Advertisement

ರಾಜಕೀಯದ ಯಶಸ್ಸಿಗೆ ಸೂರ್ಯ ಸಿದ್ಧಿಬೇಕೇ ಬೇಕಾ?

02:24 PM Oct 14, 2017 | |

ಸೂರ್ಯನು ಸಿಂಹರಾಶಿಯ ಯಜಮಾನನಾಗಿದ್ದಾನೆ. ಕಾಲ ಪುರುಷನಿಗೆ ಸಿಂಹ ರಾಶಿಯು ಪೂರ್ವಪುಣ್ಯಸ್ಥಾನವಾಗಿದೆ. ಭಾವವಾಗಿದೆ. ಆದರೆ ಜಗತ್ಪಾಲಕನ  ಜನ್ಮಾಂತರದ ಪದರುಗಳು ಸಿಂಹರಾಶಿಯಲ್ಲಿ ಅಡಕ. ಸಿಂಹ ರಾಶಿ ಎಂದರೆ ಯಾರು? ನಿರ್ದಿಷ್ಟವಾಗಿ ಪ್ರಶ್ನೆಯನ್ನು ಧಾರ್ಮಿಕ ನೆಲೆಯಲ್ಲಿ ವಿವರಿಸಬಹುದು. 

Advertisement

ಆಧ್ಯಾತ್ಮಿಕ ಚಿಂತನೆಯಲ್ಲಿ ಒಂದು ಮಟ್ಟದ ಹೆಚ್ಚಿನ ತರ್ಕ ಹಾಗೂ ವಾದ ಮಂಡನೆಯ ಮೂಲಕ ನಿರೂಪಿಸಬಹುದು. ಆದರೆ ಜಗತ್ಪಾಲಕ ಶಬ್ದವನ್ನು ದೃಷ್ಟಾಂತದ  ಮೂಲಕ ಅಂದರೆ ನಮ್ಮ ಮನದೊಳಗಿನ ಮಂಥನದ ಮೂಲಕ ಪರಮೋತ್ಛ ಅರಿವಿನ ಮೂಲಕ ಗ್ರಹಿಸಬಹುದಾಗಿದೆ. ಜಗತ್ಪಾಲಕನಿಗೆ ರೂಪವಿಲ್ಲ, ಆಕಾರವಿಲ್ಲ.  ನಿರ್ಗುಣನೂ ನಿರ್ವಿಶೇಷನೂ ಆಗಿದ್ದಾನೆ ಎಂಬ ಪ್ರತಿಪಾದನೆ ಮಾಡುವಾಗಲೇ ಆಗಿದ್ದಾನೆ ಎಂಬುದನ್ನೂ ಗ್ರಹಿಸಬೇಕು.

ಯಾಕೆಂದರೆ ಈ ಶಕ್ತಿಯಲ್ಲಿ ಪುರುಷತ್ವವೂ,  ಸ್ತ್ರೀತ್ವದ ಪ್ರಕೃತಿ ಸ್ವರೂಪವೂ ಹಾಸು ಹೊಕ್ಕಾಗಿ ಸೇರಿಕೊಂಡಿದೆ. ಹೀಗಾಗಿ ಲಕ್ಷಗಟ್ಟಳೆ ವರ್ಷಗಳ ಹಿಂದೆ ಸ್ತ್ರೀ ಪುರುಷ ಎಂಬುದರ ಭೇದವಿರಲಿಲ್ಲ.  ನಸ  ಪುತ್ರರು, ಮಾನಸ ಪುತ್ರಿಯರು ಬ್ರಹ್ಮನಿಗೆ ಇದ್ದರು ಎಂಬ ಕತೆ ನಾವು ಕೇಳಿದ್ದೇವೆ. ನಾರದ, ಲಕ್ಷ್ಮೀ, ಭೃಗು ಮರ್ಹಷಿಯೂಸೇರಿದಂತೆ  ಇಂದು ನಾವೇನು ಸಪ್ತ ಮಹರ್ಷಿ ಮಂಡಲ ಎಂಬ ನಕ್ಷತ್ರಗಳ ಒಕ್ಕೂಟವನ್ನು ರಾತ್ರಿ ಹೊತ್ತು ಗಗನದ ವೇದಿಕೆಯಲ್ಲಿ ಗಮನಿಸುತ್ತೇವೆಯೋ,

