Advertisement

ಒಂದು ಓವರ್‌ ಇರುವಾಗಲೇ ಗೆಲ್ಲಬೇಕಿತ್ತು: ಅಯ್ಯರ್‌

11:15 PM Mar 31, 2019 | Team Udayavani |

ಹೊಸದಿಲ್ಲಿ: “ಈ ಪಂದ್ಯ ಸೂಪರ್‌ ಓವರ್‌ ತನಕ ಸಾಗುತ್ತದೆಂದು ತಾನು ಭಾವಿಸಿರಲಿಲ್ಲ, ಒಂದು ಓವರ್‌ ಇರುವಾಗಲೇ ನಾವು ಗೆಲ್ಲಬೇಕಿತ್ತು’ ಎಂಬುದಾಗಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಹೇಳಿದ್ದಾರೆ.

Advertisement

ಶನಿವಾರ ರಾತ್ರಿ ಫಿರೋಜ್‌ ಶಾ ಕೋಟ್ಲಾ ಅಂಗಳದಲ್ಲಿ ನಡೆದ ಡೆಲ್ಲಿ-ಕೆಕೆಆರ್‌ ನಡುವಿನ ಪಂದ್ಯ ಟೈ ಆಗಿ, ಸೂಪರ್‌ ಓವರ್‌ನಲ್ಲಿ ಫ‌ಲಿತಾಂಶ ಕಂಡಿತ್ತು. ಇದರಲ್ಲಿ ಆತಿಥೇಯ ಡೆಲ್ಲಿ ಜಯ ಸಾಧಿಸಿತ್ತು. ಪೃಥ್ವಿ ಶಾ, ಶ್ರೇಯಸ್‌ ಅಯ್ಯರ್‌ ಅವರ ಆಟ ಕಂಡಾಗ ಡೆಲ್ಲಿ ಸುಲಭದಲ್ಲೇ ಈ ಪಂದ್ಯ ಗೆಲ್ಲುವ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಅಂತಿಮ ಓವರ್‌ನಲ್ಲಿ ಮ್ಯಾಜಿಕ್‌ ಮಾಡಿದ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌, ಡೆಲ್ಲಿಯನ್ನು ಕಟ್ಟಿಹಾಕಿಯೇ ಬಿಟ್ಟರು!

ಅಂತಿಮ ಓವರ್‌, 6 ರನ್‌ ಗುರಿ
ಕೊನೆಯ ಓವರ್‌ನಲ್ಲಿ ಡೆಲ್ಲಿ ಗೆಲುವಿಗೆ ಕೇವಲ 6 ರನ್‌ ಬೇಕಿತ್ತು. 6 ವಿಕೆಟ್‌ಗಳೂ ಕೈಲಿದ್ದವು. ಆದರೆ ಕುಲದೀಪ್‌ ಇದಕ್ಕೆ ಅವಕಾಶ ಕೊಡದೆ ಪಂದ್ಯವನ್ನು “ಸೂಪರ್‌ ಓವರ್‌’ಗೆ ವಿಸ್ತರಿಸಿದರು. ಆ ಓವರಿನ ಮೊದಲ ಎಸೆತದಲ್ಲಿ ಹನುಮ ವಿಹಾರಿ ಒಂದು ರನ್‌ ಮಾಡಿದರು. ಮುಂದಿನ ಎಸೆತದಲ್ಲಿ ಕಾಲಿನ್‌ ಇನ್‌ಗಾÅಮ್‌ 2 ರನ್‌ ತೆಗೆದರು. 3ನೆಯದು ಡಾಟ್‌ ಬಾಲ್‌. 4ನೇ ಎಸೆತಕ್ಕೆ ಮತ್ತೆ ಒಂಟಿ ರನ್‌. 5ನೇ ಎಸೆತಕ್ಕೆ ವಿಹಾರಿ ಔಟ್‌.

