Advertisement
ಖೇಲ್ ರತ್ನ ಪ್ರಶಸ್ತಿ ಪಡೆದ ಪ್ರಮುಖ ಸಾಧಕರಲ್ಲಿ ಟೋಕಿಯೊ ಒಲಿಂಪಿಕ್ಸ್ 2021 ರಲ್ಲಿ ಜಾವೆಲಿನ್ ಎಸೆತದಲ್ಲಿ ಸ್ವರ್ಣ ಪದಕ ವಿಜೇತ ನೀರಜ್ ಚೋಪ್ರಾ, ಕುಸ್ತಿ ಪಟು ರವಿ ಕುಮಾರ್, ಲೊವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ಶ್ರೀಜೇಶ್ ಪಿಆರ್ (ಹಾಕಿ), ಅವನಿ ಲೆಖರಾ (ಪ್ಯಾರಾ ಶೂಟಿಂಗ್), ಸುಮಿತ್ ಆಂಟಿಲ್ (ಪ್ಯಾರಾ-ಅಥ್ಲೆಟಿಕ್ಸ್), ಪ್ರಮೋದ್ ಭಗತ್ (ಪ್ಯಾರಾ ಬ್ಯಾಡ್ಮಿಂಟನ್), ಕೃಷ್ಣ ನಗರ (ಪ್ಯಾರಾ ಬ್ಯಾಡ್ಮಿಂಟನ್), ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್), ಮಿಥಾಲಿ ರಾಜ್ (ಕ್ರಿಕೆಟ್), ಸುನಿಲ್ ಛೆಟ್ರಿ (ಫುಟ್‌ಬಾಲ್), ಮತ್ತು ಮನ್‌ಪ್ರೀತ್ ಸಿಂಗ್ (ಹಾಕಿ) ಸೇರಿದ್ದಾರೆ. ಇದೆ ಮೊದಲ ಬಾರಿಗೆ 12 ಮಂದಿಗೆ ಖೇಲ್ ರತ್ನ ಪ್ರಶಸ್ತಿ ನೀಡಲಾಗಿದೆ.
Related Articles
Advertisement
ದ್ರೋಣಾಚಾರ್ಯ ಪ್ರಶಸ್ತಿ
ಟಿಪಿ ಔಸೆಫ್, ಸರ್ಕಾರ್ ತಲ್ವಾರ್, ಸರ್ಪಾಲ್ ಸಿಂಗ್, ಅಶನ್ ಕುಮಾರ್ ಮತ್ತು ತಪನ್ ಕುಮಾರ್ ಪಾಣಿಗ್ರಾಹಿ ಅವರಿಗೆ ಸಂದಿದೆ. ನಿಯಮಿತ ವಿಭಾಗದಲ್ಲಿ ರಾಧಾಕೃಷ್ಣನ್ ನಾಯರ್ ಪಿ, ಸಂಧ್ಯಾ ಗುರುಂಗ್, ಪ್ರೀತಮ್ ಸಿವಾಚ್, ಜೈ ಪ್ರಕಾಶ್ ನೌಟಿಯಾಲ್ ಮತ್ತು ಸುಬ್ರಮಣಿಯನ್ ರಾಮನ್ ಅವರಿಗೆ ನೀಡಲಾಯಿತು.
ಜೀವಮಾನದ ಸಾಧನೆಗಾಗಿ ಧ್ಯಾನ್ ಚಂದ್ ಪ್ರಶಸ್ತಿಯನ್ನು ಲೇಖಾ ಕೆಸಿ, ಅಭಿಜೀತ್ ಕುಂಟೆ, ದವೀಂದರ್ ಸಿಂಗ್ ಗಾರ್ಚಾ, ವಿಕಾಸ್ ಕುಮಾರ್ ಮತ್ತು ಸಜ್ಜನ್ ಸಿಂಗ್ ಪಡೆದರು.