ಅವು, ಎಂದರೆ ಸಪ್ತರ್ಷಿಗಳು ನಾರದ ವಿಶಾರದೆ ಮುಂತಾದವರು ಬ್ರಹ್ಮನ ಮಾನಸ ಸಂಕಲ್ಪ ಮಾತ್ರದಿಂದ ಜನಿಸಿದವರು. ಹಾಗಾದರೆ ಬ್ರಹ್ಮನ ಉದಯ ಹೇಗಾಯಿತು? ಮಾಯೆಯ ಫ‌ಲವಾದ ಸ್ಫೋಟದಿಂದ ಅಥವಾ ಅಗಾಧ ಶಕ್ತಿ ಸಂಚಯನ ತಂತಾನೇ ಆದ ಒಂದು ದಿವ್ಯ, ಅನೂಹ್ಯ, ಅನನ್ಯ ಚೇತೋಹಾರಿ  ಮಾಯೆಯಿಂದ ಸಂಭವಿಸಿತು. 

ತದನಂತರ ಮಾಯೆಯ ಮುಂಚೆ 
ಈ ಮೇಲಿನ ವಿವರಗಳನ್ನು ಗಮನಿಸುವುದಾದರೆ (ಆಧುನಿಕ ವಿಜ್ಞಾನ ಪ್ರತಿಪಾದಿಸುವ  ಬಿಗ್‌ಬ್ಯಾಂಗ್‌ ಥಿಯರಿ) ನಾವು ಭಾರತೀಯರ ಮಾಯೆಯ ಸಂಬಂಧಕ್ಕೆ ತಳುಕು ಹಾಕಿಕೊಂಡು ಉಂಟಾದ ಮಹಾಸ್ಫೋಟದಿಂದ ಎಂಬ ಕಥೆಯಂತೆ ಹೇಳಲ್ಪಟ್ಟ. ಆದರೆ ವೈಜ್ಞಾನಿಕವೇ ಆದ ರೀತಿಯಲ್ಲಿ ವಿಶ್ವದ ಹುಟ್ಟು ಸಂಭವಿಸಿತು ಎಂಬುದನ್ನು ನಂಬಬಹುದು.

Advertisement

ಆಧುನಿಕ ವಿಜ್ಞಾನ ಈ ಥಿಯರಿಯನ್ನು ನಾವು  ಹೇಳಿದ ಮಾಯೆಯ ಮೂಲಕವಾದ ಮಹಾಸ್ಫೋಟವನ್ನೇ ವಿಶ್ವದ ಹುಟ್ಟಿಗೆ ಆಧಾರವಾಗಿ ಬೆಳಕು ಚೆಲ್ಲುತ್ತದೆ. ಅಂದರೆ, ನಮ್ಮ ಮಹರ್ಷಿಗಳು ದೃಷ್ಟಾಂತದ ಮೂಲಕವಾಗಿ ಗ್ರಹಿಸಿದ್ದನ್ನು ಆಧುನಿಕ ವಿಜ್ಞಾನ ಸಿದ್ಧಾಂತದ ಮೂಲಕ ಹೇಳಲು ಪ್ರಯತ್ನಿಸುತ್ತಿದೆ. ನಾವು ಸೃಷ್ಟಿಯ ಪ್ರತಿ ಘಟ್ಟಗಳನ್ನೂ ಕತೆಯ, ಪುರಾಣಗಳ  ಮೂಲಕ ದಾಖಲಿಸಿ ಹೇಳಿದ್ದೇವೆ.

ಇಲ್ಲಿ ರಕ್ತ, ಮಾಂಸ, ಜೀನ್‌, ವರ್ಣಬೇಧ, ಜ್ಞಾನ ಕ್ಷಾತ್ರ, ಸಂಪತ್ತು, ಶ್ರಮ ಇತ್ಯಾದಿಗಳ ಬಗ್ಗೆ ಏಕಕೋಶ ಜೀವಿ ತನ್ನ  ಚಲನವನಗಳನ್ನು ಕಂಡುಕೊಳ್ಳುತ್ತಾ, ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳುವ ಸಸ್ಯಮೂಲಗಳ ಬಗ್ಗೆ ನಮ್ಮ ಭಾರತೀಯ ಮೀಮಾಂಸೆ ನೀರನ್ನು ವಿವಿಧ  ನೆಲೆಯಲ್ಲಿ ಹೇಳುತ್ತ ವಿಕಾಸವಾದವನ್ನು ಜೀವ ಶಾಸ್ತ್ರವನ್ನು ನಿಖರವಾಗಿ ಪ್ರತಿಪಾದಿಸುತ್ತದೆ.