ಕೊನೆಯ ಎಸೆತದಲ್ಲಿ 2 ರನ್‌ ತೆಗೆಯಬೇಕಾದ ಸ್ಥಿತಿ. ಒಂದು ರನ್‌ ಸಂಪಾದಿಸಿದ ಇನ್‌ಗಾÅಮ್‌ 2ನೇ ರನ್‌ ಕದಿಯುವ ಯತ್ನದಲ್ಲಿ ರನೌಟಾದರು! ಸ್ಕೋರ್‌ ಸಮನಾಯಿತು.

ಕುಲದೀಪ್‌ಗೆ ಕ್ರೆಡಿಟ್‌
ಈ ಪಂದ್ಯದ ಎಲ್ಲ ಶ್ರೇಯಸ್ಸು ಕುಲದೀಪ್‌ ಯಾದವ್‌ಗೆ ಸಲ್ಲಬೇಕು ಎಂದು ಅಯ್ಯರ್‌ ಹೇಳಿದರು. “ಕುಲದೀಪ್‌ ಅವರ ಕೊನೆಯ ಓವರ್‌ ನಿಜಕ್ಕೂ ಅಮೋಘವಾಗಿತ್ತು. ಅವರು ನಮ್ಮನ್ನು ಸಂಪೂರ್ಣವಾಗಿ ಕಟ್ಟಿಹಾಕಿದರು. ಹಾಗೆಯೇ ನಮ್ಮ ವೇಗಿ ಕಾಗಿಸೊ ರಬಾಡ ಸೂಪರ್‌ ಓವರನ್ನು ಬಹಳ ಜಾಣ್ಮೆಯಿಂದ ಎಸೆದರು. ಇದನ್ನು ಎಸೆಯುವ ಮುನ್ನ ನನ್ನ ಜತೆ ಚರ್ಚಿಸಿದ ರಬಾಡ, ತಾನು ಯಾರ್ಕರ್‌ ಎಸೆತಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿದ್ದರು. ಅವರ ಬೌಲಿಂಗ್‌ ಕೌಶಲ ತಂಡದ ನೆರವಿಗೆ ಬಂತು’ ಎಂದು ಅಯ್ಯರ್‌ ಶ್ಲಾ ಸಿದರು.

Advertisement

“ನಮ್ಮಲ್ಲಿ ಪೃಥ್ವಿ ಶಾ, ಅವರಲ್ಲಿ ಆ್ಯಂಡ್ರೆ ರಸೆಲ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶನವಿತ್ತರು. ಭಾರೀ ಜೋಶ್‌ನಲ್ಲಿರುವಾಗ ರಸೆಲ್‌ ಅವರನ್ನು ತಡೆಯುವುದು ಕಷ್ಟ. ಅವರು ತಪ್ಪಿ ಬಾರಿಸಿದ ಹೊಡೆತಗಳೂ ಸಿಕ್ಸರ್‌ ಆಗುತ್ತವೆ’ ಎಂದರು ಅಯ್ಯರ್‌. ಜತೆಗೆ ತಮ್ಮ ಬ್ಯಾಟಿಂಗ್‌ ಬಗ್ಗೆಯೂ ಖುಷಿಪಟ್ಟರು.

ಐಪಿಎಲ್‌ನಲ್ಲಿ 8ನೇ ಸಲ ಟೈ ಫ‌ಲಿತಾಂಶ ದಾಖಲಾಯಿತು.

ಡೆಲ್ಲಿ ಮೊದಲ ಸಲ ಸೂಪರ್‌ ಓವರ್‌ನಲ್ಲಿ ಗೆಲುವು ಸಾಧಿಸಿತು. ಆರ್‌ಸಿಬಿ ಎದುರಿನ 2013ರ ಬೆಂಗಳೂರು ಪಂದ್ಯ ಟೈ ಆದಾಗ ಡೆಲ್ಲಿ ಸೂಪರ್‌ ಓವರ್‌ನಲ್ಲಿ ಪರಾಭವಗೊಂಡಿತ್ತು.

