ಉಪಚುನಾವಣೆ ನಡೆದು ತಿಂಗಳು ಕಳೆಯುತ್ತಾ ಬಂದರೂ ರಾಜ್ಯ ಬಿಜೆಪಿ ಸರ್ಕಾರ ಸಂಪುಟ ವಿಸ್ತರಣೆ ಮಾಡಲು ಮೀನಾಮೇಷ ಎಣಿಸುತ್ತಿದೆ. ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳ ಕುಂಠಿತವಾಗಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ “ಕರ್ನಾಟಕದಲ್ಲಿನ ಆಡಳಿತ ಯಂತ್ರ ಚುರುಕುಗೊಳ್ಳಲು ಶೀಘ್ರ ಸಚಿವ ಸಂಪುಟ ವಿಸ್ತರಣೆ ಆಗಬೇಕಿದೆಯೇ ? ಎಂಬ ಪ್ರೆಶ್ನೆಯನ್ನು ಉದಯವಾಣಿ ಕೇಳಿತ್ತು. ಅದಕ್ಕೆ ಬಂದ ಪ್ರತಿಕ್ರಿಯೆಗಳು ಇಂತಿವೆ.
ಪೂರ್ಣ ಪ್ರಜ್ಞಾ: ಹೌದು, ಖಂಡಿತವಾಗಿಯು ಸಚಿವ ಸಂಪುಟ ವಿಸ್ತರಣೆ ಆಗಬೇಕು. ಮತ ಹಾಕುವುದು ಎಲ್ಲರ ಹಕ್ಕು ಎನ್ನುತ್ತೇವೆ. ಆದರೆ ಅದರಿಂದ ಆರಿಸಲ್ಪಟ್ಟವರನ್ನ, ಸಮಂಜಸವಾದ ಖಾತೆ ಹಂಚಿಕೆ ಮಾಡಿ, ಆಡಳಿತ ವನ್ನ ಚುರುಕುಗೊಳಿಸದಿದ್ದರೆ, ಪ್ರಜೆಗಳ ಮತಕ್ಕೆಲ್ಲಿದೆ ಬೆಲೆ?
ಮಹಾದೇವ ಗೌಡ: ಆಡಳಿತ ಚುರಕು ಮಾಡಲು ಸಚಿವ ಸಂಪುಟ ರಚನೆ ಮಾಡಬೇಕು .ಮೂಲ ಬಿಜೆಪಿಗರಲ್ಲಿ ಆಸಮಧಾನ ಕಂಡುಬಂದರೆ ಹೊಸದಾಗಿ ಆಯ್ಕೆಯಾದ ಸಚಿವರನ್ನು ಮಂತ್ರಿಗಳನ್ನ ಮಾಡುವುದು ಅಗತ್ಯ. ವಿಧಾನಪರಿಷತ್ತಿನ ಕೆಲ ಸದಸೄರನ್ನ ರಾಜಿನಾಮೆ ಕೊಡಿಸಿ, ಉಪಚುನಾವಣೆಯಲ್ಲಿ ಸೋತಿರಿರುವವರನ್ನು ಮೆಲ್ಮನೆಗೆ ಆಯ್ಕೆ ಮಾಡಿ ಮಂತ್ರಿಯನ್ನಾಗಿ ಮಾಡುವುದು ಅಭಿವೃದ್ದಿಯ ದೃಷ್ಟಿಯಿಂದ ಒಳಿತು. ನಿಗಮಮಂಡಳಿಗಳ ಅದೄಕ್ಷರು ಮತ್ತು ನಿರ್ದೇಶಕರುಗಳನ್ನು 1 ವರ್ಷದ ಸೂತ್ರದಡಿಯಲ್ಲಿ ತಕ್ಷಣದಿಂದಲೆ ಯಾಕೆ ಆಯ್ಕೆ ಮಾಡಬೇಕು.
ಶ್ರೀಧರ್ ಉಡುಪ: ಆಡಳಿತ ಯಂತ್ರ ಚುರುಕುಗೊಳ್ಳುವುದು ಸಂಪುಟ ವಿಸ್ತರಣೆಗಿಂತಲೂ ಆಯಾ ಸಚಿವರ ದಕ್ಷತೆ ಹಾಗೂ ಪ್ರಾಮಾಣಿಕತೆ ಮೇಲೆ ಅವಲಂಬಿತವಾಗಿದೆ. ಸಂಪುಟ ವಿಸ್ತರಣೆಯಲ್ಲಿ ಭ್ರಷ್ಟರಿಗೆ ಮಣೆ ಹಾಕಿದರೆ ಆಡಳಿತ ಯಂತ್ರ ಹಳಿ ತಪ್ಪುವುದು ಖಂಡಿತ.