ಸಸ್ಯಗಳು ಮರಗಿಡಗಳು ತಮ್ಮೊಳಗಿನ ಸಾರದಿಂದ ಬಹುಕೋಶ  ಜೀವಿಗಳನ್ನು ಅಸ್ತಿತ್ವಕ್ಕೆ ತಂದ ಧಾನ್ಯವನ್ನು ಕುಲಗೋತ್ರ ಜೀವಕ್ಕೆ ಮುಖ್ಯವಾಗಿ ಒಂದೇ ಎಂಬಂತೆ ಕಾಣುವ ರಕ್ತ ಹಲವು ಬಗೆಯಲ್ಲಿ ವೈವಿಧ್ಯ ಗುಂಪುಗಳಾಗಿರುವ ಸೂಕ್ಷ್ಮವನ್ನು ನಮ್ಮ ಪುರಾಣಗಳು ಬಹುದೊಡ್ಡ ಅರಿವನ್ನು ಬಿಚ್ಚಿಡುತ್ತದೆ. ಆಧುನಿಕ ವಿಜ್ಞಾನ ರಕ್ತದಲ್ಲಿನ ಪ್ರಬೇಧಗಳನ್ನು ಬಿಚ್ಚಿಟ್ಟಿದ್ದು ಇತ್ತೀಚೆಗೆ. 

ನಿಮ್ಮ ರಕ್ತದ ಗ್ರೂಪ್‌ ಯಾವುದು ಎಂಬುದನ್ನು ನಿಖರವಾಗಿ ತಿಳಿಸವ ಸೂಕ್ಷ್ಮಗಳನ್ನು ನಮ್ಮ ಪುರಾಣಗಳು ಧ್ವನಿ ಎತ್ತಿ ಹೇಳದಿದ್ದರೂ, ರಕ್ತಗಳಲ್ಲಿನ  ಪ್ರಬೇಧಗಳನ್ನು ಜೀನ್ಸ್‌ ಡಿಎನ್‌ ಎ ಇತ್ಯಾದಿ ಘಟಕಗಳನ್ನು ವಿಂಗಡಿಸಿ ಹೇಳಿದೆ. ನಮ್ಮ ರಕ್ತದ ಮೂಲಕವಾಗಿ ಸಮಾಜದ ಸೂಕ್ಷ್ಮ ಒಳಿತುಗಳಿಗೆ ಹೇಗೆ ಪಾಲುದಾರರಾಗಬಹುದು. ಪಾಲುದಾರಿಕೆಯ ಮೂಲಕವಾಗಿ ಲಕ್ಷ್ಮೀ ಪ್ರಸನ್ನತೆಯನ್ನು ಪಡೆದು ಧನಸಂಗ್ರಹ ಮಾಡಬಹುದೆಂಬುದಕ್ಕೆ ಇವು ವಿವರ  ನೀಡಿವೆ. 

ರಾಜಕಾರಣಿಗಳಿಗೆ ಸೂರ್ಯನ ಬಲ ಕ್ಷೇಮವೇ 
ಹೌದು, ಸೂರ್ಯನಿಂದ ರಾಜಕಾರಣಿಗಳೀಗೆ ಶಕ್ತಿ ಸಿಗುತ್ತದೆ. ವಿಶ್ವವನ್ನು ಸೃಷ್ಟಿಸಿದ ವಿಶ್ವತೋಮುಖನಿಗೆ  ಸೂರ್ಯನ ಕುರಿತಾದ ಅಭೂತಪೂರ್ವ ಒಲವು ಏನೆಂಬುದನ್ನು ಬಹು ವಿಸ್ತಾರವಾಗಿ ವಿಷ್ಣುಪುರಾಣದಲ್ಲಿ ಉಲ್ಲೇಖೀಸಲಾಗಿದೆ. ಸೂರ್ಯನು ಸಿಂಹರಾಶಿಯ ಯಜಮಾನನಾಗಿ ಮಖಾ, ಪುಬ್ಟಾ ಹಾಗೂ ಉತ್ತರಾ ನಕ್ಷತ್ರಗಳನ್ನು ಒಳಗೊಂಡಿದ್ದಾನೆ.  

