಗಳು ಬೇಡಿಕೆ ಮುಂದಿಟ್ಟಿರುವಂತೆಯೇ ಈ ನಕಲಿ ಸುತ್ತೋಲೆ ಹೊರಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next