Advertisement
ವಿದ್ಯಾರ್ಥಿಗಳ ಜ್ಞಾನ, ಅರ್ಹತೆ ಬೆಳೆ ಸುವ ಸಲುವಾಗಿ ಈ ಹೆಚ್ಚುವರಿ ಪರೀಕ್ಷೆಗಳನ್ನು ಮಾಡಲಾಗುತ್ತದೆ. ವೈದ್ಯಕೀಯ, ಎಂಜಿನಿಯರಿಂಗ್ ಸೇರ ಬಯಸುವವರ ಮೊದಲ ಹೆಜ್ಞೆಯೇ ಈ ಹೆಚ್ಚುವರಿ ಪರೀಕ್ಷೆಗಳು. ಇಲ್ಲಿ ಉತ್ತಮ ರ್‍ಯಾಂಕ್‌ನಲ್ಲಿ ಉತ್ತೀರ್ಣರಾದರಷ್ಟೇ ಮುಂದಿನ ಬಾಗಿಲು ತೆರೆದುಕೊಳ್ಳುವುದು.
ಸರಕಾರಿ ಅಥವಾ ಖಾಸಗಿ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇನ್ನಿತರ ಯಾವುದೇ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಾವಕಾಶ ಕಲ್ಪಿಸುವ ಪರೀಕ್ಷೆಯೇ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್). ಎಂಬಿಬಿಎಸ್, ಬಿಡಿಎಸ್ ಅಥವಾ ಸ್ನಾತಕೋತ್ತರ ಕೋರ್ಸ್ ಎಂ.ಡಿ., ಎಂ.ಎಸ್. ಅಭ್ಯಸಿಸಲು ಬಯಸುವ ವಿದ್ಯಾರ್ಥಿಗಳಿಗೆ ಇದೊಂದು ಪ್ರವೇಶ ಪರೀಕ್ಷೆ. ನೀಟ್ ಪರೀಕ್ಷೆಯನ್ನು ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸಿಕೊಡುತ್ತದೆ.
Related Articles
Advertisement
ನೀಟ್ ಪರೀಕ್ಷೆ ಬರೆಯುವವರು ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿ ಫಿಸಿಕ್ಸ್, ಕೆಮೆಸ್ಟ್ರಿ ಬಯೋಲಾಜಿ, ಬಯೋ ಟೆಕ್ನಾಲಜಿ, ಇಂಗ್ಲಿಷ್ ಪಠ್ಯಗಳನ್ನು ಅಭ್ಯಸಿಸಿರಬೇಕು. ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ ಶೇ.50ರಷ್ಟು ಅಂಕಗಳನ್ನು ಪಡೆದಿರಬೇಕು.
ನೀಟ್ ಪರೀಕ್ಷೆಯನ್ನು 17- 25 ವಯ ಸ್ಸಿ ನೊ ಳ ಗಿನವ ರು ಹಲವು ಬಾರಿ ಬರೆಯಬಹುದು. ಆದರೆ ವಯಸ್ಸು ಮೀರಿ ದರೆ ನೀಟ್ ಪರೀಕ್ಷೆ ಎದುರಿಸುವಂತಿಲ್ಲ. ಎನ್‌ಟಿಎ ರೂಪಿಸಿದ ನಿಯಮಗಳ ಅನ್ವಯ ದೇಶದ ಎಲ್ಲ ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ಆನ್‌ಲೈನ್ ಮೂಲಕ ನೀಟ್ ಪರೀಕ್ಷೆಗೆ ಅರ್ಜಿಗಳನ್ನು ಸಲ್ಲಿಸಿ ಬಂದ ಮಾಹಿತಿಯಂತೆ ಪರೀಕ್ಷೆ ಎದುರಿಸಬೇಕಾಗುತ್ತದೆ. ದೇಶದ ಯಾವುದೇ ಭಾಗಗಳ ಪರೀಕ್ಷಾ ಕೇಂದ್ರಗಳನ್ನು ಪರೀಕ್ಷಾ ಮಂಡಳಿ ಸೂಚಿಸಿದರೆ ಅಲ್ಲಿ ತೆರಳಿ ಪರೀಕ್ಷೆ ಎದುರಿಸಬೇಕಾಗುತ್ತದೆ.
