Advertisement

ಬೊಳುವಾರು ರಸ್ತೆ ಚತುಷ್ಪಥ: ಸಮನ್ವಯ ಅಗತ್ಯ

10:10 PM Nov 13, 2019 | mahesh |

ಪುತ್ತೂರು: ಬೆಳೆಯುತ್ತಿರುವ ಪುತ್ತೂರು ನಗರಕ್ಕೆ ಸಂಪರ್ಕ ಕಲ್ಪಿಸು ವುದಕ್ಕೆ ಪೂರಕವಾಗಿ ಬೊಳು ವಾರಿನಿಂದ ಹಾರಾಡಿ ತನಕದ ರಸ್ತೆಯೂ ಚತುಷ್ಪಥವಾಗಬೇಕೆನ್ನುವ ಆಗ್ರಹಕ್ಕೆ ಲೋಕೋಪಯೋಗಿ ಇಲಾಖೆ ಸ್ಪಂದಿಸಿರುವುದನ್ನು ಬಿಟ್ಟರೆ ಕಂದಾಯ ಇಲಾಖೆ, ರೈಲ್ವೇ ಇಲಾಖೆ, ಸ್ಥಳೀಯಾಡಳಿತ, ಜನಪ್ರತಿನಿಧಿಗಳಿಂದ ನಿರೀಕ್ಷಿತ ಬೆಂಬಲ ಸಿಕ್ಕಿಲ್ಲ.

Advertisement

ಪುತ್ತೂರು – ಉಪ್ಪಿನಂಗಡಿ ರಸ್ತೆಯ ಹಾರಾಡಿಯಿಂದ ಒಂದಷ್ಟು ಭಾಗ ಚತುಷ್ಪಥಗೊಂಡಿದೆ. ಆದರೆ ಬೊಳು ವಾರು ಜಂಕ್ಷನ್‌ನಿಂದ ಹಾರಾಡಿ ತನಕ ಅಭಿವೃದ್ಧಿಗೊಳಿಸುವ ಅನಿವಾರ್ಯತೆ ಇದ್ದರೂ ರೈಲ್ವೇ ಮೇಲ್ಸೇ ತುವೆ ಅಭಿವೃದ್ಧಿ, ರಸ್ತೆ ಅಗಲ ಗೊಳಿಸಲು ಭೂ ಸ್ವಾಧೀನ ಆಗಬೇಕಿದೆ.

ಸ್ಪಂದನೆಯಿಲ್ಲ
ಬೊಳುವಾರು – ಹಾರಾಡಿ ಭಾಗವನ್ನು ಚತುಷ್ಪಥಗೊಳಿಸಲು ರೈಲ್ವೇ ಇಲಾಖೆಯ ಸೇತುವೆಯ ಅಗಲಗೊಳಿಸಲು ನಕಾಶೆ ತಯಾರಿಸಿಕೊಡುವಂತೆ ಲೋಕೋಪಯೋಗಿ ಇಲಾಖೆಯಿಂದ
ಪುತ್ತೂರು ರೈಲ್ವೇ ಸೀನಿಯರ್‌ ಸೆಕ್ಷನ್‌ ಎಂಜಿನಿಯರ್‌ಗೆ 2016ರ ಅ. 21ರಂದು ಪತ್ರ ರವಾನೆಯಾಗಿದೆ. ಆದರೆ ಈ ಕುರಿತು ರೈಲ್ವೇ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿಲ್ಲ. ಅಲ್ಲದೆ ರಸ್ತೆ ಅಗಲಗೊಳಿಸಲು ಈ ಭಾಗದಲ್ಲಿ ಭೂ ಸ್ವಾಧೀನಕ್ಕೆ ಸಂಬಂಧಿಸಿ ಪಕ್ಷಿನೋಟದ ನಕಾಶೆ ತಯಾರಿಸಿ ಸಲ್ಲಿಸಲು ಲೋಕೋಪಯೋಗಿ . ಇಲಾಖೆ 2015ರ ಜೂ. 6ರಂದು ತಹಶೀಲ್ದಾರ್‌ಗೆ ಪತ್ರ ರವಾನಿಸಿದೆ.  ತಹಶೀಲ್ದಾರ್‌ ಅವರಿಂದಲೂ ಸ್ಪಂದನೆ ಬಂದಿಲ್ಲ ಎಂಬ ಮಾಹಿತಿ ಲಭಿಸಿದೆ.

