Advertisement

ಕಾನೂನು ಪ್ರತಿಯೊಬ್ಬರಿಗೂ ಅವಶ್ಯ

01:22 PM Apr 05, 2017 | |

ಮಾಯಕೊಂಡ: ಕಾನೂನಿನ ಬಗ್ಗೆ ಸಾಕಷ್ಟು ಅರಿವು ಇಲ್ಲದೇ ಸಮಾಜದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ನ್ಯಾಯಾಧಿಧೀಶರಾದ ಸುವರ್ಣಾ ಕೆ.ಮಿರ್ಜಿ ಅಭಿಪ್ರಾಯಪಟ್ಟರು. ಗ್ರಾಮದ ವಿವೇಕಾನಂದ ವೃದ್ಧಾಶ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಕಾನೂನು ಪ್ರತಿಯೊಬ್ಬ ಪ್ರಜೆಗೂ ಅವಶ್ಯಕ. ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ವಿಚಾರವಾದ ಕೇಸುಗಳು ಹೆಚ್ಚುತ್ತಿವೆ. ಕಾನೂನಿನ ಬಗ್ಗೆ ಅರಿವು ಹೊಂದಬೇಕು. ಪ್ರತಿಯೊಬ್ಬರೂ ತಮ್ಮ ಆಸ್ತಿಯ ಮೂಲ ದಾಖಲೆಗಳನ್ನು ಹೊಂದಿರುವುದು ಸೂಕ್ತ.

ಕಾನೂನಾತ್ಮಕವಾದ ಸಮಸ್ಯೆಗಳಿದ್ದರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸಲಹೆಗೆ ವಕೀಲರನ್ನು ನೇಮಿಸಲಾಗುವುದು. ಮಕ್ಕಳಿಗೂ ಉಚಿತ ಕಾನೂನು ಸೇವೆಗೆ ಅವಕಾಶವಿದೆ. ನಾಗರಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. 

ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರೀಕ ಸಬಲೀಕರಣ ಇಲಾಖೆಯ ಶಶಿಧರ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಿರಿಯರ ಮತ್ತು ಕಿರಿಯರ ನಡುವಿನ ಸಂಬಂಧಗಳು ಹದಗೆಡುತ್ತಿರುವುದು ವಿಷಾದನೀಯ ಸಂಗತಿ. ಪ್ರತಿಯೊಬ್ಬ ಮನುಷ್ಯನಿಗೆ ಸಂಪತ್ತು ಮುಖ್ಯವಲ್ಲ, ಸಂಸ್ಕಾರ ಮುಖ್ಯ. ಮಾನವೀಯತೆ ಮರೆಯಾಗಿರುವುದರಿಂದ ವೃದ್ಧಾಶ್ರಮಗಳು ಹೆಚ್ಚಾಗಲು ಕಾರಣವಾಗಿದೆ ಎಂದರು.

ರೈತ ಮುಖಂಡ ಎಂ.ಎಸ್‌.ಕೆ. ಶಾಸ್ತ್ರಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಕೆ.ಆರ್‌. ಲಕ್ಷಣ್ಣ ಅಧ್ಯಕ್ಷತೆ ವಹಿಸಿದ್ದರು. ಗಾಯತ್ರಿ ಗ್ರಾಮಿಣ  ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮರಿಯಚಾರ್‌ ನಿರೂಪಿಸಿದರು. ಗ್ರಾಪಂ ಸದಸ್ಯರಾದ ಗಂಗಾಧರಪ್ಪ, ಸಂಡೂರ್‌ ರಾಜಶೇಖರ್‌, ನೀಲಪ್ಪ ರಾಮಚಂದ್ರಪ್ಪ, ಪುಟ್ಟಣ್ಣ, ಶೇಷಣ್ಣ,  ರಾಜು ಇತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next