ಈ ರಾಶಿಗೆ ಮಖಾ ನಕ್ಷತ್ರದ ಮೂಲಕವಾಗಿ  ರಾಜಸೂಯಯಾಗದ ಪುಣ್ಯವೂ ಪುಬ್ಟಾ ನಕ್ಷತ್ರದ ಮೂಲಕ ಕ್ಷಾತ್ರ, ಉತ್ತರಾ ನಕ್ಷತ್ರದ ಮೂಲಕವಾಗಿ ಧೀಃ ಶಕ್ತಿಯ ಕುಂಭಗಳು ಒಗ್ಗೂಡುವುದರಿಂದ  ರಾಜಾಭಿಷೇಕಕ್ಕೆ ಬೇಕಾದ ಅರ್ಥ ಸಿಗುತ್ತದೆ. ಸ್ವಯಂ ಏವ ಮೃಗೇಂದ್ರತಾ ಎಂಬ ಮಾತೊಂದಿದೆ. ಸಂಸ್ಕೃತದಲ್ಲಿ ಕಾತ್ಯ ಮಹರ್ಷಿಗಳ ಮಗಳು ಕಾತ್ಯಾಯಿನಿ  ಜ್ಞಾನ ಕ್ಷಾತ್ರ ಹಾಗೂ ಅಗ್ನಿ ಯ ದಿವ್ಯತೆಗಳನ್ನು ಒಳಗೊಂಡವಳಾಗಿ ಸಿಂಹದ ಮೇಲೆ ರಾರಾಜಿಸುತ್ತಾಳೆ.

ಅಸುರ ಸಂಹಾರದಲ್ಲಿ ಚಾಮುಂಡಿಯಾದ ದುರ್ಗೆ  ಇದೇ ಕಾತ್ಯಾಯಾನಿಯಾಗಿದ್ದಾಳೆ. ಮಹಿಷಾಸುರನನ್ನು ಸೀಳಿದ ಶಕ್ತಿ ಸಿಂಹದ್ದು. ಮುಂದಿನದನ್ನು ತಾಯಿ ದುರ್ಗಾ ನೆರವೇರಿಸಿ ಮಹಿಷನ ಕತ್ತು ಕತ್ತರಿಸಿ  ಅಹಂಕಾರದ ಕತ್ತನ್ನು ಛೇದಿಸಿದಳು.

ಹೀಗಾಗಿ ರಾಜಕಾರಣಿಗಳಿಗೆ ಸೂರ್ಯನ ಸಿದ್ಧಿ ದೊರಕಿದರೆ ವಿದೇಯ ಕಾರಣದಿಂದ ಸಿದ್ಧಿ ಶ್ರದ್ಧೆ, ಮೇಧಾ ಯಶಸ್ಸು ಪ್ರಜ್ಞೆ  ವಿದ್ಯೆ, ಬುದ್ಧಿ, ಧನಸಂಪತ್ತು, ಬಲ, ಆಯಸ್ಸು, ತೇಜಸ್ಸು ಆರೋಗ್ಯಗಳೆಲ್ಲ ಒಗ್ಗೂಡುತ್ತದೆ. ಈ ಕಾರಣದಿಂದ ನಿಮ್ಮ ವ್ಯಕ್ತಿತ್ವ ಸಂವಹನದ ವಿಚಾರವಾಗಿ ಮಾತಿನ  ಶಕ್ತಿ ಧೈರ್ಯ ಪ್ರಜ್ಞೆ ಪೂರ್ವ ಜನ್ಮದ ಪುಣ್ಯ ವಿಶೇಷಭಾಗ್ಯ ಕೆಲಸದಲ್ಲಿ ಪರಿಶ್ರಮಗಳನ್ನು ಒಗ್ಗೂಡಿಸಿಕೊಳ್ಳುವುದಕ್ಕೆ ಸಹಾಯವಾಗುತ್ತದೆ. ಆನರನ್ನು ತಲುಪುವುದು ಸುಲಭದ ಮಾತಲ್ಲ.