ಅನುದಾನ ಬೇಕು
ಪುತ್ತೂರು ಉಪ್ಪಿನಂಗಡಿ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸಲು ಹಾಗೂ ನೆಲ್ಯಾಡಿ, ಧರ್ಮಸ್ಥಳ ಕಡೆಯ ಸಂಪರ್ಕ ಸುಲಭವಾಗುವ ನಿಟ್ಟಿನಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುವ ಬೊಳುವಾರು -ಹಾರಾಡಿ ರಸ್ತೆ ಅಭಿವೃದ್ಧಿಯೂ ಆಗಬೇಕಿದೆ. ಈ ನಿಟ್ಟಿನಲ್ಲಿ ರೈಲ್ವೇ ಸೇತುವೆ ಅಭಿವೃದ್ಧಿಗೆ ಅಂದಾಜು 6 ಕೋಟಿ ರೂ. ಹಾಗೂ ಭೂ ಸ್ವಾಧೀನಕ್ಕೂ ಕೋಟಿ ಲೆಕ್ಕದಲ್ಲಿ ಅನುದಾನ ಬೇಕಾಗಿದೆ. ಅದಕ್ಕಾಗಿ ಜನಪ್ರತಿನಿಧಿಗಳ ಜತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳೂ ಇಚ್ಛಾಶಕ್ತಿ ತೋರಬೇಕಾಗಿದೆ.

ಈ ರಸ್ತೆ ಅಭಿವೃದ್ಧಿಗೆ ಸಂಬಂಧ ಪಡುವ ಎಲ್ಲ ಇಲಾಖೆಗಳ ಸಮ ನ್ವಯದ ಕಾಮಗಾರಿಗೆ, ಪ್ರಕ್ರಿಯೆಗೆ ಚಾಲನೆ ದೊರೆಯಲು ರೈಲ್ವೇ, ಲೋಕೋ ಪಯೋಗಿ ಇಲಾಖೆ, ಕಂದಾಯ ಇಲಾಖೆ, ಪುತ್ತೂರು ನಗರಸಭೆ ಅಧಿಕಾರಿಗಳ ಜಂಟಿ ಸಭೆಯನ್ನು ಆಯೋಜಿಸಿ ಸಮಂಜಸ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಹಾಗೂ ಸಂಸದರಿಗೆ ಬೊಳುವಾರು ನಿವಾಸಿ ರಾಧೇಶ ವಿಟuಪ್ಪ ಪ್ರಭು ಮನವಿ ಸಲ್ಲಿಸಿದ್ದಾರೆ.

Advertisement

ಶಾಸಕರಿಗೆ ಪ್ರಸ್ತಾವನೆ
ಐದು ವರ್ಷದ ಮೊದಲು ಈ ರಸ್ತೆಯನ್ನು ಚತುಷ್ಪಥಗೊಳಿಸಲು 8 ಕೋಟಿ ರೂ. ಅನುದಾನವನ್ನು ಇಲಾಖೆಯ ಮೂಲಕ ಕೇಳಲಾಗಿತ್ತು. 2015ರಲ್ಲಿ 1.50 ಕೋಟಿ ರೂ. ಅನುದಾನವೂ ಲಭಿಸಿತ್ತು. ಆದರೆ ರಸ್ತೆ ಅಗಲಗೊಳಿಸಲು ಭೂಮಿ ಸ್ವಾಧೀನ ಸೇರಿದಂತೆ ಇತರ ಕೆಲಸಗಳಿಗೆ ಆ ಅನುದಾನ ಕಡಿಮೆಯಾಗಿದ್ದರಿಂದ ಡಾಮರು ಕಾಮಗಾರಿ ಮಾತ್ರ ಮಾಡಲಾಗಿತ್ತು. 2020ಕ್ಕೆ ಮುಂದಿನ ಅಭಿವೃದ್ಧಿ ಸಾಧ್ಯವಾಗುವುದರಿಂದ ಶಾಸಕರೂ ಪ್ರಸ್ತಾವನೆ ತೆಗೆದುಕೊಂಡಿದ್ದಾರೆ.
– ಪ್ರಮೋದ್‌ ಕುಮಾರ್‌
ಸಹಾಯಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

ಸಮನ್ವಯ ಸಭೆ ನಡೆಯಲಿ
ಅತಿ ಅಗತ್ಯವಾದ ರಸ್ತೆಯ ಚತುಷ್ಪಥ ಅಭಿವೃದ್ಧಿಗಾಗಿ ಶಾಸಕರು ಹಾಗೂ ಸಂಸದರ ನೇತೃತ್ವದಲ್ಲಿ ಇಲಾಖೆಗಳ ಸಮನ್ವಯದ ಸಭೆಯನ್ನು ನಡೆಸುವಂತೆ ಮನವಿ ಮಾಡಿದ್ದೇವೆ. ಉಪ್ಪಿನಂಗಡಿ ರಸ್ತೆಯ ಉಳಿಕೆ ಭಾಗ ಚತುಷ್ಪಥ ಅಭಿವೃದ್ಧಿಯಾಗುತ್ತಿರುವ ಸಂದರ್ಭದಲ್ಲಿ ಈ ಭಾಗವನ್ನೂ ಪರಿಗಣಿಸಬೇಕೆಂಬುದು ನಮ್ಮ ಬೇಡಿಕೆ.
– ರಾಧೇಶ ವಿಟ್ಟಪ್ಪ ಪ್ರಭು , ಬೊಳುವಾರು

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next