Advertisement
ನಗರದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಇಲ್ಲಿಯವರೆಗೆ ಸಾವಿರಾರು ಮರಗಳ ಮಾರಣಹೋಮ ನಡೆದಿದೆ. ನಗರದ ರಸ್ತೆಗಳ ಅಭಿವೃದ್ಧಿಯಾದ ಮೇಲೆ ಮುಖ್ಯರಸ್ತೆಯಲ್ಲಿ ಮರಗಳು ಇರಲಿ ಎಂದು ಪರಿಸರಪ್ರೇಮಿ ಸಾಹಿತಿ ಪೊ›. ಸಿದ್ದಪ್ಪ ಮತ್ತು ಅವರ ಸ್ನೇಹ ಬಳಗ, ಮಹಾನಗರ ಪಾಲಿಕೆ, ಅರಣ್ಯ ಇಲಾಖೆಯಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರ ಪಡೆದು ರಸ್ತೆ ವಿಭಜಕದಲ್ಲಿ ಬೇವಿನ ಮರಗಳನ್ನು ಬೆಳೆಸಲಾಗಿತ್ತು. ನಗರದ ಬಿ.ಎಚ್. ರಸ್ತೆಯಲ್ಲಿ ಕಳೆದ 11 ವರ್ಷ ದಿಂದ ಬೆಳೆಸಿದ್ದ ಬೇವಿನಮರಗಳನ್ನು ಗುತ್ತಿಗೆದಾರರು ಯಾವುದೇ ಅನುಮತಿ ಪಡೆಯದೆ ರಾತ್ರೋರಾತ್ರಿ ಕಡಿದು ಹಾಕಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
Related Articles
Advertisement
ಅಕ್ಷಮ್ಯ ಅಪರಾಧ: ಘಟನಾ ಸ್ಥಳಕ್ಕೆ ಧಾವಿಸಿದ ಮಹಾ ನಗರ ಪಾಲಿಕೆ ಆಯುಕ್ತ ರೇಣುಕಾ ಮಾತನಾಡಿ, ನಗರದಲ್ಲಿ 4 ಲಕ್ಷಕ್ಕೂ ಅಧಿಕ ಜನವಾಸಿಸುತ್ತಿದ್ದಾರೆ. ಅವರಿಗೆಲ್ಲ ಉತ್ತಮ ಗಾಳಿ, ಉತ್ತಮಪರಿಸರ ಒದಗಿಸುವ ಆದ್ಯ ಕರ್ತವ್ಯ ನಮ್ಮದಾಗಿದೆ. ಮರಗಳನ್ನು ಉಳಿಸಿ-ಬೆಳೆಸುವ ಜವಾಬ್ದಾರಿಪ್ರತಿಯೊಬ್ಬರ ಮೇಲಿದೆ. ಸ್ವತ್ಛ ಸರ್ವೇಕ್ಷಣೆಯಲ್ಲಿ ತುಮಕೂರು ಪಾಲಿಕೆಗೆ ಉತ್ತಮ ರ್‍ಯಾಂಕಿಂಗ್‌ಬರುತ್ತಿದೆ. ಹೀಗಿರುವಾಗ ಏಕಾಏಕಿ ಮರಗಳನ್ನು ಕಡಿದು ಹಾಕಿರುವುದು ಅಕ್ಷಮ್ಯ ಅಪರಾಧ ಇದನ್ನುಸಹಿಸಲು ಸಾಧ್ಯವಿಲ್ಲ ಎಂದರು.
ಅನುಮತಿ ಕೊಟ್ಟಿಲ್ಲ: 2020ರಲ್ಲಿ ಪಾಲಿಕೆ ವತಿಯಿಂದ ಜಾಹೀರಾತು ನಾಮಫಲಗಳನ್ನು ಅಳವಡಿಸಲು ಟೆಂಡರ್ ಗುತ್ತಿಗೆ ನೀಡಲಾಗಿದೆ. ಬಿ.ಎಚ್. ರಸ್ತೆ. ಎಂ.ಜಿ. ರಸ್ತೆ, ಅಶೋಕ ರಸ್ತೆ ಸೇರಿದಂತೆಪ್ರಮುಖ ರಸ್ತೆಗಳಲ್ಲಿ ಜಾಹೀರಾತು ನಾಮಫಲಕಅಳಪಡಿಸುವ ಗುತ್ತಿಗೆಯನ್ನು 15 ಲಕ್ಷ ರೂ.ಗಳಿಗೆ ನೀಡಲಾಗಿದೆ. ಆದರೆ, ಗುತ್ತಿಗೆದಾರರಿಗೆ ಮರ ಕಡಿಯಲು ಯಾರೂ ಅನುಮತಿ ಕೊಟ್ಟಿಲ್ಲಎಂದರು.