ಪೂರ್ವಸಿದ್ಧತೆ ಅಗತ್ಯಯಾವುದೇ ಪರೀಕ್ಷೆಯನ್ನು ಎದುರಿಸಲು ಪೂರ್ವ ಸಿದ್ಧತೆ ಅಗತ್ಯವಾಗಿರುತ್ತದೆ. ಇದರಂತೆ ನೀಟ್ ಪರೀಕ್ಷೆಗೂ ಪೂರ್ವ ತಯಾರಿ ಬೇಕು. ವೈದ್ಯರಾಗಿ ಸೇವೆ ಮಾಡಬೇಕು ಎಂದು ಬಯಸುವವರು ಖಾಸಗಿ ಕಾಲೇಜುಗಳಿಗೆ ದುಬಾರಿ ಫೀಸ್ ನೀಡಿ ಸೇರಿಕೊಳ್ಳುವುದಕ್ಕಿಂತ ಪರೀಕ್ಷೆ ಬರೆದು ಉತ್ತಮ ಅಂಕಗಳನ್ನು ಪಡೆದು ಕಾಲೇಜು ಮೆಟ್ಟಲೇರುವುದು ಉತ್ತಮ ಎಂಬ ಕಾರಣಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ನೀಟ್ ಪರೀಕ್ಷೆ ಬರೆಯಲು ಹವಣಿಸುತ್ತಾರೆ. ಪ್ರಥಮ ಪಿಯುಸಿಯಲ್ಲೇ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರ ವಹಿಸಬೇಕಾಗುತ್ತದೆ. ಕಾಲೇಜು ದಿನಗಳಲ್ಲಿ ವಿಜ್ಞಾನ ವಿಷಯದಲ್ಲಿ ಆಯ್ದ ವಿಭಾಗಗಳನ್ನು ಹೆಚ್ಚು ಅಭ್ಯಸಿಸಬೇಕಾಗುತ್ತದೆ. ಆದಕ್ಕೆ ಪೂರಕವಾದ ಪುಸ್ತಕಗಳನ್ನು ಹೆಚ್ಚು ಓದಬೇಕಾಗುತ್ತದೆ. ಏಕಾಗ್ರತೆ, ತಾಳ್ಮೆ ಈ ನೀಟ್ ಪರೀಕ್ಷೆಗೆ ಅತೀ ಮುಖ್ಯ. ಯಾವುದೇ ಕಾರಣಕ್ಕೂ ಬೇಜವಾಬ್ದಾರಿ ಬೇಡವೇ ಬೇಡ. ಈ ಪರೀಕ್ಷೆಯಲ್ಲೇ ಭವಿಷ್ಯ ನಿರ್ಧಾರವಾಗಲಿರುವುದರಿಂದ ಏಕಾಗ್ರತೆ, ದೃಢ ಮನಸ್ಸು, ತಾಳ್ಮೆಯಿಂದ ಪರೀಕ್ಷೆಗೆ ಸಿದ್ಧತೆ ನಡೆಸುವ ಅಗತ್ಯವಿದೆ. ಓದಿರುವ ವಿಷಯಗಳನ್ನೇ ಓದುತ್ತಿದ್ದೇನೆ ಎಂಬ ಉಡಾಫೆ ಇಟ್ಟುಕೊಳ್ಳದಿರಿ. ಇದು ನಿಮ್ಮ ಭವಿಷ್ಯಕ್ಕೆ ನೀವೇ ಅಂತ್ಯ ಹಾಡಿದಂತಾಗುತ್ತದೆ.
ಸ್ನೇಹಿತರೊಂದಿಗೆ, ಈಗಾಗಲೇ ನೀಟ್ ಪರೀಕ್ಷೆ ಬರೆದವರೊಂದಿಗೆ ಕೆಲ ಹೊತ್ತು ಚರ್ಚೆ ಮಾಡಿ. ಇದರಿಂದ ಕೆಲವೊಂದು ಅಗತ್ಯ ಮಾಹಿತಿಗಳು ದೊರೆಯುವ ಸಾಧ್ಯತೆಗಳಿವೆ. ನೀಟ್ ಪರೀಕ್ಷೆ ಬರೆದು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದರೆ ವೈದ್ಯಕೀಯ ಸೀಟುಗಳನ್ನು ಪಡೆದು ಕೊಳ್ಳಬಹುದು. ಇಲ್ಲವಾದಲ್ಲಿ ಮುಂದೆ ಯಾವುದೇ ರೀತಿಯ ಸ್ಪರ್ಧಾತ್ಮಕ ಪರೀಕ್ಷೆ ಗಳನ್ನು ಎದುರಿಸುವಾಗ ನೀಟ್ ಪರೀಕ್ಷೆ ಅನುಭವ ಉಪಯೋಗಕ್ಕೆ ಬರುತ್ತದೆ. - ಪ್ರಜ್ಞಾ ಶೆಟ್ಟಿ