ಡೆಲ್ಲಿ ಸೂಪರ್‌ ಓವರ್‌ನಲ್ಲಿ ಅತೀ ಕಡಿಮೆ ರನ್ನನ್ನು ಉಳಿಸಿಕೊಂಡ ತಂಡವೆನಿಸಿತು (10 ರನ್‌).

ಕೆಕೆಆರ್‌ ಈವರೆಗೆ 3 ಸಲ ಸೂಪರ್‌ ಓವರ್‌ನಲ್ಲಿ ಆಡಿದ್ದು, ಮೂರೂ ಸಲ ಸೋಲನುಭವಿಸಿತು.

ಈ ಪಂದ್ಯದ 2 ಸೂಪರ್‌ ಓವರ್‌ಗಳಲ್ಲಿ ಒಟ್ಟು 17 ರನ್‌ ಬಂತು. ಇದು ಐಪಿಎಲ್‌ ಪಂದ್ಯವೊಂದರ ಸೂಪರ್‌ ಓವರ್‌ಗಳಲ್ಲಿ ದಾಖಲಾದ ಅತೀ ಕಡಿಮೆ ಸ್ಕೋರ್‌ನ ಜಂಟಿ ದಾಖಲೆ. 2017ರ ಮುಂಬೈ ಇಂಡಿಯನ್ಸ್‌-ಗುಜರಾತ್‌ ಲಯನ್ಸ್‌ ನಡುವಿನ ಸೂಪರ್‌ ಓವರ್‌ನಲ್ಲೂ 17 ರನ್‌ ಬಂದಿತ್ತು. ಮುಂಬೈ ಮೊದಲು ಬ್ಯಾಟಿಂಗ್‌ ಮಾಡಿ 11 ರನ್‌ ಗಳಿಸಿದ ಬಳಿಕ ಬುಮ್ರಾ ಕೇವಲ 6 ರನ್‌ ನೀಡಿದ್ದರು.

ಪೃಥ್ವಿ ಶಾ ಐಪಿಎಲ್‌ನಲ್ಲಿ 99 ರನ್ನಿಗೆ ಔಟಾದ ಭಾರತದ 2ನೇ ಆಟಗಾರ. 2013ರಲ್ಲಿ ಡೆಲ್ಲಿ ವಿರುದ್ಧ ಕೋಟ್ಲಾ ಅಂಗಳದಲ್ಲೇ ವಿರಾಟ್‌ ಕೊಹ್ಲಿ 99ಕ್ಕೆ ಔಟಾಗಿದ್ದರು. ಅದೇ ವರ್ಷ ಹೈದರಾಬಾದ್‌ ವಿರುದ್ಧ ಸುರೇಶ್‌ ರೈನಾ 99 ರನ್‌ ಮಾಡಿ ಅಜೇಯರಾಗಿದ್ದರು.

ರಸೆಲ್‌-ಕಾರ್ತಿಕ್‌ 95 ರನ್‌ ಜತೆಯಾಟ ನಡೆಸಿದರು. ಇದು 6ನೇ ವಿಕೆಟಿಗೆ ದಾಖಲಾದ ಕೆಕೆಆರ್‌ನ 2ನೇ ಅತ್ಯಧಿಕ ಗಳಿಕೆಯ ಜಂಟಿ ದಾಖಲೆ. 2015ರಲ್ಲಿ ಪಂಜಾಬ್‌ ವಿರುದ್ಧ ರಸೆಲ್‌-ಯೂಸುಫ್ ಪಠಾಣ್‌ ಕೂಡ 95 ರನ್‌ ಪೇರಿಸಿದ್ದರು. 2012ರಲ್ಲಿ ಪಂಜಾಬ್‌ ವಿರುದ್ಧ ಡೇವಿಡ್‌ ಹಸ್ಸಿ-ವೃದ್ಧಿಮಾನ್‌ ಸಾಹಾ 104 ರನ್‌ ಒಟ್ಟುಗೂಡಿಸಿದ್ದು ದಾಖಲೆ.