ಆಟೋ ನವೀನ್, ಜಯಕರ್ನಾಟಕ ಸಂಘಟನೆಯ ಚಂದನ್ ಪಟೇಲ್, ಕುಮಾರ್ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿ ಹಾಗೂ ಪರಿಸರ ಪ್ರೇಮಿಗಳು ಇದ್ದರು.
ಕಠಿಣ ಕ್ರಮಗೊಳ್ಳಲು ಶಾಸಕ ಜ್ಯೋತಿಗಣೇಶ್‌ಸೂಚನೆ :
ತುಮಕೂರು: ನಗರದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ರಸ್ತೆಯಲ್ಲಿರುವ ಶ್ರೀ ಸಿದ್ಧಗಂಗಾ ಆಸ್ಪತ್ರೆಯ ಮುಂಭಾಗ ರಸ್ತೆ ವಿಭಜಕದಲ್ಲಿದ್ದಂ ತಹ ಮರವನ್ನು ಕಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾ ಗಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದರು.
ಈಗಾಗಲೇ ಅರಣ್ಯ ಇಲಾಖೆ ಯವರು ಈ ಸಂಬಂಧವಾಗಿ ಎಫ್ಐಆರ್ ದಾಖಲಿಸಿದ್ದಾರೆ. ಮಹಾನಗರ ಪಾಲಿಕೆಯಿಂದ ತುಮಕೂರು ನಗರದಲ್ಲಿ ಜಾಹೀರಾತು ಫಲಕ ಅಳವಡಿಸುಲುಅನುಮತಿ ಪಡೆದಿರುವ ಗುತ್ತಿಗೆದಾರರು ಈ ಕೆಲಸವನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಗುತ್ತಿಗೆದಾರರನ್ನು ಅನರ್ಹಗೊಳಿಸಲು ಮಹಾನಗರ ಪಾಲಿಕೆ ಆಯುಕ್ತರಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗು ುದು ಎಂದು ತಿಳಿಸಿದ್ದಾರೆ.
ಇಂದಿನ ದಿನದಲ್ಲಿ ಪ್ರಕೃತಿಯನ್ನುಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬರಮೇಲಿದೆ. ಆಮ್ಲಜನಕವಿಲ್ಲದೆ ಸಾಯುತ್ತಿರುವ ದಾರುಣ ಪರಿಸ್ಥಿತಿ ಒಂದು ಕಡೆಯಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಹೀಗೆ ವಿನಾಕಾರಣಮರ ಕಡಿದು ಮಾರಣಹೋಮ ನಡೆಸುತ್ತಿರುವುದು ಎಗ್ಗಿಲ್ಲದಂತೆ ಸಾಗಿದೆ. ಮರಕಡಿಯುವ ಹೇಯ ಕೃತ್ಯವನ್ನು ಎಸಗಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. –ಸೊಗಡು ಎಸ್. ಶಿವಣ್ಣ, ಮಾಜಿ ಸಚಿವ
ನಗರದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಮಾತ್ರ ಗುತ್ತಿಗೆ ನೀಡಲಾಗಿದೆ ಅಷ್ಟೇ. ಅವರು ನಮ್ಮ ಪಾಲಿಕೆಯ ಅನುಮತಿ ಕೇಳಿಲ್ಲ, ಅರಣ್ಯ ಇಲಾಖೆ ಅನುಮತಿಯನ್ನು ನೀಡಿಲ್ಲ. ಯಾರ ಅನುಮತಿ ಪಡೆಯದೇ ಮರ ಕಡಿದು ಹಾಕಿದ್ದು, ಇದನ್ನು ಸಹಿಸಲು ಸಾಧ್ಯವಿಲ್ಲ. ಜಾಹೀರಾತು ಫಲಕ ಅಳವಡಿಸುವ ಗುತ್ತಿಗೆ ರದ್ದು ಮಾಡಲು ಕ್ರಮ ಕೈಗೊಳ್ಳುತ್ತೇನೆ. – ರೇಣುಕಾ, ಪಾಲಿಕೆ ಆಯುಕ್ತೆ
ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಂದನೂರಾರು ಮರಗಳ ಮಾರಣ ಹೋಮ ನಡೆದಿದೆ. ರಸ್ತೆ ವಿಭಜಕದಲ್ಲಿ ಬೆಳೆದಿರುವಮರಗಳನ್ನು ಗುತ್ತಿಗೆದಾರ ಕಡಿದುಹಾಕಿದ್ದಾರೆ. ಮರ ಕಡಿದಿರುವ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಂಡು ಅವರ ಜಾಹೀರಾತು ಗುತ್ತಿಗೆ ರದ್ದು ಪಡಿಸಲಿ. –ಧನಿಯಾಕುಮಾರ್, ಕನ್ನಡ ಸೇನೆ ಜಿಲ್ಲಾಧ್ಯಕ್ಷ