ಆದರೆ ರಾಜಕಾರಣಿಗಳಿಗೆ ಸೂರ್ಯನು ಇದನ್ನು  ಸರಳಗೊಳಿಸುತ್ತಾನೆ. ನಿಮ್ಮ ಅದೃಷ್ಟದ ಸಂಖ್ಯೆ ಅಥವಾ ಅಂಕೆಯನ್ನು ಕುಂಡಲಿಯ ಆಧಾರದಲ್ಲಿ ಪರಿಶೀಲಿಸಿ ಸೂರ್ಯನ ನಿಟ್ಟಿನಿಂದಲೂ ಅದು ದೃಢೀಕರಿಸಿಕೊಳ್ಳಬೇಕು. ಮಾತು ಸುಖ ಭಾಗ್ಯ ಲಾಭಗಳಿಂದ ವ್ಯಕ್ತಿತ್ವದ ಸಿದ್ಧಿ ಸಿಗಬೇಕು.

ಸೂರ್ಯನ ಸಿದ್ಧಿ ಸಿಗಲು ಅದೃಷ್ಟದ ಸಂಖ್ಯೆ ಅಂತೆಯೇ ಹೆಸರಿನ  ಸಂಯೋಜನೆ ದಾರಿ ತೋರಿಸಬೇಕು. ಶನೈಶ್ಚರ ಸೂರ್ಯ ಕುಜರು ಕ್ಷೀಣ ಚಂದ್ರನ ಬಾಧೆಯಿಂದ ಬಳಲಿರಬಾರದು. ಶಕ್ತಿಯನ್ನು ಕುಂದಿಸುವ ಅಕ್ಷರಗಳನ್ನು ಒಂದು ಹದ್ದುಬಸ್ತಿನಲ್ಲಿ ಇಡಬೇಕು.

ಮಾಣಿಕ್ಯ, ಅದೃಷ್ಟ ಸಂಖ್ಯೆ, ಅದೃಷ್ಟ ಹೆಸರು ಮತ್ತು ಸೂರ್ಯ
ಎಲ್ಲರ ಜಾತಕದಲ್ಲೂ ಸೂರ್ಯ ಪ್ರಬಲ ಎಂದು ಹೇಳಲಾಗದು. ಇತ್ತೀಚೆಗೆ ತೊಂದರೆ ಗೊಳಗಾದ ಮಂತ್ರಿಗಳೊಬ್ಬರು ಸೂರ್ಯನ ಸಿದ್ಧಿಯ ಕೊರತೆ ಎದುರಾಗಿಯೇ  ಪ್ರಾಬಲ್ಯದ ಶಿಖರದಿಂದ ರಸಾತಳಕ್ಕೆ ಇಳಿದರು. ಒಬ್ಬರು ಅನಿರೀಕ್ಷಿತ ಶಕ್ತಿ ಸಂಚಯನವಾಗಿದ್ದರಿಂದ ಕನಸಿನಲ್ಲಿ ಊಹಿಸಲಾಗದ ಅಧಿಕಾರದ  ಸ್ಥಾನ ವಹಿಸಿಕೊಂಡರು.

ಆದರೂ ಇವರ ಜಾತಕದ ಸೂರ್ಯನ ಬಲಹೀನತೆಯಿಂದ ವೃಥಾ ಮಾತನಾಡುವಂತೆ ಮಾಡಿ, ಅದೃಷ್ಟದ ಬಟ್ಟಲನ್ನು ಖಾಲಿ  ಮಾಡಿಸುತ್ತಾನೆ. ಕುಟುಂಬ ವಿಪ್ಲವ ಶಕುನ ಸವಕಳಿ ತಲೆದೋರಿ ಅಮೂಲ್ಯವಾದುದ್ದನ್ನು ಕಳೆದುಕೊಂಡರು. ಮತ್ತೂ ಓರ್ವ ಪ್ರಬಲ ರಾಜಕಾರಣಿ ಲೈಂಗಿಕ ಅಪವಾದ ಎದುರಿಸುವಂತಾಗಿ, ಖುಲ್ಲ ಖುಲ್ಲಂ ಸರಳ ನೇರ ದಿಟ್ಟವಾಗಿದ್ದ ದಾರಿಯನ್ನು  ಜಟಿಲವಾಗಿಸಿದ್ದ. 

* ಅನಂತಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next