ಆ್ಯಂಡ್ರೆ ರಸೆಲ್‌ ಐಪಿಎಲ್‌ನಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದರು. 42 ಇನ್ನಿಂಗ್ಸ್‌ಗಳಲ್ಲಿ ಅವರು ಈ ಮೈಲುಗಲ್ಲು ನೆಟ್ಟರು. ಸ್ಟ್ರೈಕ್‌ರೇಟ್‌ 185.33. ಇದು ಸಾವಿರ ರನ್‌ ಪೂರ್ತಿಗೊಳಿಸಿದವರಲ್ಲೇ ಅತ್ಯಧಿಕ ಸ್ಟ್ರೈಕ್‌ರೇಟ್‌ ಆಗಿದೆ. ರಿಷಬ್‌ ಪಂತ್‌ ದ್ವಿತೀಯ ಸ್ಥಾನಿಯಾಗಿದ್ದಾರೆ (165.69).

ಡೆಲ್ಲಿ-ಕೆಕೆಆರ್‌
ಜ ಡೆಲ್ಲಿ-10/1
ಜ ಕೆಕೆಆರ್‌-7/1
ಜ ಬೌಲರ್‌: ಪ್ರಸಿದ್ಧ್ ಕೃಷ್ಣ (ಕೆಕೆಆರ್‌)
1. ಪಂತ್‌-1 ರನ್‌, 1/0
2. ಅಯ್ಯರ್‌-4 ರನ್‌, 5/0
3. ಅಯ್ಯರ್‌ ಔಟ್‌, 5/1
4. ಪಂತ್‌-2 ರನ್‌, 7/1
5. ಪಂತ್‌-2 ರನ್‌, 9/1
6. ಪಂತ್‌-1 ರನ್‌, 10/1

ಜ ಬೌಲರ್‌: ಕಾಗಿಸೊ ರಬಾಡ (ಡೆಲ್ಲಿ)
1. ರಸೆಲ್‌-4 ರನ್‌, 4/0
2. ಡಾಟ್‌ ಬಾಲ್‌, 4/0
3. ರಸೆಲ್‌ ಔಟ್‌, 4/1
4. ಉತ್ತಪ್ಪ-1 ರನ್‌, 5/1
5. ಕಾರ್ತಿಕ್‌-1 ರನ್‌, 6/1
6. ಉತ್ತಪ್ಪ-1 ರನ್‌, 7/1

ಐಪಿಎಲ್‌ ಟೈ ಪಂದ್ಯಗಳು
ಪಂದ್ಯ ಸ್ಥಳ ವರ್ಷ
ರಾಜಸ್ಥಾನ್‌-ಕೆಕೆಆರ್‌ ಕೇಪ್‌ಟೌನ್‌ 2009
ಪಂಜಾಬ್‌-ಚೆನ್ನೈ ಚೆನ್ನೈ 2010
ಹೈದರಾಬಾದ್‌-ಆರ್‌ಸಿಬಿ ಹೈದರಾಬಾದ್‌ 2013
ಆರ್‌ಸಿಬಿ-ಡೆಲ್ಲಿ ಬೆಂಗಳೂರು 2013
ರಾಜಸ್ಥಾನ್‌-ಕೆಕೆಆರ್‌ ಅಬುಧಾಬಿ 2014
ಪಂಜಾಬ್‌-ರಾಜಸ್ಥಾನ್‌ ಅಹ್ಮದಾಬಾದ್‌ 2015
ಮುಂಬೈ-ಗುಜರಾತ್‌ ರಾಜ್‌ಕೋಟ್‌ 2017
ಡೆಲ್ಲಿ-ಕೆಕೆಆರ್‌ ಹೊಸದಿಲ್ಲಿ 2019

Advertisement

Udayavani is now on Telegram. Click here to join our channel and stay updated with the latest news.

Next