Advertisement

ನೀಟ್‌ ರದ್ದತಿಗೆ ಸುಪ್ರೀಂ ಕೋರ್ಟ್‌ ನಕಾರ

10:48 PM Oct 04, 2021 | Team Udayavani |

ಹೊಸದಿಲ್ಲಿ: ವೈದ್ಯಕೀಯ ಶಿಕ್ಷಣಕ್ಕೆ ನಡೆಸಲಾಗುವ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ “ನೀಟ್‌’ ಅನ್ನು ರದ್ದು ಮಾಡಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Advertisement

ಪರೀಕ್ಷೆಯು ಪಾರದರ್ಶಕವಾಗಿ ಹಾಗೂ ನ್ಯಾಯಸಮ್ಮತವಾಗಿ ನಡೆಯದ ಕಾರಣ, ಅದನ್ನು ರದ್ದು ಮಾಡಬೇಕು ಎಂದು ಕೋರಿ 20 ವರ್ಷದ ಯುವಕನೊಬ್ಬ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿ ವಜಾ ಮಾಡಿ, ಈ ತೀರ್ಪು ನೀಡಿದೆ.

ಲಕ್ಷಾಂತರ ವಿದ್ಯಾರ್ಥಿಗಳು ನೀಟ್‌ ಪರೀಕ್ಷೆ ಬರೆದಿದ್ದಾರೆ. ಹೀಗಿರುವಾಗ ಪರೀಕ್ಷೆ ರದ್ದು ಮಾಡುವುದು ಬೇರೆಯೇ ರೀತಿಯಲ್ಲಿ ಪರಿಣಾಮ ಬೀರಲಿದೆ. ಈ ಕುರಿತು ನೀವು ಅರ್ಜಿದಾರರಿಗೆ ಅರಿವು ಮೂಡಿಸುವ ಕೆಲಸವನ್ನು ಏಕೆ ಮಾಡಲಿಲ್ಲ ಎಂದು  ನ್ಯಾಯಪೀಠ  ವಕೀಲರನ್ನು ತರಾಟೆಗೆ ತೆಗೆದುಕೊಂಡಿತು.

ಇದನ್ನೂ ಓದಿ:ಐವಿಎಫ್ ಮೂಲಕ 6 ಕರು ಸೃಷ್ಟಿ! ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ವೈಜ್ಞಾನಿಕ ಪ್ರಯೋಗ ಯಶಸ್ವಿ

ಸ್ಟಾಲಿನ್‌ ಪತ್ರ: ನೀಟ್‌ಗೆ ತಮಿಳುನಾಡಿನಲ್ಲಿ ನಿಷೇಧ ಹೇರಿರುವ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಆಂಧ್ರ, ದೆಹಲಿ, ಜಾರ್ಖಂಡ್‌, ಛತ್ತೀಸ್‌ಗಢ, ಕೇರಳ, ಮಹಾರಾಷ್ಟ್ರ, ಒಡಿಶಾ, ಪಂಜಾಬ್‌, ಪಶ್ಚಿಮ ಬಂಗಾಲ, ರಾಜಸ್ಥಾನ, ತೆಲಂಗಾಣ, ಗೋವಾದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ನೀಟ್‌ ಪರೀಕ್ಷೆ ನಿಷೇಧಿಸಲು ನಮಗೆ ಬೆಂಬಲಿಸಿ ಎಂದು ಮನವಿ ಮಾಡಿದ್ದಾರೆ.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next