Advertisement

ಸಿದ್ದಾಪುರ: ಅಭಿವೃದ್ಧಿ ಕಾಣದ ಸೋಣಿ ರಸ್ತೆ

12:51 PM Aug 01, 2022 | Team Udayavani |

ಸಿದ್ದಾಪುರ: ಸಿದ್ದಾಪುರ ಗ್ರಾ.ಪಂ.ಗೆ ಸಾಕಷ್ಟು ಆದಾಯಗಳು ಇದ್ದರೂ ಅದನ್ನು ಸರಿಯಾಗಿ ಬಳಕೆ ಮಾಡದೆ, ಆಡಳಿತ ಒಂದಲ್ಲೊಂದು ಕಾರ ಣಕ್ಕೆ ಸುದ್ದಿಯಾಗುತ್ತಿದೆ. ಗ್ರಾಮದಲ್ಲಿ ಅಭಿವೃದ್ಧಿಗಳು ಮರೀಚಿಕೆಯಾಗುತ್ತಿವೆ. ಗ್ರಾಮದ ಒಳಹೊಕ್ಕರೆ ಜನರ ಬದುಕಿನ ನೈಜ ಸ್ಥಿತಿ ಏನೆಂದು ತಿಳಿಯುತ್ತದೆ. ರಸ್ತೆಗಳೇ ಇಲ್ಲದೆ ಸೋಣಿ ಎಂಬ ಪ್ರದೇಶದಲ್ಲಿ ಅನಾರೋಗ್ಯಕ್ಕೀಡಾದರೆ ಅವರನ್ನು ಆಸ್ಪತ್ರೆಗೆ ಹೊತ್ತುಕೊಂಡೇ ಸಾಗಬೇಕಾದ ಪರಿಸ್ಥಿತಿಯಲ್ಲಿದೆ.

Advertisement

ಅರ್ಧಂಬರ್ಧ, ಕಳಪೆ ಕಾಮಗಾರಿಗಳು, ಆಡಳಿತದ ಅವ್ಯವಸ್ಥೆಗೆ ಹಿಡಿದ ಕೈಕನ್ನಡಿಯಾಗಿವೆ. ಉದಾಹಣೆಯಾಗಿ ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಸೋಣಿ ಭಾಗದ ಜನರು ನಾಗರಿಕ ಸೌಲಭ್ಯಗಳಿಂದ ವಂಚಿತರಾಗಿ ನರಕ ಸದೃಶ ಬದುಕು ಸಾಗಿಸುತ್ತಿದ್ದಾರೆ.

ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಸೋಣಿ ಎಂಬ ಪ್ರದೇಶವು ಕಾಡು ಪ್ರದೇಶಗಳನ್ನು ಒಳಗೊಂಡ ಪ್ರದೇಶವಾಗಿದೆ. ಇಲ್ಲಿ ಹೆಚ್ಚು ಪರಿ ಶಿಷ್ಟ ಜಾತಿಯ ಜನರು ವಾಸವಾಗಿದ್ದಾರೆ. ಇಲ್ಲಿಯ ರಸ್ತೆಗಳು ಮಳೆ ನೀರಿಗೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಪಂಚಾಯತ್‌ ಇದರ ಬಗ್ಗೆ ಗಮನ ಹರಿಸದ ಪರಿಣಾಮ ಸಾರ್ವಜನಿಕರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಪರದಾಡುವಂತಾಗಿದೆ.

ಮನವಿಗೆ ಸ್ಪಂದನೆ ಇಲ್ಲ

ರೋಗಿಗಳನ್ನು ಮತ್ತು ಹಿರಿಯ ನಾಗರಿಕರನ್ನು ಕರೆದೊಯ್ಯಲು ರಸ್ತೆಗಳೇ ಇಲ್ಲ. ಚುನಾವಣೆ ಹತ್ತಿರವಾದಾಗ ಪ್ರತ್ಯಕ್ಷರಾಗುವ ಜನಪ್ರತಿನಿಧಿಗಳು ಗೆದ್ದ ಅನಂತರ ಇಲ್ಲಿಯ ಜನರ ಸಮಸ್ಯೆ ಆಲಿಸಲು ಬರುವುದೇ ಇಲ್ಲ. ಹಲವು ಬಾರಿ ಸ್ಥಳೀಯಾಡಳಿತದಿಂದ ಶಾಸಕರ ತನಕ ಮನವಿ ನೀಡಿದ್ದರಾದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Advertisement

ಪಂ. ಅನುದಾನ ಸಾಲಲ್ಲ: ಮಳೆ ಹೆಚ್ಚಾಗಿರುದರಿಂದ ರಸ್ತೆ ಹಾಳಾಗಿದೆ. ಪಂಚಾಯತ್‌ ಅನುದಾನ ರಸ್ತೆ ಅಭಿವೃದ್ಧಿಗೆ ಸಾಕಾಗುವುದಿಲ್ಲ. ಈ ಭಾಗದಲ್ಲಿ 26ಕ್ಕೂ ಹೆಚ್ಚು ಎಸ್‌ಟಿ ಜನಾಂಗದ ಮನೆಗಳಿವೆ. ಅನುದಾನ ಬಿಡುಗಡೆಯಾಗಿಲ್ಲ. –ಗೋಪಾಲ ಶೆಟ್ಟಿ ಕ್ವಾಡ್ಗಿ ಸದಸ್ಯರು, ಗ್ರಾ.ಪಂ. ಸಿದ್ದಾಪುರ

-ಸತೀಶ ಆಚಾರ್‌ ಉಳ್ಳೂರು

Advertisement

Udayavani is now on Telegram. Click here to join our channel and stay updated with the latest news.

Next